ಶಹಾಬಾದ್ ರೇಷನ್‌ ಅಂಗಡಿಯಲ್ಲಿ ಪಡಿತರ ವಿತರಣೆ ಸಮಸ್ಯೆ, ಗ್ರಾಹಕರ ಪರದಾಟ

ಶಹಾಬಾದ್ ರೇಷನ್‌ ಅಂಗಡಿಯಲ್ಲಿ ಪಡಿತರ ವಿತರಣೆ ಸಮಸ್ಯೆ, ಗ್ರಾಹಕರ ಪರದಾಟ

ಶಹಾಬಾದ್ ರೇಷನ್‌ ಅಂಗಡಿಯಲ್ಲಿ ಪಡಿತರ ವಿತರಣೆ ಸಮಸ್ಯೆ, ಗ್ರಾಹಕರ ಪರದಾಟ

ಶಹಾಬಾದ್: ಶಹಾಬಾದ್‌ನ ಮುಖ್ಯ ರಸ್ತೆಯಲ್ಲಿರುವ ರೇಷನ್ ಅಂಗಡಿ (ನ್ಯಾಯ ಬೆಲೆ ಅಂಗಡಿ) 151ರಲ್ಲಿ ಪಡಿತರ ವಿತರಣೆಯ ಅವ್ಯವಸ್ಥೆಯಿಂದ ಅನೇಕ ಬಡವರು ಕೂಲಿ ಕೆಲಸ ಬಿಟ್ಟು ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಪರದಾಡುವಂತಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಅಂಗಡಿಯವರು ತಿಂಗಳಲ್ಲಿ ಕೇವಲ ಒಂದೆರಡು ದಿನ ಮಾತ್ರ ರೇಷನ್ ವಿತರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಳೆದ ತಿಂಗಳು ನೀಡಬೇಕಿದ್ದ ಪಡಿತರವನ್ನು ಈ ತಿಂಗಳಲ್ಲಿಯೂ ಸಮರ್ಪಕವಾಗಿ ವಿತರಿಸಿಲ್ಲ. ಪ್ರತಿ ಬಾರಿ ಇದೇ ರೀತಿಯ ಸಮಸ್ಯೆಯಿಂದ ಜನರಿಗೆ ಹಿಂಸೆ ಆಗುತ್ತಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ.

ರೇಷನ್ ಪಡೆಯಲು ಬೆಳಿಗ್ಗೆ 5 ಗಂಟೆಯಿಂದಲೇ ಸರದಿಯಲ್ಲಿ ನಿಂತರೂ ಬಯೋಮೆಟ್ರಿಕ್ ಆಗುತ್ತಿಲ್ಲ. ಇದರಿಂದ ಪಡಿತರ ಧಾನ್ಯ ಸಿಗುತ್ತಿಲ್ಲ. ಅಂಗಡಿಯ ಮಾಲೀಕನೇ ಇದಕ್ಕೆ ನೇರ ಹೊಣೆಯೆಂದು ಆರೋಪಿಸಿದ್ದಾರೆ.

ಈಚೆಗೆ ರೇಷನ್‌ಗಾಗಿ ಸರದಿಯಲ್ಲಿ ನಿಂತಿದ್ದ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೈ–ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಬಂದು ಸಮಾಧಾನಪಡಿಸುವಂತಾಗಿದೆ.

ಬೇರೆ ಅಂಗಡಿಯಲ್ಲಿ ಈ ಅವ್ಯವಸ್ಥೆ ಇಲ್ಲ. ಆದರೆ, ಈ ಅಂಗಡಿಯಲ್ಲಿ ಮಾತ್ರ ಪ್ರತಿ ತಿಂಗಳೂ ಇದೇ ಸಮಸ್ಯೆ. ಅರ್ಹ ಫಲಾನುಭವಿಗಳಿಗೆ ತೊಂದರೆ ಮತ್ತು ಮಾನಸಿಕ ಹಿಂಸೆ ಆಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಬಯೋಮೆಟ್ರಿಕ್ ಪಡೆಯಲು ಒಂದು ಅಥವಾ ಎರಡು ದಿನ ಮಾತ್ರ ಅಂಗಡಿ ತೆಗೆಯುತ್ತಾರೆ, ನಂತರ ತಿಂಗಳ ಕೊನೆಯ ದಿನಗಳಲ್ಲಿ ಪಡಿತರ ವಿತರಿಸುತ್ತಾರೆ. ಸರ್ವರ್ ಬರುತ್ತಿಲ್ಲ, ರೇಷನ್ ಖಾಲಿಯಾಗಿದೆ. ಜೋಳ ಮಾತ್ರ ಉಳಿದಿದೆ. ಬೇಕಾದರೆ ತಗೊಳ್ಳಿ, ಇಲ್ಲ ಅಂದ್ರೆ ಬಿಡಿ ಎಂದು ಸಾರ್ವಜನಿಕರಿಗೆ ದಬಾಯಿಸುತ್ತಾರೆ ಎಂದು ಕೆಲ ಗ್ರಾಹಕರು ‘ಪ್ರಜಾವಾಣಿ’ ಬಳಿ ಸಮಸ್ಯೆ ಹೇಳಿಕೊಂಡರು.

ನಾಗರಿಕ ಸರಬರಾಜು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಈ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-31-1766992935

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ