
ರಾಣೆಬೆನ್ನೂರಿನಲ್ಲಿ ಶ್ರೀಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಪದಗ್ರಹಣ
ರಾಣೆಬೆನ್ನೂರು: ನಗರದ ಸಾಲೇಶ್ವರ ಸಮುದಾಯ ಭವನದಲ್ಲಿ ಶನಿವಾರ ಶ್ರೀಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಣೆಬೆನ್ನೂರು ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ಘಟಕದ ಗೌರವ ಅಧ್ಯಕ್ಷರಾಗಿ ಶಿವಯೋಗಿ ಕೆ. ಹೊಸರಿತ್ತಿ, ನೂತನ ಅಧ್ಯಕ್ಷರಾಗಿ ಪ್ರಕಾಶ್ ಬನ್ನಿಮಟ್ಟಿ, ಉಪಾಧ್ಯಕ್ಷರಾಗಿ ವಿರೂಪಾಕ್ಷಪ್ಪ ಹೊಸರಿತ್ತಿ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಬೆಣ್ಣಿ, ಖಜಾಂಚಿಯಾಗಿ ಪ್ರಕಾಶ್ ಕಾಟೇನಹಳ್ಳಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಶಶಿಧರ ಕಾಟೇನಹಳ್ಳಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಹಡಪದ, ಶಂಕರ್ ಹಡಪದ, ನಿಂಗಪ್ಪ ಹಡಪದ, ಬಸವರಾಜ ಯರಬಾಳ, ಕೃಷ್ಣ ಹೊಸರಿತ್ತಿ, ಸಿದ್ದಪ್ಪ ಬೇಲೂರು, ಮಾಲತೇಶ ಹನುಮಾಪುರ, ನಾಗರಾಜ ಕಜ್ಜರಿ, ಅಜಯ ಮಾಕನೂರ, ಬಸವಂತಪ್ಪ ಯರೆಕುಪ್ಪಿ, ಶಿವಪ್ಪ ಕವಲತ್ತು, ಪ್ರಶಾಂತ್ ಹಲಿಗೇರಿ, ನಾಗರಾಜ ಹೊಸರಿತ್ತಿ, ವೀರೇಶ್ ಬನ್ನಿಮಟ್ಟಿ, ಶ್ರೀಕಾಂತ್ ಮೇಳಗಟ್ಟಿ ಹಾಗೂ ರುದ್ರೇಶ್ ಹುಲಿಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಷಣ್ಮುಖಪ್ಪ ಕಾಯಕದ, ಜಿಲ್ಲಾ ಕಾರ್ಯದರ್ಶಿ ಬಾಬಣ್ಣ ಕ್ಯಾಲಕೊಂಡ, ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ನಾಗರಾಜ ಮೈಲಾರ, ನಿಕಟಪೂರ್ವ ಖಜಾಂಚಿ ಶಿವಪ್ಪ, ಮಲ್ಲಿಕಾರ್ಜುನ ಹಡಪದ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-22-349132701