ಮಾಯಕೊಂಡ: ಸೌಲಭ್ಯಗಳಿಂದ ದೂರ ಉಳಿದ ಬುಳ್ಳಾಪುರ

ಮಾಯಕೊಂಡ: ಸೌಲಭ್ಯಗಳಿಂದ ದೂರ ಉಳಿದ ಬುಳ್ಳಾಪುರ

ಮಾಯಕೊಂಡ: ಸೌಲಭ್ಯಗಳಿಂದ ದೂರ ಉಳಿದ ಬುಳ್ಳಾಪುರ

ಮಾಯಕೊಂಡ: ತಾಂಡಾ, ಹಾಡಿ ಹಾಗೂ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅವುಗಳಿಗೆ ಮೂಲ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ ಎಂಬುದು ಕೆಲ ತಾಂಡಾಗಳ ಸ್ಥಿತಿ ನೋಡಿದಾಗ ಅನಿಸುತ್ತದೆ. ಇದಕ್ಕೆ ಸಮೀಪದ ಬುಳ್ಳಾಪುರ ತಾಂಡಾ ಸಾಕ್ಷಿ.

ಮಾಯಕೊಂಡ ಹೋಬಳಿಯ ಕಟ್ಟಕಡೆಯ ಹಾಗೂ ಹುಚ್ಚವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟ ತಾಂಡಾ ಇದು. ಇಲ್ಲಿ ಅಂದಾಜು 40 ಮನೆಗಳಿದ್ದು, ನಿವಾಸಿಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದಾರೆ. ಇಲ್ಲಿನ ಜನ ಸ್ವಾತಂತ್ರ್ಯ ಪೂರ್ವದಲ್ಲಿನ ಸ್ಥಿತಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ.

ರಸ್ತೆ ಇಲ್ಲ, ಕಾಡು ದಾರಿ, ಮಣ್ಣಿನ ರಸ್ತೆಯ ಇಕ್ಕೆಲಗಳಲ್ಲಿ ಕಾಡಿನಂತೆ ಬೆಳೆದಿರುವ ಜಾಲಿ ಗಿಡಗಳ ಮಧ್ಯೆ, ‘ಪ್ರಾಣಿಗಳು ಬರಬಹುದು’ ಎಂಬ ಭಯದಲ್ಲಿಯೇ ಸಾಗಬೇಕಿದೆ. ಬಸ್ ಸೌಲಭ್ಯ ಮೊದಲೇ ಇಲ್ಲ, ಇಲ್ಲಿಯ ಮಕ್ಕಳು ಕಲಿಯಲು ಅಂದಾಜು ಮೂರು ಕಿ.ಮೀ ದೂರದ ನಡೆದುಕೊಂಡು ಮಾಯಕೊಂಡದ ಶಾಲೆಗೆ ಬರಬೇಕಿದೆ.

‌ನಿತ್ಯವೂ ಚಿಣ್ಣರು ಕನಿಷ್ಠ ಆರೇಳು ಕಿ.ಮೀ. ದೂರ ಮಳೆ, ಚಳಿ, ಬಿಸಿಲೆನ್ನದೆ ಸಾಗುವುದು ಅನಿವಾರ್ಯ. ಕೂಲಿಕಾರರ ಕುಟುಂಬಗಳೇ ಇಲ್ಲಿದ್ದು, ಮಕ್ಕಳು ಶಾಲೆಗೆ‌ ಹೋಗಿ ಮನೆಗೆ ವಾಪಸಾಗುವವರೆಗೂ ಪಾಲಕರು ಚಿಂತೆಯಲ್ಲೇ ಕಾಯುವ ಸ್ಥಿತಿ ಇದೆ.

‘ನಮ್ಮ ಗ್ರಾಮಕ್ಕೆ ಸಂಪರ್ಕ ರಸ್ತೆ ನಿರ್ಮಿಸುವುದರ ಜೊತೆಗೆ ಮಕ್ಕಳು ಶಾಲೆಗೆ ಹೋಗಿ ಬರಲು ನಿತ್ಯ ಸಾರೊಗೆ ಸಂಸ್ಥೆಯ ಒಂದು ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು, ನಮ್ಮ ಮನೆಗಳಿಗೆ ಹಕ್ಕುಪತ್ರ ವಿತರಿಸಬೇಕು’ ಎಂಬುದು ಸ್ಥಳೀಯರಾದ ಚಂದ್ರಾ ನಾಯ್ಕ, ರುದ್ರಣ್ಣ, ಪಾಪಣ್ಣ, ಮಂಜಿಬಾಯಿ, ಸುಶೀಲಮ್ಮ ಅವರ ಮನವಿಯಾಗಿದೆ.

‘ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದೇವೆ. ಇನ್ನೂ ಯಾವ ಕೆಲಸವೂ ಆಗಿರುವ ಮಾಹಿತಿ ಇಲ್ಲ’ ಎಂದು ಗ್ರಾಮದ ಯುವಕ ಗಣೇಶ ಮೇಘಾವತ್ ಅಳಲು ತೋಡಿಕೊಂಡರು.

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಬುಳ್ಳಾಪುರ ತಾಂಡಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಂದಾಯ ಗ್ರಾಮಗಳ ಅಡಿ ಹಕ್ಕುಪತ್ರ ವಿತರಿ ಸಬೇಕಿತ್ತು. ಆದರೆ, ಇಲ್ಲಿನ 15 ಕುಟುಂಬಗಳಿಗೆ‌ ಮಾತ್ರ ಹಕ್ಕುಪತ್ರ ವಿತರಿಸಲಾಗಿದ್ದು, ಈ ಸಂಬಂಧ ಕಳೆದ ತಿಂಗಳು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರೂ ಕ್ರಮ ತೆಗೆದುಕೊಂಡಿಲ್ಲ ಎಂಬುದು ಗ್ರಾಮಸ್ಥರ ದೂರು.

ದಶಕಗಳ ಹಿಂದೆ ಒಮ್ಮೆ ಮಾತ್ರ ಟಾರ್ ರಸ್ತೆ ನಿರ್ಮಿಸಲಾಗಿತ್ತು. ಕೆಲವು ವರ್ಷಗಳ ಹಿಂದೆಯೇ ಆ ರಸ್ತೆಯಲ್ಲಿ ಗುಂಡಿ ಬಿದ್ದು, ಸಂಪೂರ್ಣ ಹಾಳಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಕಾಡಿನಂತೆ ಬೆಳೆದ ಜಾಲಿಗಿಡ ಚಾಚಿಕೊಂಡಿವೆ. ವಾಹನಗಳು ಸಂಚರಿಸಲು ಆಗುತ್ತಿಲ್ಲ. ದ್ವಿಚಕ್ರ ವಾಹನಗಳ ಸಂಚಾರ ಅಪಾಯಕ್ಕೆ ಆಹ್ವಾನ ಎನ್ನುವಂತಿದೆ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-43-253286044

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ