ಗೋಕರ್ಣ| ಮೀನುಗಾರಿಕೆ ದೋಣಿ ಮುಳುಗಡೆ: ನಾಲ್ವರು ಮೀನುಗಾರರ ರಕ್ಷಣೆ

ಗೋಕರ್ಣ| ಮೀನುಗಾರಿಕೆ ದೋಣಿ ಮುಳುಗಡೆ: ನಾಲ್ವರು ಮೀನುಗಾರರ ರಕ್ಷಣೆ

ಗೋಕರ್ಣ| ಮೀನುಗಾರಿಕೆ ದೋಣಿ ಮುಳುಗಡೆ: ನಾಲ್ವರು ಮೀನುಗಾರರ ರಕ್ಷಣೆ

ಗೋಕರ್ಣ: ಸಮೀಪದ ತದಡಿಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಮೋಹನ ಹರಿಕಂತ್ರ ಎಂಬುವವರಿಗೆ ಸೇರಿದ 'ಶ್ರೀದೇವಿ' ಹೆಸರಿನ ದೋಣಿ ಭಾನುವಾರ ಮುಳುಗಡೆಯಾಗಿದೆ.

ಅಘನಾಶಿನಿ ನದಿ ಮತ್ತು ಅರಬ್ಬಿ ಸಮುದ್ರ ಸೇರುವ ಅಳಿವೆಯಲ್ಲಿ ದುರ್ಘಟನೆ ಸಂಭವಿಸಿದೆ. ಸಮುದ್ರದ ಅಲೆಯ ರಭಸಕ್ಕೆ ದೋಣಿ ಸಂಪೂರ್ಣ ಮುಳುಗಿದೆ. ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮುಳುಗುವ ಹಂತದಲ್ಲಿದ್ದ ದೋಣಿಯಲ್ಲಿದ್ದವರನ್ನು ನಾಗರಾಜ ಹರಿಕಂತ್ರ ಅವರ ಇಡುಗುಂಜಿ ವಿನಾಯಕ ಎಂಬ ಹೆಸರಿನ ದೋಣಿಯಲ್ಲಿದ್ದ ಮೀನುಗಾರರು ರಕ್ಷಣೆ ಮಾಡಿದ್ದಾರೆ. ರಕ್ಷಿಸಲ್ಪಟ್ಟ ಮೀನುಗಾರರನ್ನು ಗೋಕರ್ಣ ಪ್ರಾಥಮಿಕ ಕೇಂದ್ರಕ್ಕೆ ತಂದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಗೋಕರ್ಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಧರ ಎಸ್.ಆರ್ ತಿಳಿಸಿದ್ದಾರೆ.

ಮುಳುಗಡೆಯಾಗುತ್ತಿದ್ದ ದೋಣಿಯನ್ನು ಮತ್ತೊಂದು ದೋಣಿಗೆ ಕಟ್ಟಿ ಮೇಲೆತ್ತಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ದೋಣಿ ಮುಳುಗಿದ್ದರಿಂದ ಲಕ್ಷಾಂತರ ಮೊತ್ತದ ಹಾನಿ ಆಗಿದೆ ಎಂದು ದೋಣಿ ಮಾಲೀಕ ಮೋಹನ ಹರಿಕಂತ್ರ ಹೇಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ