ನ್ಯೂಯಾರ್ಕ್‌ನಲ್ಲಿ ನಡೆದ ಭಾರತದ ಸ್ವಾತಂತ್ರ್ಯ ದಿನಾಚರಣೆ ಗಿನ್ನೆಸ್ ವಿಶ್ವ ದಾಖಲೆ

ನ್ಯೂಯಾರ್ಕ್‌ನಲ್ಲಿ ನಡೆದ ಭಾರತದ ಸ್ವಾತಂತ್ರ್ಯ ದಿನಾಚರಣೆ  ಗಿನ್ನೆಸ್ ವಿಶ್ವ ದಾಖಲೆ

ನ್ಯೂಯಾರ್ಕ್‌ನಲ್ಲಿ ನಡೆದ ಭಾರತದ ಸ್ವಾತಂತ್ರ್ಯ ದಿನಾಚರಣೆ ಗಿನ್ನೆಸ್ ವಿಶ್ವ ದಾಖಲೆ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯು ವಿಶ್ವ ದಾಖಲೆಯಾಗಿದೆ. ಅಮೆರಿಕದ ಸ್ಥಾಪನೆಯ 250ನೇ ವಾರ್ಷಿಕೋತ್ಸವಕ್ಕೂ ಗೌರವ ಸಲ್ಲಿಸುವ ಸಲುವಾಗಿ, ಭಾರತದ ತ್ರಿವರ್ಣ ಧ್ವಜಗಳನ್ನು ಸುತ್ತುವರಿಯಲ್ಪಟ್ಟ 1,300ಕ್ಕೂ ಹೆಚ್ಚು ಅಮೆರಿಕದ ಧ್ವಜಗಳನ್ನು ಬಳಸಿ ‘250’ಎಂಬ ಸಂಖ್ಯೆಯನ್ನು ಮೂಡಿಸಲಾಯಿತು.

ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಮೆರಿಕದ 250ನೇ ವಾರ್ಷಿಕೋತ್ಸವದ ಜಂಟಿ ಆಚರಣೆಯ ಅಂಗವಾಗಿ, ಶನಿವಾರ ನ್ಯೂಜೆರ್ಸಿಯ ಪಾರ್ಸಿಪ್ಪಾನಿಯಲ್ಲಿರುವ ವೆಟರನ್ಸ್ ಮೆಮೋರಿಯಲ್ ಪಾರ್ಕ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯ ಧ್ವಜಗಳನ್ನು ಬಳಸಿದ್ದು ಗಿನ್ನೆಸ್ ವಿಶ್ವ ದಾಖಲೆಯಾಗಿದೆ.

ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯು, ಅನಿವಾಸಿ ಭಾರತೀಯರ ಸಂಘಟನೆಯಾದ 'ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ’ ಸಹಯೋಗ ಹಾಗೂ ಭಾರತೀಯ ತಂತ್ರಜ್ಞಾನ ಕಂಪನಿ 'ಝೋಹೋ' ಬೆಂಬಲದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

‘ಭಾರತದ 80ನೇ ಸ್ವಾತಂತ್ರ್ಯೋತ್ಸವ ಮತ್ತು ಅಮೆರಿಕದ 250ನೇ ವಾರ್ಷಿಕೋತ್ಸವದ ಸಂಗಮದಲ್ಲಿ ನಡೆದ ಈ ಕಾರ್ಯಕ್ರಮವು, ಭಾರತ-ಅಮೆರಿಕ ಸ್ನೇಹದ ಹಾಗೂ ಉಭಯ ರಾಷ್ಟ್ರಗಳು ಮತ್ತು ಅವುಗಳ ಜನರನ್ನು ಹತ್ತಿರಕ್ಕೆ ತರುವಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ನಿರಂತರ ಪ್ರಯತ್ನದ ಸ್ಮರಣೀಯ ಅಭಿವ್ಯಕ್ತಿಯಾಗಿತ್ತು’ಎಂದು ಆಯೋಜಕರು ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆ ತಿಳಿಸಿದೆ.

ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

ನ್ಯೂಜೆರ್ಸಿಯ ಲೆಫ್ಟಿನೆಂಟ್ ಗವರ್ನರ್ ಡೇಲ್ ಕಾಲ್ಡ್‌ವೆಲ್, ಅಮೆರಿಕ ಕಾಂಗ್ರೆಸ್ ಸದಸ್ಯರಾದ ಅನಲಿಯಾ ಮೆಜಿಯಾ, ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ವಿನಯ ಶ್ರೀಕಾಂತ ಪ್ರಧಾನ್ ಮತ್ತು ಪಾರ್ಸಿಪ್ಪಾನಿ ​​ಮೇಯರ್ ಪುಳಕಿತ್ ದೇಸಾಯಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಭಾರತ ಮತ್ತು ಅಮೆರಿಕ ನಡುವಿನ ಬಲವಾದ ಬಾಂಧವ್ಯವನ್ನು ಗಣ್ಯರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಬೆಳೆಯುತ್ತಿರುವ ದ್ವಿಪಕ್ಷೀಯ ಪಾಲುದಾರಿಕೆ ಹಾಗೂ ಆರ್ಥಿಕ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ ವಲಸಿಗರ ಪಾತ್ರವನ್ನು ಭಾರತದ ಕಾನ್ಸುಲ್ ಜನರಲ್ ಶ್ಲಾಘಿಸಿದರು.

ಎರಡೂ ದೇಶಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವಲ್ಲಿ ವಲಸಿಗರ ಪಾತ್ರವನ್ನು ಗಿನ್ನೆಸ್ ವಿಶ್ವ ದಾಖಲೆಯು ಎತ್ತಿ ತೋರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ