ಅಮೆರಿಕ ಡಾಲರ್‌ಗೆ ಪರ್ಯಾಯ ಬ್ರಿಕ್ಸ್ ಕರೆನ್ಸಿ ಪರ ಭಾರತ ಇಲ್ಲ: ಗೋಯಲ್

ಅಮೆರಿಕ ಡಾಲರ್‌ಗೆ ಪರ್ಯಾಯ ಬ್ರಿಕ್ಸ್ ಕರೆನ್ಸಿ ಪರ ಭಾರತ ಇಲ್ಲ: ಗೋಯಲ್

ಅಮೆರಿಕ ಡಾಲರ್‌ಗೆ ಪರ್ಯಾಯ ಬ್ರಿಕ್ಸ್ ಕರೆನ್ಸಿ ಪರ ಭಾರತ ಇಲ್ಲ: ಗೋಯಲ್

ನವದೆಹಲಿ: ಅಮೆರಿಕ ಡಾಲರ್‌ಗೆ ಪರ್ಯಾಯವಾಗಿ ಸ್ಥಾಪಿಸಲು ಉದ್ದೇಶಿಸುತ್ತಿರುವ ಬ್ರಿಕ್ಸ್ ಕರೆನ್ಸಿ ಪರವಾಗಿ ಭಾರತ ಇಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಆ ರೀತಿಯ ಯಾವುದೇ ಯೋಜನೆಗೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.

'ಭಾರತವು ಬ್ರಿಕ್ಸ್ ಕರೆನ್ಸಿಯ ಪರವಾಗಿಲ್ಲ. ಅಂತಹ ಯಾವುದೇ ಬ್ರಿಕ್ಸ್ ಕರೆನ್ಸಿ ಯೋಜನೆಗೆ ನಾವು ಬೆಂಬಲ ನೀಡುವುದಿಲ್ಲ. ಭಾರತವು ಇದನ್ನು ವಿರೋಧಿಸುತ್ತದೆ' ಎಂದು ಜೈಪುರದಲ್ಲಿ ನಡೆದ ಬ್ರಿಕ್ಸ್‌ನ ವ್ಯಾಪಾರ ಮತ್ತು ಕೈಗಾರಿಕಾ ಸಚಿವರ ಎರಡು ದಿನಗಳ ಸಭೆಯ ನಂತರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬ್ರಿಕ್ಸ್ ಗುಂಪು ವಿಶ್ವದ 11 ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಳಗೊಂಡಿದೆ. ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈ ಗುಂಪಿನ ದೇಶಗಳಾಗಿವೆ.

ಜಾಗತಿಕ ಹಾಗೂ ಪ್ರಾದೇಶಿಕ ಮಹತ್ವದ ಸಮಕಾಲೀನ ವಿಷಯಗಳು ಹಾಗೂ ಜಾಗತಿಕ ರಾಜಕೀಯ ಮತ್ತು ಆರ್ಥಿಕ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಮಾಲೋಚನೆ ಮತ್ತು ಸಹಕಾರಕ್ಕಾಗಿ ಒಂದು ವೇದಿಕೆಯಾಗಿ ಬ್ರಿಕ್ಸ್ ಕಾರ್ಯನಿರ್ವಹಿಸುತ್ತದೆ.

ಅಮೆರಿಕದ ಡಾಲರ್‌ಗೆ ಪರ್ಯಾಯ ಕರೆನ್ಸಿ ಸ್ಥಾಪಿಸುವ ಯಾವುದೇ ನಡೆ ವಿರುದ್ಧ ಕಠಿಣ ನಿಲುವು ತಳೆಯುವುದಾಗಿ ಬ್ರಿಕ್ಸ್ ರಾಷ್ಟ್ರಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರMಪ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪಿಯೂಶ್ ಹೇಳಿಕೆ ಮಹತ್ವದ್ದಾಗಿವೆ.

ಕಳೆದ ಕೆಲವು ವರ್ಷಗಳಿಂದ ಬ್ರಿಕ್ಸ್‌ನ ಕೆಲವು ಸದಸ್ಯ ರಾಷ್ಟ್ರಗಳು, ವಿಶೇಷವಾಗಿ ರಷ್ಯಾ ಮತ್ತು ಚೀನಾ, ಅಮೆರಿಕದ ಡಾಲರ್‌ಗೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಲು ಅಥವಾ ತಮ್ಮದೇ ಆದ ಬ್ರಿಕ್ಸ್ ಕರೆನ್ಸಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ.

ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಅನ್ನು ಜಾಗತಿಕ ಕರೆನ್ಸಿ ಎಂದೇ ಪರಿಗಣಿಸಲಾಗುತ್ತದೆ. ಅದರಲ್ಲೂ ತೈಲ ಖರೀದಿಯಲ್ಲಿ ಅದರ ಪಾತ್ರ ದೊಡ್ಡದಿದೆ. ಹಾಗಾಗಿ, ಜಾಗತಿಕವಾಗಿ ಅಮೆರಿಕದ ಅಧಿಪತ್ಯ ಕೊನೆಗೊಳಿಸುವ ಉದ್ದೇಶದಿಂದ ಪರ್ಯಾಯ ಕರೆನ್ಸಿಯ ಯತ್ನ ನಡೆಯುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ