‘ಬೌದ್ಧಿಕ ನಕ್ಸಲ್' ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ: ಮೋದಿಗೆ ಚಿದಂಬರಂ ತಿರುಗೇಟು

‘ಬೌದ್ಧಿಕ ನಕ್ಸಲ್' ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ: ಮೋದಿಗೆ ಚಿದಂಬರಂ ತಿರುಗೇಟು

‘ಬೌದ್ಧಿಕ ನಕ್ಸಲ್' ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ: ಮೋದಿಗೆ ಚಿದಂಬರಂ ತಿರುಗೇಟು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 'ದಿಮಾಗಿ ನಕ್ಸಲ್' (ಬೌದ್ಧಿಕ ನಕ್ಸಲ್) ಹೇಳಿಕೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ತಿರುಗೇಟು ನೀಡಿದ್ದು, ನಾನು 'ದಿಮಾಗಿ ನಕ್ಸಲ್' ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

ವ್ಯವಸ್ಥೆಯಲ್ಲಿ ಬೇರೂರಿರುವ ಮತ್ತು ನೀತಿಗಳನ್ನು ತಿರುಚುವ ಮೂಲಕ ಸಮಾಜಕ್ಕೆ ನಿರಂತರವಾಗಿ ಬೆದರಿಕೆ ಒಡ್ಡುವ 'ದಿಮಾಗಿ ನಕ್ಸಲ್'ಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇಂತಹವರನ್ನು ಗುರುತಿಸಿ ಪ್ರತ್ಯೇಕಿಸುವಂತೆ ಮೋದಿ ನಾಗರಿಕರಿಗೆ ಕರೆ ನೀಡಿದ್ದರು.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ದೇಶವು ಕಾಡುಗಳಲ್ಲಿನ ಸಶಸ್ತ್ರ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ, ಅದರ ಸೈದ್ಧಾಂತಿಕ ಬೆಂಬಲಿಗರು ಹಿಂಸೆ ಮತ್ತು ಅರಾಜಕತೆಯನ್ನು ಉತ್ತೇಜಿಸಲು ಅವಕಾಶಗಳನ್ನು ಹುಡುಕುತ್ತಿದ್ದಾರೆ ಎಂದು ಎಚ್ಚರಿಸಿದ್ದರು.

ಪ್ರಧಾನಿಗೆ 'ಎಕ್ಸ್' ಪೋಸ್ಟ್ ಮೂಲಕ ತಿರುಗೇಟು ನೀಡಿದ ಚಿದಂಬರಂ, ‘ನಾನು 'ದಿಮಾಗಿ ನಕ್ಸಲ್' ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ!’ಎಂದು ಬರೆದುಕೊಂಡಿದ್ದಾರೆ.

‘ಮಾವೋವಾದಿ ಮನಸ್ಥಿತಿಯ ಜನರು ಅಧಿಕಾರದ ವಲಯಗಳಲ್ಲಿ ಹಲವು ವರ್ಷಗಳ ಕಾಲ ಇದ್ದರು. ಸರ್ಕಾರಿ ಸಮಿತಿಗಳಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಸಾರ್ವಜನಿಕ ನೀತಿಯ ಮೇಲೆ ಪ್ರಭಾವ ಬೀರಿದ್ದರು’ ಎಂದೂ ಪ್ರಧಾನಿ ಹೇಳಿದ್ದರು.

ಈ ಸವಾಲನ್ನು ನಾವು ಹಗುರವಾಗಿ ಪರಿಗಣಿಸಬಾರದು. ಇನ್ನಷ್ಟು ಜಾಗರೂಕರಾಗಿರಬೇಕು ಎಂದು ಪ್ರಧಾನಿ ಹೇಳಿದ್ದರು.

ನಕ್ಸಲಿಸಂ ಭಾರತದ ಬಹುದೊಡ್ಡ ಭಾಗವನ್ನು ಮತ್ತು ಅಲ್ಲಿನ ಅಪಾರ ಜನಸಂಖ್ಯೆಯನ್ನು ಬಂದೂಕಿನ ಬಲದಿಂದ ತನ್ನ ಹಿಡಿತದಲ್ಲಿ ಇರಿಸಿಕೊಂಡಿತ್ತು. ದಶಕಗಳಷ್ಟು ಹಳೆಯ ಸವಾಲುಗಳಿಗೆ ಅಂತ್ಯ ಹಾಡಲೇಬೇಕು. ನಕ್ಸಲಿಸಂ ಮತ್ತು ಮಾವೋವಾದವು ಲಕ್ಷಾಂತರ ಯುವಜನರ ಭವಿಷ್ಯವನ್ನು ನಾಶಮಾಡಿವೆ. ಅಸಂಖ್ಯಾತ ತಾಯಂದಿರ ಪುತ್ರರನ್ನು ಕಸಿದುಕೊಂಡಿವೆ. ಕುಟುಂಬಗಳನ್ನು ಹಾಳುಮಾಡಿವೆ, ಪೋಷಕರ ಕನಸುಗಳನ್ನು ಛಿದ್ರಗೊಳಿಸಿವೆ ಎಂದಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ