ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿರುವ ಮಧ್ಯೆಯೇ ಮೂರು ಮಸೂದೆಗಳ ಮಂಡನೆ
ಬೆಂಗಳೂರು: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ–ಜೆಡಿಎಸ್ ಸದಸ್ಯರು ನಿರಂತರ ಧರಣಿ ನಡೆಸುತ್ತಿರುವ ಮಧ್ಯೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದರು.
ಅಪಾರ್ಟ್‌ಮೆಂಟ್‌ನ ಮಾಲೀಕತ್ವ ಮತ್ತು ಅಂತಹ ಅಪಾರ್ಟ್‌ಮೆಂಟ್‌ಗೆ ಕೂಡಿಕೊಂಡ ಸಾಮಾನ್ಯ ಪ್ರದೇಶಗಳು, ಸೌಲಭ್ಯಗಳಲ್ಲಿನ ಅವಿಭಜಿತ ಹಿತಾಸಕ್ತಿ, ಪಾಲನ್ನು ಒದಗಿಸುವ ಹಾಗೂ ಆಡಳಿತ ನಿರ್ವಹಣೆ, ಬಳಕೆಗಾಗಿ ಕಾರ್ಯವ್ಯವಸ್ಥೆ ರೂಪಿಸಲು ‘ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ’ ಸಿದ್ಧಪಡಿಸಲಾಗಿದೆ.
ನಗರ ಪ್ರದೇಶಗಳ ಯಾವುದೇ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆಯಾಗಿ ಘೋಷಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲು ‘ಕರ್ನಾಟಕ ಮುನ್ಸಿಪಾಲಿಟಿಗಳ ಮಸೂದೆ’ ಹಾಗೂ ಕರ್ನಾಟಕ ನಗರ ಪಾಲಿಕೆಗಳ ಮಸೂದೆಗಳಿಗೆ ತಿದ್ದುಪಡಿ ತರಲಾಗಿದೆ.