
ಶನಿದೇವನಿಂದಲೇ ಈ ರಾಶಿಯವರಿಗೆ ಅದೃಷ್ಟ : ಇಂದಿನಿಂದ ಜೀವನದ ದಿಕ್ಕೇ ಬದಲು, ಸಿರಿ ಸಂಪತ್ತು ಒಲಿಯುವ ಕಾಲ
ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಶನಿ ದೇವರು ಎಂದರೆ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುವವರು. ಶನಿಗ್ರಹ ಸದ್ಯಕ್ಕೆ ಮೀನ ರಾಶಿ ಮತ್ತು ರೇವತಿ ನಕ್ಷತ್ರದಲ್ಲಿದೆ. ಪಂಚಾಂಗದ ಪ್ರಕಾರ, ಆಗಸ್ಟ್ 20, 2026 ರಂದು ಅಂದರೆ ಇವತ್ತು ಸಂಜೆ 7:45 ಕ್ಕೆ, ಹಿಮ್ಮುಖವಾಗಿ ಚಲಿಸಿಕೊಂಡು ರೇವತಿ ನಕ್ಷತ್ರದ ಎರಡನೇ ಹಂತದಿಂದ ಮೊದಲ ಹಂತವನ್ನು ಪ್ರವೇಶಿಸುತ್ತಿದ್ದಾನೆ. ಶನಿಯ ನಡೆಯಲ್ಲಿನ ಸಣ್ಣ ಬದಲಾವಣೆ ಕೂಡಾ ದ್ವದಶ ರಾಶಿಗಳ ಜಾತಕ ಫಲದ ಮೇಲೆ ಪರಿಣಾಮ ಬೀರುತ್ತದೆ.
ಶನಿಯ ಈ ನಕ್ಷತ್ರ ಸಂಕ್ರಮಣದಿಂದಾಗಿ, ಕೆಲವು ರಾಶಿಯವರು ತೊಂದರೆ ಎದುರಿಸಬೇಕಾಗಬಹುದು. ಆದರೆ ಇನ್ನು ಕೆಲವು ರಾಶಿಯವರಿಗೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು. ಇದಾದ ನಂತರ ಶನಿಯು ಅಕ್ಟೋಬರ್ 9, 2026 ರವರೆಗೆ ಇದೇ ಸ್ಥಾನದಲ್ಲಿರುತ್ತಾನೆ. ನಂತರ, ಅದು ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತದೆ.
ಶನಿಯ ಕೃಪೆಯಿಂದ ಯಾವ ರಾಶಿಯವರಿಗೆ ಒಲಿಯುವುದು ಅದೃಷ್ಟ?
ವೃಷಭ ರಾಶಿ (Taurus) : ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ಶುಕ್ರ ಶನಿಯ ಮಿತ್ರ ಗ್ರಹ. ಶನಿಯ ಈ ಸಂಚಾರವು ವೃಷಭ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವುದು. ಉದ್ಯೋಗದಲ್ಲಿರುವವರಿಗೆ ಹೊಸ ಜವಾಬ್ದಾರಿಗಳು ಸಿಗುವುದು. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುವುದು. ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು, ಗೌರವ ಹೆಚ್ಚಾಗುವುದು. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳೊಂದಿಗಿನ ನಿಮ್ಮ ಸಂಪರ್ಕ ಬಲಗೊಳ್ಳುವುದು. ಕೆಲಸದಲ್ಲಿ ಬಡ್ತಿ ಸಿಗುವುದು. ಅಥವಾ ಉನ್ನತ ಸ್ಥಾನಮಾನವಿರುವ ಹೊಸ ಕೆಲಸ ಸಿಗುವುದು.
ಮಿಥುನ ರಾಶಿ (Gemini) :ಮಿಥುನ ರಾಶಿಯವರಿಗೆ, ಶನಿಯ ನಡೆಯಲ್ಲಿ ಆಗುವ ಬದಲಾವಣೆ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ತಂದುಕೊಡುವುದು. ನಿಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಯಶಸ್ಸು ಗ್ಯಾರಂಟಿ. ಕಠಿಣ ಪರಿಶ್ರಮಕ್ಕೆ ನಿರೀಕ್ಷೆಯಂತೆಯೇ ಪ್ರತಿಫಲ ಸಿಗುವುದು. ಹೊಸ ಉದ್ಯೋಗಾವಕಾಶ ಹುಟ್ಟಿಕೊಳ್ಳುವುದು. ಆದಾಯ ಹೆಚ್ಚಾಗಬಹುದು. ಹೊಸ ವ್ಯವಹಾರವನ್ನು ಆರಂಭಿಸಿದರೂ ಯಶಸ್ಸು ಸಿಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ತುಲಾ ರಾಶಿ (Libra): ತುಲಾ ರಾಶಿಯವರು ತುಂಬಾ ದಿನಗಳಿಂದ ಕಾಯುತ್ತಿದ್ದ ವೃತ್ತಿಜೀವನದ ಮೈಲಿಗಲ್ಲನ್ನು ಸಾಧಿಸಬಹುದು. ಉನ್ನತ ಸ್ಥಾನಮಾನದ ಜೊತೆಗೆ ನಿಮ್ಮ ಮನ್ನಣೆ ಹೆಚ್ಚಾಗುವುದು. ನೀವು ಮಾಡುವ ಕೆಲಸವು ಭವಿಷ್ಯದಲ್ಲಿ ಗಮನಾರ್ಹ ಪ್ರಯೋಜನಗಳನ್ನು ತರುವುದು. ಬಾಕಿ ಇರುವ ಹಣ ಸಿಗಬಹುದು. ಅದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ದೊಡ್ಡ ಮಟ್ಟದ ಪರಿಹಾರವನ್ನು ನೀಡಬಹುದು. ಆರ್ಥಿಕ ಪರಿಸ್ಥಿತಿ ತಿಂಗಳ ಅಂತ್ಯದವರೆಗೆ ಉತ್ತಮವಾಗಿರುವುದು.
ಮಕರ ರಾಶಿ (Capricorn): ಮಕರ ರಾಶಿಯ ಅಧಿಪತಿ ಶನಿಗ್ರಹ. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುವುದು. ವೃತ್ತಿಜೀವನದಲ್ಲಿ ನೀವು ಎದುರಿಸಿದ ಸವಾಲುಗಳು ಕಡಿಮೆಯಾಗುವುದು. ಒಳ್ಳೆಯ ಸುದ್ದಿ ಕೇಳುವಿರಿ. ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ಪ್ರತಿ ಹಂತದಲ್ಲಿಯೂ ಆರ್ಥಿಕ ಲಾಭವಾಗುವುದು. ಈ ಸಮಯದಲ್ಲಿ ಮಾಡುವ ಹೂಡಿಕೆಗಳು ಭವಿಷ್ಯದಲ್ಲಿ ದೊಡ್ಡ ಮಟ್ಟದ ಲಾಭವನ್ನು ನೀಡುವುದು. ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿ ಬರುವುದು.
ಕುಂಭ ರಾಶಿ (Aquarius) : ಕುಂಭ ರಾಶಿಯವರಿಗೆ, ಶನಿಯ ನಕ್ಷತ್ರಪುಂಜದ ಬದಲಾವಣೆಯು ಕೆಲವು ವಿಷಯಗಳಲ್ಲಿ ಪ್ರಯೋಜನಕಾರಿಯಾಗಿರುವುದು. ಉದ್ಯಮಿಗಳು ಲಾಭ ಪಡೆಯುವರು. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಬಲವಾದ ತಂತ್ರವನ್ನು ಅಭಿವೃದ್ಧಿಪಡಿಸಿಕೊಂಡರೆ ಸ್ವಲ್ಪ ದಿನದಲ್ಲೇ ಉತ್ತಮ ಫಲಿತಾಂಶ ಸಿಗಬಹುದು. ಎಲ್ಲಾ ಕೆಲಸಗಳಲ್ಲಿಯೂ ಸಂಗಾತಿ ಜಿತೆ ನಿಲ್ಲುತ್ತಾರೆ. ಆದಾಯ ಹೆಚ್ಚಾಗುವುದು. ಪ್ರಮುಖ ವೆಚ್ಚಗಳನ್ನು ಭರಿಸುವುದು ಸುಲಭವಾಗುತ್ತದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು. ಉನ್ನತ ಶಿಕ್ಷಣ ಪಡೆಯುವ ಬಗ್ಗೆ ಯೋಚಿಸಬಹುದು.