ಇನ್ನೆರಡು ದಿನಗಳಲ್ಲಿ ಸೂರ್ಯನಂತೆ ಬೆಳುವುದು ಈ ರಾಶಿಯವರ ಅದೃಷ್ಟ : ಒಲಿಯುವುದು ಪದೋನ್ನತಿ ಭಾಗ್ಯ

ಇನ್ನೆರಡು ದಿನಗಳಲ್ಲಿ ಸೂರ್ಯನಂತೆ ಬೆಳುವುದು ಈ ರಾಶಿಯವರ ಅದೃಷ್ಟ : ಒಲಿಯುವುದು ಪದೋನ್ನತಿ ಭಾಗ್ಯ

ಇನ್ನೆರಡು ದಿನಗಳಲ್ಲಿ ಸೂರ್ಯನಂತೆ ಬೆಳುವುದು ಈ ರಾಶಿಯವರ ಅದೃಷ್ಟ : ಒಲಿಯುವುದು ಪದೋನ್ನತಿ ಭಾಗ್ಯ

ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿದಾಗಲೆಲ್ಲಾ, ಅದು ಎಲ್ಲಾ ಹನ್ನೆರಡು ರಾಶಿಯವರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಗ್ರಹಗಳ ರಾಜನಾದ ಸೂರ್ಯ ಇನ್ನೆರಡು ದಿನಗಳಲ್ಲಿ ಅಂದರೆ ಆಗಸ್ಟ್ ೧೭ಕ್ಕೆ ತನ್ನದೇ ಅಧಿಪತ್ಯದ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನು ತನ್ನದೇ ಆದ ರಾಶಿಯನ್ನು ಪ್ರವೇಶಿಸುವುದು ಅತ್ಯಂತ ಪ್ರಭಾವಶಾಲಿ ಎಂದು ಹೇಳಲಾಗುತ್ತದೆ. ಇದು ಅನೇಕ ರಾಶಿಯವರ ಜೀವನದಲ್ಲಿ ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯುವುದು.

ಮೇಷ ರಾಶಿ (Aries) : ಸೂರ್ಯನ ಈ ಸಂಚಾರವು ಈ ರಾಶಿಯ ಐದನೇ ಮನೆಯಲ್ಲಿ ನಡೆಯುತ್ತದೆ. ಈ ಸಮಯ ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲಕರವಾಗಿರುವುದು. ಉದ್ಯೋಗದಲ್ಲಿರುವವರಿಗೆ ಹೊಸ ಜವಾಬ್ದಾರಿಗಳು ಸಿಗಬಹುದು.ಪ್ರೇಮ ಸಂಬಂಧಗಳು ಹೆಚ್ಚು ಸಿಹಿಯಾಗಿರುವುದು. ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು.

ವೃಷಭ ರಾಶಿ (Taurus): ಈ ಸಂಚಾರವು ವೃಷಭ ರಾಶಿಯ ನಾಲ್ಕನೇ ಮನೆಯಲ್ಲಿ ನಡೆಯುತ್ತದೆ. ಭೂಮಿ, ಕಟ್ಟಡ, ವಾಹನ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ದೊಡ್ಡ ಮಟ್ಟದ ಲಾಭವಾಗುವ ಸಾಧ್ಯತೆ ಇದೆ. ಕುಟುಂಬ ಜೀವನವು ಸಂತೋಷವಾರುವುದು. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಮಿಥುನ ರಾಶಿ (Gemini): ಈ ಅವಧಿಯಲ್ಲಿ, ನಿಮ್ಮ ಧೈರ್ಯ ಹೆಚ್ಚಾಗುವುದು. ನಿಮ್ಮ ಕಿರಿಯ ಸಹೋದರ ಸಹೋದರಿಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ಕಚೇರಿಯಲ್ಲಿ ನಿಮ್ಮ ಕೆಲಸ ಮತ್ತು ಪ್ರಯತ್ನಗಳನ್ನು ನಿಮ್ಮ ಮೇಲಧಿಕಾರಿಗಳು ಮೆಚ್ಚುತ್ತಾರೆ.

ಕರ್ಕಾಟಕ ರಾಶಿ (Cancer): ಸೂರ್ಯನ ಈ ಸಂಚಾರವು ನಿಮ್ಮ ಎರಡನೇ ಮನೆಯಲ್ಲಿ ನಡೆಯುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ವುದು. ಸಂಪತ್ತನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಮಾತು ಹೆಚ್ಚಾಗುವುದು. ಅದು ಜನರ ಮೇಲೆ ಪ್ರಭಾವ ಬೀರುವುದು. ಕುಟುಂಬ ವ್ಯವಹಾರದಿಂದ ಲಾಭವಾಗುವುದು.

ಸಿಂಹ ರಾಶಿ (Leo): ಸೂರ್ಯನು ನಿಮ್ಮ ರಾಶಿಯನ್ನು ಪ್ರವೇಶಿಸುತ್ತಿದ್ದು, ನಿಮ್ಮ ವ್ಯಕ್ತಿತ್ವದ ಮೋಡಿ ಮತ್ತು ಆತ್ಮವಿಶ್ವಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು. ಉದ್ಯೋಗಿಗಳಿಗೆ ಬಡ್ತಿ ಸಿಗುವ ಮೂಲಕ ಹೊಸ ಜವಾಬ್ದಾರಿ ಹೆಗಲೇರುವುದು. ಹೊಸ ಯೋಜನೆಗಳು ಮತ್ತು ವ್ಯವಹಾರ ವಿಸ್ತರಣೆಗೆ ಉತ್ತಮ ಅವಕಾಶಗಳು ಸಿಗುವುದು.

ಕನ್ಯಾ ರಾಶಿ (Virgo): ವಿದೇಶ ಪ್ರಯಾಣದ ಯೋಗವಿದೆ. ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಖರ್ಚು ವೆಚ್ಚಗಳಲ್ಲಿ ಸ್ವಲ್ಪ ಹೆಚ್ಚಳವಾಗಬಹುದು. ನಿಮ್ಮ ಬಜೆಟ್ ಬಗ್ಗೆ ಗಮನವಿರಲಿ. ನ್ಯಾಯಾಲಯದ ಪ್ರಕರಣಗಳಲ್ಲಿ ಪರಿಹಾರ ಸಿಗುವುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ತುಲಾ ರಾಶಿ (Libra): ಈ ಸಂಚಾರವು ತುಲಾ ರಾಶಿಯವರಿಗೆ ಹೊಸ ಆದಾಯ ಮತ್ತು ಲಾಭದ ಮೂಲಗಳನ್ನು ಸೃಷ್ಟಿಸಬಹುದು. ಬಹಳ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಚುರುಕಾಗುವುದು. ವೃತ್ತಿಜೀವನದಲ್ಲಿ ಬಡ್ತಿ ಅಥವಾ ದೊಡ್ಡ ಯೋಜನೆಯ ಜವಾಬ್ದಾರಿ ಸಿಗುವುದು. ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ.

ವೃಶ್ಚಿಕ ರಾಶಿ (Scorpio):ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಪ್ರತಿಫಲ ದೊರೆಯುವುದು. ಉನ್ನತ ಹುದ್ದೆ ಅಥವಾ ಹೊಸ ಜವಾಬ್ದಾರಿ ಪಡೆದಂತೆ ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುವುದು. ಸರ್ಕಾರಿ ಅಥವಾ ಆಡಳಿತ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವರಿಗೆ ವಿಶೇಷ ಪ್ರಯೋಜನಗಳಾಗುವುದು.

ಧನು ರಾಶಿ (Sagitarius) : ಅದೃಷ್ಟ ಸಂಪೂರ್ಣ ನಿಮ್ಮ ಜೊತೆ ಇರುವುದು. ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಇದು ತುಂಬಾ ಒಳ್ಳೆಯ ಸಮಯ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು.ದೂರದ ಊರಿಗೆ ಪ್ರಯಾಣ ಬೆಳೆಸುವಿರಿ.

ಮಕರ ರಾಶಿ (Capricorn) : ನೀವು ಈ ಸಂಚಾರವು ನಿಮಗೆ ಸ್ವಲ್ಪ ಎಚ್ಚರಿಕೆಯ ಅಗತ್ಯವಿರಬಹುದು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಹಠಾತ್ ಆರ್ಥಿಕ ಲಾಭಗಳು ಸಾಧ್ಯ, ಆದರೆ ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ತಪ್ಪಿಸಿ.

ಕುಂಭ ರಾಶಿ (Aquarius) : ವೈವಾಹಿಕ ಜೀವನದಲ್ಲಿ ಏರಿಳಿತಗಳಿತವಾಗಬಹುದು. ಆದ್ದರಿಂದ ಸಂಗಾತಿಯ ಭಾವನೆಗಳನ್ನು ಗೌರವಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ.

ಮೀನ ರಾಶಿ (Pisces): ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಹಳೆಯ ಸಾಲದಿಂದ ಮುಕ್ತಿ ಸಿಗುವುದು. ಕಾಡುತ್ತಿರುವ ಅನಾರೋಗ್ಯದಿಂದ ಪರಿಹಾರ ಸಿಗುವುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ