ಗದಗ ಕಾಲುವೆ ನೀರು ಸೋರಿಕೆ; ಪರಿಹಾರ ಸಿಗದ ರೈತರಿಗೆ ಸಂಕಷ್ಟ

ಗದಗ ಕಾಲುವೆ ನೀರು ಸೋರಿಕೆ; ಪರಿಹಾರ ಸಿಗದ ರೈತರಿಗೆ ಸಂಕಷ್ಟ

ಗದಗ ಕಾಲುವೆ ನೀರು ಸೋರಿಕೆ; ಪರಿಹಾರ ಸಿಗದ ರೈತರಿಗೆ ಸಂಕಷ್ಟ

ಗದಗ: ಸಮೀಪದ ಡೋಣಿ, ಡಂಬಳ ಭಾಗದಲ್ಲಿ ಸಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಡದಂಡೆ ಕಾಲುವೆಯು ಅಲ್ಲಲ್ಲಿ ಸೋರುತ್ತಿರುವುದರಿಂದ ಸುತ್ತಲಿನ ಜಮೀನುಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತಿದೆ. ಹಲವು ವರ್ಷಗಳಿಂದ ಜೀವಂತವಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಕಾಲುವೆಯ ಬಸಿ ನೀರಿನಿಂದ ಡೋಣಿ ಗ್ರಾಮದ 102 ಎಕರೆ ಹಾಗೂ ಡಂಬಳ ಗ್ರಾಮದ 145 ಎಕರೆಯಷ್ಟು ಕೃಷಿ ಭೂಮಿ ತೊಂದರೆಗೊಳಗಾಗಿದೆ ಎಂಬುದಾಗಿ ಈ ಹಿಂದೆ ತಾಲ್ಲೂಕು ಆಡಳಿತವೇ ವರದಿ ಸಿದ್ಧಪಡಿಸಿದೆ. ಇದರಿಂದ 2019–22ರವರೆಗೆ ನಷ್ಟಕ್ಕೀಡಾದ ರೈತರಿಗೆ ಇಂತಿಷ್ಟು ಪರಿಹಾರ ನೀಡಲಾಗಿದೆ. ತಾತ್ಕಾಲಿಕ ಪರಿಹಾರ ಸಿಗುತ್ತಿದೆಯೇ ಹೊರತು, ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬುದು ರೈತರ ಆರೋಪ.

‘2025ರಲ್ಲಿ ಈ ಭಾಗದಲ್ಲಿ ಕಾಲುವೆ ನಿರ್ಮಿಸಲಾಗಿದ್ದು, ಇದು ಅವೈಜ್ಞಾನಿಕವಾಗಿದೆ. ಹಿರೇವಡ್ಡಟ್ಟಿಯಿಂದ ತೆರೆದ ಕಾಲುವೆಯಲ್ಲಿ ಹರಿಯುವ ನೀರು ಎರಡೂ ಗ್ರಾಮಗಳ ವ್ಯಾಪ್ತಿಯಲ್ಲಿ ಸೋರುತ್ತದೆ. ಆರಂಭದ ಕೆಲ ವರ್ಷಗಳಲ್ಲಿ ಬರಗಾಲ ಇದ್ದಿದ್ದರಿಂದ ಇದರ ಪರಿಣಾಮ ಅರಿವಿಗೆ ಬಂದಿರಲಿಲ್ಲ. 2019ರಿಂದ ಆರಂಭವಾದ ಸಮಸ್ಯೆಯ ಕಾರಣ ಬಿತ್ತನೆ ಮಾಡಲು ಹಿಂಜರಿಯುವಂತಾಗಿದೆ’ ಎಂದು ಡೋಣಿ ಗ್ರಾಮದ ರೈತ ನಾಗಲಿಂಗಯ್ಯ ಮುತ್ತಾಳಮಠ ತಿಳಿಸಿದರು.

‘ಈ ಸಮಸ್ಯೆಯಿಂದಾಗಿ ಮೂರ್ನಾಲ್ಕು ವರ್ಷ ರೈತರು ಬಿತ್ತನೆಯನ್ನೇ ಮಾಡಲಾಗಿಲ್ಲ. ಆಗಾಗ ತಾತ್ಕಾಲಿಕ ದುರಸ್ತಿ ಮಾಡಲಾಗುತ್ತಿದ್ದು, ಸಮಸ್ಯೆ ಮರುಕಳಿಸುತ್ತಿದೆ. ಇದೇ ಕಾರಣಕ್ಕೆ ಕಳೆದ ವರ್ಷ ಕಾಲುವೆ ಮೂಲಕ ನೀರು ಹರಿಸಲು ಅಡ್ಡಿಪಡಿಸಿದ್ದೆವು. ಈ ವರ್ಷವೂ ಅಡ್ಡಿ ಮಾಡಲಾಗಿತ್ತು. ಆದರೆ, ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೋರಿಕೆಯಾಗುವ ಕಡೆಗಳಲ್ಲಿ ಟಾರ್ಪಲ್ ಹಾಕಿ ತಾತ್ಕಾಲಿಕ ಪರಿಹಾರ ನೀಡಲು ಸೂಚಿಸಲಾಯಿತು. ಬೇಸಿಗೆಯಲ್ಲಿ ಕಾಲುವೆ ದುರಸ್ತಿ ಮಾಡಲು ತಿಳಿಸಿದ್ದಾರೆ’ ಎಂದರು.

‘ಸದ್ಯಕ್ಕೆ ಅಲ್ಪ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಜೋರಾಗಿ ಹರಿಸಿದರೆ ಹೊಲಗಳಿಗೆ ನೀರು ನುಗ್ಗುತ್ತದೆ. ಈ ವರ್ಷ ಈರುಳ್ಳಿ, ಮೆಕ್ಕೆಜೋಳ ಬಿತ್ತನೆ ಮಾಡಿರುವೆ. ನೀರು ಸೋರಿಕೆಯಾದರೆ ಬೆಳೆ ಹಾಳಾಗುವ ಆತಂಕವಿದೆ’ ಎಂದು ಹೇಳಿದರು.

‘₹10 ಕೋಟಿ ಮೊತ್ತದ ಯೋಜನೆ’

‘ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಡದಂಡೆ ಕಾಲುವೆಯು ಅಲ್ಲಲ್ಲಿ ಸೋರುತ್ತಿರುವುದನ್ನು ಶಾಶ್ವತವಾಗಿ ತಡೆಯಲು ಯೋಜನೆ ರೂಪಿಸಲಾಗಿದೆ. ಈ ಭಾಗದ ಕಾಲುವೆಯನ್ನು ಕಾಂಕ್ರೀಟೀಕರಣಗೊಳಿಸಲು ₹10 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಪ್ರಸ್ತಾವವನ್ನೂ ಕಳುಹಿಸಲಾಗಿದೆ. ಪ್ರಸ್ತಾವಕ್ಕೆ ಮಂಜೂರಾತಿ ದೊರೆಯಬೇಕಿದೆ’ ಎಂದು ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ವಿಭಾಗ–2ರ ಕಾರ್ಯಪಾಲಕ ಎಂಜಿನಿಯರ್ ಶಿವಮೂರ್ತಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-23-431757393

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ