ಶ್ರಾವಣ ಮಾಸ ಆರಂಭದಲ್ಲಿಯೇ ಈ ರಾಶಿಯವರಿಗೆ ಎರಡೆರಡು ರಾಜಯೋಗ:ಕೈತುಂಬಾ ಹಣ, ಹೆಚ್ಚಲಿದೆ ಐಶ್ವರ್ಯ!

ಶ್ರಾವಣ ಮಾಸ ಆರಂಭದಲ್ಲಿಯೇ ಈ ರಾಶಿಯವರಿಗೆ ಎರಡೆರಡು ರಾಜಯೋಗ:ಕೈತುಂಬಾ ಹಣ, ಹೆಚ್ಚಲಿದೆ ಐಶ್ವರ್ಯ!

ಶ್ರಾವಣ ಮಾಸ ಆರಂಭದಲ್ಲಿಯೇ ಈ ರಾಶಿಯವರಿಗೆ ಎರಡೆರಡು ರಾಜಯೋಗ:ಕೈತುಂಬಾ ಹಣ, ಹೆಚ್ಚಲಿದೆ ಐಶ್ವರ್ಯ!

ಶ್ರಾವಣ ಮಾಸ ಆರಂಭವಾಗಿದೆ. ಈ ಬಾರಿ ಶ್ರಾವಣ ಮಾಸ ಕೆಲವು ರಾಜಯೋಗ ಮತ್ತು ಶುಭ ಯೋಗಗಳೊಂದಿಗೆ ಆರಂಭವಾಗಿದೆ. ಕರ್ಕಾಟಕ ರಾಶಿಯಲ್ಲಿ, ಸೂರ್ಯ, ಬುಧ ಮತ್ತು ಗುರುಗಳ ಅಪರೂಪದ ಸಂಯೋಜನೆಯು ಪ್ರಬಲವಾದ ತ್ರಿಗ್ರಹಿ ಯೋಗವನ್ನು ರೂಪಿಸುತ್ತಿದೆ. ಮತ್ತೊಂದೆಡೆ, ಪಂಚಾಂಗ ಲೆಕ್ಕಾಚಾರಗಳ ಪ್ರಕಾರ ಮಂಗಳ ಗ್ರಹವು ಮಿಥುನ ರಾಶಿಯಲ್ಲಿ, ಶುಕ್ರ ಗ್ರಹವು ಕನ್ಯಾ ರಾಶಿಯಲ್ಲಿ, ರಾಹು ಕುಂಭ ರಾಶಿಯಲ್ಲಿ ಮತ್ತು ಶನಿಯು ಮೀನ ರಾಶಿಯಲ್ಲಿ ಸಂಚಾರ ಮಾಡ್ತಾ ಇದ್ದಾರೆ. ಈ ಎಲ್ಲಾ ಗ್ರಹಗಳ ಚಲನೆಯು, ಶಕ್ತಿಶಾಲಿ ಗಜಲಕ್ಷ್ಮಿ ಮತ್ತು ಬುಧಾದಿತ್ಯ ರಾಜ ಯೋಗಗಳು ರೂಪುಗೊಳ್ಳುವುದಕ್ಕೆ ಕಾರಣವಾಗ್ತಿದೆ.

ಮೇಷ ರಾಶಿ (Aries): ತ್ರಿಗ್ರಹಿ ಮತ್ತು ಗಜಲಕ್ಷ್ಮಿ ಯೋಗದ ಪ್ರಭಾವದಿಂದ, ಮೇಷ ರಾಶಿಯವರಿಗೆ ಆರ್ಥಿಕ ಲಾಭವಾಗುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ವೃತ್ತಿಪರ ಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗುತ್ತವೆ. ಆದಾಯದ ಮೂಲಗಳು ಹೆಚ್ಚಾಗುವುದು. ಸ್ಪಷ್ಟ ಯೋಜನೆಯೊಂದಿಗೆ ಹೂಡಿಕೆ ಮಾಡಿದರೆ ಲಾಭವಾಗುವುದು.

ವೃಷಭ ರಾಶಿ (Taurus): ಗ್ರಹಗಳ ಅನುಕೂಲಕರ ಸ್ಥಾನಗಳಿಂದಾಗಿ, ಐಷಾರಾಮಿ ಮತ್ತು ಕುಟುಂಬ ಸೌಕರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಶುಭ ಫಲ ಸಿಗುವುದು. ವ್ಯಾಪಾರ ವಹಿವಾಟುಗಳಲ್ಲಿ ಉತ್ತಮ ಬೆಳವಣಿಗೆಯಾಗುವುದು. ಅನಗತ್ಯ ಖರ್ಚುಗಳನ್ನು ನಿಯಂತ್ರಣದಲ್ಲಿಕೊಂಡರೆ ಒಳ್ಳೆಯದು. ಭಾವನೆಗಳಿಗೆ ಕಟ್ಟುಬಿದ್ದು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ.

ಮಿಥುನ ರಾಶಿ (Gemini): ಈ ಶ್ರಾವಣ ಮಾಸದಲ್ಲಿ ಅದ್ಭುತ ಶಕ್ತಿ ಮತ್ತು ಉತ್ಸಾಹದಿಂದಲೇ ಇರು ಇರುವಿರಿ. ವೃತ್ತಿಜೀವನದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ಉನ್ನತ ಸ್ಥಾನಮಾನ ತಂದುಕೊಡುವುದು. ಹೊಸ ವಿಷಯಗಳತ್ತ ಗಮನಹರಿಸುವುದು ಉತ್ತಮ. ಕೋಪದ ಕೈಗೆ ಬುದ್ದಿ ಕೊಡಬೇಡಿ. ತಾಳ್ಮೆಯಿಂದ ಇದ್ದರೆ ಲಾಭ ಹೆಚ್ಚು.

ಕರ್ಕಾಟಕ ರಾಶಿ (Cancer) : ತ್ರಿಗ್ರಹಿ ಯೋಗದಿಂದ ನಿಮಗೆ ನೇರ ಪ್ರಯೋಜನವಾಗುವುದು. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಯಶಸ್ಸು ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವಿರಿ. ತಮ್ಮ ಕುಟುಂಬ ಮತ್ತು ಸಂಬಂಧಗಳ ಬಗ್ಗೆ ದೀರ್ಘಾವಧಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು.

ಸಿಂಹ ರಾಶಿ (Leo) : ನಿಮ್ಮ ಗೌರವ ಹೆಚ್ಚಾಗುವುದು. ಬಾಕಿ ಇರುವ ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವುದು. ಉದ್ಯೋಗಿಗಳಿಗೆ ಬಡ್ತಿಗೆ ಉತ್ತಮ ಅವಕಾಶವಿದೆ. ಶ್ರಾವಣ ಮಾಸವಿಡೀ ಸಂತೋಷದಿಂದ ಕೂಡಿರುವುದು. ಸ್ವಲ್ಪ ಸಮಯದಿಂದ ಕಾಡುತ್ತಿರುವ ಆರ್ಥಿಕ ಸಮಸ್ಯೆಗಳು ಬಗೆಹರಿಯುವುದು.

ಕನ್ಯಾ ರಾಶಿ (Virgo) : ಕಚೇರಿಯಲ್ಲಿ ಬಹಳ ಅನುಕೂಲಕರ ವಾತಾವರಣವಿರುವುದು. ಕಡಿಮೆ ಶ್ರಮಪಟ್ಟರೂ ದೊಡ್ಡಮಟ್ಟದ ಯಶಸ್ಸು ಸಿಗುವುದು. ಹಣದ ವಿಚಾರದಲ್ಲಿಯೂ ಸಮಯ ಉತ್ತಮವಾಗಿರುವುದು. ಉದ್ಯಮಿಗಳಿಗೆ ಅನಿರೀಕ್ಷಿತ ಲಾಭವಾಗುವುದು. ಆರೋಗ್ಯ ಸ್ಥಿತಿ ಗಮನಾರ್ಹವಾಗಿ ಸುಧಾರಿಸುವುದು.

ತುಲಾ ರಾಶಿ (Libra): ಗ್ರಹಗಳ ಸಂಯೋಜನೆಯಿಂದಾಗಿ, ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಅತ್ಯುತ್ತಮ ಸಮತೋಲನ ಸಾಧಿಸುವಿರಿ. ಹೊಸ ಅವಕಾಶಗಳು ಬಾಗಿಲು ತಟ್ಟುವುದು. ಹೊಸ ಕೆಲಸ ಶುರು ಮಾಡುವುದಕ್ಕೆ ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲ ಸಿಗುವುದು. ಮನೆಯಲ್ಲಿ ವಿವಾಹ ಮಾತುಕತೆ ನಡೆಯುವುದು.

ವೃಶ್ಚಿಕ ರಾಶಿ (Scorpio) : ಅತ್ಯುತ್ತಮ ಯೋಗಗಳಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಫಲಿತಾಂಶಗಳೇ ಸಿಗುವುದು. ಹೊಸ ಜನರೊಂದಿಗೆ ಪ್ರಮುಖ ಸಂಪರ್ಕ ಸಾಧಿಸುವಿರಿ. ಆರ್ಥಿಕ ವಿಷಯಗಳಲ್ಲಿ ಅಚಲ ಯಶಸ್ಸನ್ನು ಸಾಧಿಸುವಿರಿ.

ಧನು ರಾಶಿ (sagitarius): ಗುರುವಿನ ಸಕಾರಾತ್ಮಕ ಪ್ರಭಾವದಿಂದಾಗಿ, ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗುವುದು. ಶ್ರಾವಣ ಮಾಸದಲ್ಲಿ ದೀರ್ಘ ಪ್ರಯಾಣ ಅಥವಾ ವಿಶೇಷ ತೀರ್ಥಯಾತ್ರೆಗಳಿಗೆ ಹೋಗುವ ಅವಕಾಶ ಸಿಗುವುದು. ಹೊಸ ಕೆಲಸಕ್ಕೆ ಕೈ ಹಾಕುವಿರಿ. ವೃತ್ತಿಯಲ್ಲಿ ಸ್ಥಿರತೆಯೂ ಇರುತ್ತದೆ. ಭವಿಷ್ಯದ ಎಲ್ಲಾ ಕೆಲಸಗಳು ಉತ್ತಮ ರೀತಿಯಲ್ಲಿ ಸಾಗುವುದು.

ಮಕರ ರಾಶಿ (Capricorn) : ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಿರುವುದು. ಹಣಕಾಸಿನ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ದಿದಿದ್ದರೆ ಒಳ್ಳೆಯದು. ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆಯಿಡಿ. ಆರೋಗ್ಯವು ಉತ್ತಮವಾಗಿರುವುದು.

ಕುಂಭ ರಾಶಿ (Aquarius): ಕುಂಭ ರಾಶಿಯಲ್ಲಿ ರಾಹು ಇರುವುದರಿಂದ, ಹೊಸ ತಂತ್ರಜ್ಞಾನಗಳು ಅಥವಾ ವಿಚಾರಗಳತ್ತ ಆಕರ್ಷಿತರಾಗುವಿರಿ. ವಿದೇಶ ಪ್ರಯಾಣ ಯೋಗವಿದೆ. ವ್ಯವಹಾರಗಳಲ್ಲಿ ಲಾಭ ಗಳಿಸುವಿರಿ. ಆದರೆ ಪಾಲುದಾರಿಕೆ ವ್ಯವಹಾರಗಳಲ್ಲಿ ಸ್ಪಷ್ಟತೆ ಮತ್ತು ಎಚ್ಚರ ಎರಡೂ ಇರಲಿ.

ಮೀನ ರಾಶಿ (Pisces) : ಸಾಕಷ್ಟು ತಾಳ್ಮೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ. ಆಧ್ಯಾತ್ಮಿಕ ಹಾದಿಯಲ್ಲಿ ನಡೆಯುವ ಮೂಲಕ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವಿರಿ. ಹಣಕಾಸಿನ ಯೋಜನೆಗಳು ಅನುಕೂಲಕರವಾಗಿವೆ. ಯಾರೊಂದಿಗೂ ಜಗಳ ಮಾಡಿಕೊಳ್ಳಬೇಡಿ. ಇಲ್ಲವಾದರೆ ಭವಿಷ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ