
ಅಮೃತ ಸಿದ್ದಿಯೋಗದಿಂದ ಈ ರಾಶಿಯವರಿಗೆ ಲಾಭ, ಮನೆ ನಿರ್ಮಾಣದ ಬಗ್ಗೆ ಮಾತುಕತೆ; ದ್ವಾದಶ ರಾಶಿಯವರ ನಿತ್ಯ ಭವಿಷ್ಯ
Daily Horoscope August 16: ಇಂದು ಅಮೃತ ಸಿದ್ದಿ ಯೋಗ ಮತ್ತು ರವಿ ಯೋಗ ಇರುವುದು. ಈ ಎರಡು ಯೋಗಗಳಿಂದ ಯಾವ ರಾಶಿಯವರಿಗೆ ಶುಭ ಫಲ ಸಿಗುವುದು. ದ್ವಾದಶ ರಾಶಿಯಲ್ಲಿ ಯಾವ ರಾಶಿಯವರ ಕೈ ಹಿಡಿಯುವುದು ಅದೃಷ್ಟ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ವ್ಯಾಪಾರ ಹೂಡಿಕೆಗಳಿಗೆ ಅನುಕೂಲಕರ ದಿನ. ಶುಭ ಸುದ್ದಿಯಿಂದ ಕುಟುಂಬದ ವಾತಾವರಣ ಉಲ್ಲಾಸದಿಂದ ಕೂಡಿರುವುದು. ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕಾಗುತ್ತದೆ. ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಹೊಸ ವಾಹನ ಖರೀದಿಸುವ ಬಗ್ಗೆ ಮಾತುಕತೆ ನಡೆಯಬಹುದು.
ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಕುಟುಂಬದಲ್ಲಿ ಸಾಮರಸ್ಯ ಇರುವುದು. ಸಂತೋಷ, ನೆಮ್ಮದಿ ಹೆಚ್ಚಾಗುವುದು. ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ಸ್ನೇಹಿತರೊಂದಿಗೆ ಪಿಕ್‌ನಿಕ್‌ಗೆ ಹೋಗುವಿರಿ.
ಇಂದು ಉತ್ತಮ ದಿನವಾಗಿರುವುದು. ಹೊಸ ಉದ್ಯೋಗಾವಕಾಶಗಳು ಒದಗಿ ಬರುವುದು. ಪ್ರಗತಿಯ ಮಾರ್ಗಗಳು ತೆರೆದುಕೊಳ್ಳುವುದು.ದೈಹಿಕ ಸಮಸ್ಯೆಗೆ ಪರಿಹಾರ ಸಿಗುವುದು. ಸಾಮಾಜಿಕ ಕಾರ್ಯಗಳ ಮೂಲಕ ಪ್ರಗತಿ ಸಾಧಿಸುವಿರಿ.
ಇಂದು ಅನುಕೂಲಕರ ದಿನವಾಗಿರುವುದು. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಸಂಬಂಧಿಕರೊಂದಿಗೆ ಇದ್ದ ಮನಸ್ತಾಪ ಕಡಿಮೆಯಾಗುವುದು. ಎಲ್ಲಾ ರೀತಿಯ ಕುಂದುಕೊರತೆಗಳು ನಿವಾರಣೆಯಾಗುವುದು.ಕೆಲಸದ ವಿಚಾರವಾಗಿ ಬೇರೆ ಊರಿಗೆ ಪ್ರಯಾಣಿಸಬೇಕಾಗಬಹುದು.
ಹೊಸ ಪ್ರಯತ್ನದೊಂದಿಗೆ ದಿನ ಆರಂಭವಾಗುವುದು. ನಿಮ್ಮ ಸಂಗಾತಿಯಿಂದ ಬೆಂಬಲ ಸಿಗುವುದು. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವಿರಿ. ಅತ್ತೆ-ಮಾವರಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಮನೆಯಲ್ಲಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಯಾಗುವುದು.
ದಿನದ ಆರಂಭ ಉತ್ತಮವಾಗಿ ಆಗುವುದು. ವ್ಯವಹಾರದಲ್ಲಿ, ಅನುಭವಿ ವ್ಯಕ್ತಿಯ ಸಲಹೆಯಿಂದ ಲಾಭವಾಗುವುದು. ಸ್ವಂತ ಕೆಲಸದ ಮೇಲೆ ಗಮನಹರಿಸಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದುವಿರಿ. ರಾಜಕೀಯ ಬೆಂಬಲ ಸಿಗುವುದು. ಧಾರ್ಮಿಕ ಚಟುವಟಿಕೆಗಳ ಕಡೆಗೆ ಒಲವು ತೋರುವಿರಿ. ಮಕ್ಕಳ ಯಶಸ್ಸಿನಿಂದ ಸಂತೋಷ ಸಿಗುವುದು.
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶ ಸಿಗುವ ದಿನ. ವ್ಯವಹಾರದಲ್ಲಿ ಉತ್ತಮ ಆರ್ಥಿಕ ಲಾಭವಾಗುವುದು. ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುವುದು. ಸ್ನೇಹಿತರ ಸಹಾಯದಿಂದ ಹೊಸ ಕೆಲಸಕ್ಕೆ ಕೈ ಹಾಕುವಿರಿ. ಹೊಸ ಮನೆ ಖರೀದಿಸುವ ಬಗ್ಗೆ ಮಾತುಕತೆ ನಡೆಸುವಿರಿ.
ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಂತೋಷ ಸಿಗುವುದು. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ಮಗನ ಯಶಸ್ಸು ಇಡೀ ಕುಟುಂಬಕ್ಕೆ ಸಂತೋಷ ತರುವುದು. ನಕಾರಾತ್ಮಕವಾಗಿ ಮಾತನಾಡುವ ವ್ಯಕ್ತಿಗಳಿಂದ ದೂರವಿರಿ. ಕೆಲಸ ಕಾರ್ಯಗಳಲ್ಲಿ ಅಡೆತಡೆ ಎದುರಾಗುವುದು.
ಹೊಸ ಉತ್ಸಾಹದಿಂದಲೇ ದಿನದ ಆರಂಭವಾಗುವುದು. ನಿಂತು ಹೋಗಿರುವ ಕೆಲಸಗಳು ಮತ್ತೆ ಆರಂಭವಾಗುವುದು. ಅಗತ್ಯವಿರುವವರಿಗೆ ಸಹಾಯ ಮಾಡುವ ಅವಕಾಶ ಸಿಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ನಿಮ್ಮ ನಿರೀಕ್ಷೆಯಂತೆ ಒಳ್ಳೆಯ ಕೆಲಸದ ಆಫರ್ ಬರಬಹುದು. ವೃತ್ತಿಜೀವನ ಹೊಸ ದಿಕ್ಕಿಗೆ ಸಾಗುವುದು. ಹಣಕಾಸಿನ ಲಾಭವಾಗುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಾಗುವುದು.
ಇಂದಿನ ದಿನ ಅದ್ಭುತವಾಗಿರುವುದು. ಹಿರಿಯರ ಸಲಹೆಯೊಂದಿಗೆ ನಿಮ್ಮ ವ್ಯವಹಾರವನ್ನು ಹೊಸ ಹಾದಿಯಲ್ಲಿ ತೆಗೆದುಕೊಂಡು ಹೋದರೆ ಸಕ್ಸಸ್ ಸಿಗುವುದು. ಸಂಬಂಧಗಳಲ್ಲಿನ ಸಾಮರಸ್ಯ ಹೆಚ್ಚುವುದು.
ಅನುಕೂಲಕರ ದಿನವಾಗಿರುವುದು. ಅನಗತ್ಯ ಗೊಂದಲಗಳನ್ನು ಎಳೆದುಕೊಳ್ಳಬೇಡಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ ಹೆಚ್ಚಾಗುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.