ದಿಬ್ಬದಹಟ್ಟಿ ಜನರಿಗೆ ನೀರೇ ಸಿಗುತ್ತಿಲ್ಲ!

ದಿಬ್ಬದಹಟ್ಟಿ ಜನರಿಗೆ ನೀರೇ ಸಿಗುತ್ತಿಲ್ಲ!

ದಿಬ್ಬದಹಟ್ಟಿ ಜನರಿಗೆ ನೀರೇ ಸಿಗುತ್ತಿಲ್ಲ!

ನಾಯಕನಹಟ್ಟಿ: ಸಮೀಪದ ಜೋಗಿಹಟ್ಟಿ ಗ್ರಾಮದ ದಿಬ್ಬದ ಹಟ್ಟಿಯಲ್ಲಿ ಹಲವು ತಿಂಗಳುಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಸಮರ್ಪಕವಾಗಿ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿದ್ದು, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜೋಗಿಹಟ್ಟಿಯು ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಅಂದಾಜು 780ಕ್ಕೂ ಹೆಚ್ಚು ಮನೆಗಳಿವೆ. ಇದರಲ್ಲಿ ದಿಬ್ಬದಹಟ್ಟಿಯಲ್ಲಿ 270 ಮನೆಗಳಿದ್ದು, 80 ಮನೆಗಳಿಗೆ ನೀರು ಸರಬರಾಜಾಗುತ್ತಿಲ್ಲ. ಇಲ್ಲಿನ ನಿವಾಸಿಗಳು ದೂರದ ಆಲದಮರದ ಬಳಿಯ ನಲ್ಲಿಯಿಂದ ತಳ್ಳುಗಾಡಿಗಳಲ್ಲಿ ನೀರು ತರುತ್ತಿದ್ದಾರೆ. ಕನಿಷ್ಠ ಕುಡಿಯುವುದಕ್ಕೂ ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಜನ– ಜಾನುವಾರು ಪರದಾಡುವಂತಾಗಿದೆ.

ದಿಬ್ಬದಹಟ್ಟಿಯಲ್ಲಿ ಪ್ರತಿ ಮನೆಗೂ ನಲ್ಲಿ ಸಂಪರ್ಕಿಸಲು ಗ್ರಾಮ ಪಂಚಾಯಿತಿ ಹಣ ಪಾವತಿಸಿಕೊಂಡಿದೆ. ಜೊತೆಗೆ ಜಲಜೀವನ್ ಮಿಷನ್ ಮೂಲಕ ಮನೆಮನೆಗೂ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ, ಯಾವುದರಲ್ಲೂ ನೀರು ಬರುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ‘ದಿಬ್ಬದಹಟ್ಟಿಯು ಎತ್ತರದ ಪ್ರದೇಶದಲ್ಲಿದ್ದು, ದಿಬ್ಬಕ್ಕೆ ನೀರು ಹತ್ತುವುದಿಲ್ಲ’ ಎಂಬ ಸಿದ್ಧ ಉತ್ತರ ನೀರಗಂಟಿಗಳಿಂದ ದೊರೆಯುತ್ತದೆ.

ಜೋಗಿಹಟ್ಟಿ ಗ್ರಾಮದಲ್ಲಿ 5 ಕೊಳವೆಬಾವಿಗಳಿದ್ದು, ಸರ್ಕಾರಿ ಶಾಲೆ ಹಿಂಭಾಗದಲ್ಲಿ 80 ಮನೆಗಳಿವೆ. ಈ ಮನೆಗಳಿಗೆ ನೀರು ಪೂರೈಸಲು 680 ಅಡಿ ಆಳದ ಪ್ರತ್ಯೇಕ ಕೊಳವೆಬಾವಿ ಕೊರೆಯಲಾಗಿದೆ. ಆದರೆ, ಕಾಲಕಾಲಕ್ಕೆ ಮೋಟಾರ್, ಪಂಪ್‌ಸೆಟ್‌ಗಳನ್ನು ದುರಸ್ತಿ ಮಾಡಿಸದ ಪರಿಣಾಮ ನೀರಿನ ಸಮಸ್ಯೆ ಬಿಗಡಾಯಿಸಿದೆ ಎಂದು ಗ್ರಾಮಸ್ಥರಾದ ಎಂ.ಟಿ. ಬಸವರಾಜ್, ಪಾಲಪ್ಪ, ಕೆ.ಜಿ. ಬಸವರಾಜ, ಕಾಟಯ್ಯ, ರಮೇಶ ಮತ್ತಿತರರು ಅಳಲು ತೋಡಿಕೊಳ್ಳುತ್ತಾರೆ.

ಜೋಗಿಹಟ್ಟಿ ಗ್ರಾಮದ ಹೃದಯಭಾಗದಲ್ಲಿರುವ ಕೆನರಾ ಬ್ಯಾಂಕ್ ಕಟ್ಟಡಕ್ಕೆ ಹೊಂದಿಕೊಂಡಿರುವ ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಿ 8 ವರ್ಷವಾದರೂ ಉದ್ಘಾಟನೆಯಾಗಿಲ್ಲ. ಇದರಿಂದ ಜೋಗಿಹಟ್ಟಿ ಗ್ರಾಮಸ್ಥರು ಫ್ಲೋರೈಡ್‌ಯುಕ್ತ ಕೊಳವೆಬಾವಿ ನೀರನ್ನು ನೇರವಾಗಿ ಕುಡಿಯುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಸ್ಥಳಿಯರಾದ ವೀಣಾ, ರಂಗಮ್ಮ, ರೇಖಾ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-44-1399355764

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ