
ಸೋಲಾಪುರದಲ್ಲಿ ಯೋಗ ಸಮನ್ವಯ ಕೇಂದ್ರದಿಂದ ಆಧ್ಯಾತ್ಮಿಕ ಕಾರ್ಯಕ್ರಮಗಳು ಇಂದಿನಿಂದ
ಸೋಲಾಪುರ : ಯೋಗ ಸಮನ್ವಯ ಕೇಂದ್ರ, ಸೋಲಾಪುರ ಶಾಖೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆ.13 ರಿಂದ ಸೆ.19ರವರೆಗೆ ವಿವಿಧ ಧ್ಯಾನ, ಸತ್ಸಂಗ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನಿತ್ಯ ಬೆಳಿಗ್ಗೆ 5 ರಿಂದ 6 ಗಂಟೆವರೆಗೆ ಸಾಮೂಹಿಕ ಧ್ಯಾನ, ಗೀತಾ ಸ್ವಾಧ್ಯಾಯ ಹಾಗೂ ಪ್ರಾರ್ಥನೆ ಕಾರ್ಯಕ್ರಮಗಳು ನಡೆಯಲಿವೆ. ಶ್ರಾವಣ ಸೋಮವಾರಗಳಾದ ಆಗಸ್ಟ್ 17, 24, 31 ಹಾಗೂ ಸೆಪ್ಟೆಂಬರ್ 7ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 12 ಗಂಟೆಗಳ ಅಖಂಡ ಧ್ಯಾನ–ಯಜ್ಞ ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸುವವರು ಮೌನ ವ್ರತ ಆಚರಿಸಿ ಧ್ಯಾನದ ಅನುಭವ ಪಡೆಯುವಂತೆ ತಿಳಿಸಲಾಗಿದೆ.
ಪ್ರತಿ ಸೋಮವಾರ ಸಂಜೆ 6ರಿಂದ 7 ಗಂಟೆವರೆಗೆ ನಾಗಭೂಷಣಂ ಬಿರ್ದೆ ಮಹಾರಾಜರಿಂದ ಕೇನೋಪನಿಷತ್ ಗ್ರಂಥದ ಅಧ್ಯಯನ ಪ್ರವಚನ ನಡೆಯಲಿದೆ.
ಶ್ರಾವಣ ಶನಿವಾರಗಳಾದ ಆ.15, 22, 29 ಹಾಗೂ ಸೆ. 5ರಂದು ದಿನವಿಡೀ ಮೌನ ವ್ರತ ಆಚರಿಸಿ ಧ್ಯಾನ ಕುಟೀರದಲ್ಲಿ ವಿಶೇಷ ಧ್ಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ: 9822259028 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಯೋಗ ಸಮನ್ವಯ ಕೇಂದ್ರದ ವತಿಯಿಂದ ವರ್ಷಪೂರ್ತಿ ವಿವಿಧ ಸತ್ಸಂಗ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ಭಾನುವಾರ ಬೆಳಿಗ್ಗೆ 8.30ರಿಂದ 10 ಗಂಟೆವರೆಗೆ ಜವಾನ್ ನಗರದಲ್ಲಿ ಧ್ಯಾನ ಸತ್ಸಂಗ, ಪ್ರತಿ ಸೋಮವಾರ ಕರ್ಣಿಕ ನಗರದಲ್ಲಿ ಧ್ಯಾನ–ಗೀತಾ ಸ್ವಾಧ್ಯಾಯ ಹಾಗೂ ಪ್ರಾರ್ಥನೆ, ಹಾಗೂ ಪ್ರತಿ ಗುರುವಾರ ಬೆಳಿಗ್ಗೆ 9 ಗಂಟೆಗೆ ಧ್ಯಾನ ಕುಟೀರದಲ್ಲಿ ಸತ್ಸಂಗ ನಡೆಯಲಿದೆ ಎಂದು ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-26-2019418298