ತೇಜಸ್ವಿ ಸೂರ್ಯಗೆ BJYM ಅಧ್ಯಕ್ಷ ಸ್ಥಾನ ಕೈತಪ್ಪಿದ್ದೇಕೆ? ಕೇಂದ್ರ ಮಂತ್ರಿ ಸ್ಥಾನ ಪಕ್ಕಾನಾ! ಬಿಜೆಪಿ ಪ್ಲ್ಯಾನ್ ಏನು?

ತೇಜಸ್ವಿ ಸೂರ್ಯಗೆ BJYM ಅಧ್ಯಕ್ಷ ಸ್ಥಾನ ಕೈತಪ್ಪಿದ್ದೇಕೆ? ಕೇಂದ್ರ ಮಂತ್ರಿ ಸ್ಥಾನ ಪಕ್ಕಾನಾ! ಬಿಜೆಪಿ ಪ್ಲ್ಯಾನ್ ಏನು?

ತೇಜಸ್ವಿ ಸೂರ್ಯಗೆ BJYM ಅಧ್ಯಕ್ಷ ಸ್ಥಾನ ಕೈತಪ್ಪಿದ್ದೇಕೆ? ಕೇಂದ್ರ ಮಂತ್ರಿ ಸ್ಥಾನ ಪಕ್ಕಾನಾ! ಬಿಜೆಪಿ ಪ್ಲ್ಯಾನ್ ಏನು?

Tejasvi Surya: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಪದಾಧಿಕಾರಿಗಳ ಹೊಸ ತಂಡವನ್ನು ಅನಾವರಣಗೊಳಿಸಿದ್ದು, ಈ ವೇಳೆ ಕರ್ನಾಟಕ ಸಂಸದ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ (BJYM) ಸ್ಥಾನದಿಂದ ಕೈ ಬಿಡಲಾಗಿದೆ. ಈ ಮಹತ್ವದ ಬದಲಾವಣೆಯು ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟದ ಪುನರ್ ರಚನೆಯ ಮುನ್ಸೂಚನೆ ಅಂತಲೂ ಹೇಳಲಾಗುತ್ತಿದೆ. ಜೊತೆಗೆ ಬಿಜೆಪಿ 2029ರ ಲೋಕಸಭೆ ಚುನಾವಣೆಯನ್ನು ಟಾರ್ಗೆಟ್ ಮಾಡಿ ಈ ಬದಲಾವಣೆ ಮಾಡಿದೆ. ಹಾಗಾದರೆ ತೇಜಸ್ವಿ ಸೂರ್ಯ ಅವರಿಗೆ ಯಾವ ಹುದ್ದೆ ನೀಡಲಾಗುತ್ತದೆ? ಅವರನ್ನು ಕೈ ಬಿಟ್ಟಿದ್ದೇಕೆ ಎಂಬುದಕ್ಕೆ ಇಲ್ಲಿದೆ ಉತ್ತರ..

ಸುಮಾರು 14 ವರ್ಷಗಳಿಂದ ಯುವ ಮೋರ್ಚಾದಲ್ಲಿ ಯಾನ ಆರಂಭಿಸಿದ ತೇಜಸ್ವಿ ಸೂರ್ಯ ಅವರು ಕಳೆದ ಆರು ವರ್ಷಗಳಿಂದ BJYM ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮದೇ ಆದ ಮಾತುಗಾರಿಕೆ, ಭಾಷಣಗಳಿಂದ ಹೆಚ್ಚು ಗಮನ ಸೆಳೆಯುವ ವ್ಯಕ್ತಿತ್ವ ಅವರದ್ದು. ಬಿಜೆಪಿ ಯುವಪಡೆ ಮುನ್ನಡೆಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯವಾದವರು. ಲೋಕಸಭೆಯಲ್ಲೂ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿ ಗುರುತಿಸಿಕೊಂಡಿದ್ದರು. ಇದೀಗ ಅವರ BJYM ಸ್ಥಾನಕ್ಕೆ ಗುಜರಾತ್‌ನ ಹೇಮಾಂಗ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಹಾಗಾದರೆ ತೇಜಸ್ವಿ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತಾ ಬಿಜೆಪಿ..?

ಕೇಂದ್ರ ಸಚಿವರ ರೇಸಿನಲ್ಲಿ ತೇಜಸ್ವಿ ಸೂರ್ಯ!

ಬಿಗ್ ಪ್ಲ್ಯಾನ್ ಮಾಡಿಕೊಂಡೇ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು, ಪದಾಧಿಕಾರಿಗಳ ನೂತನ ಪಡೆ ರಚಿಸಿದೆ. ಬರೀ ಲೋಕಸಭಾ ಚುನಾವಣೆ ಜೊತೆಗೆ ಹಾಲಿ ಸಂಪುಟದಲ್ಲಿ ಮೇಜರ್ ಸರ್ಜರಿ ನಡೆಸಲು ಬಿಜೆಪಿ ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಅದಕ್ಕಾಗಿಯೇ ಹೆಚ್ಚು ಜನಪ್ರಿಯ ಮತ್ತು ಯುವ ನಾಯಕರನ್ನು, ಅನುಭವಿಗಳನ್ನು ಅವರ ಅರ್ಹತೆಗಿಂತ ಕಡಿಮೆ ಸ್ಥಾನದಲ್ಲಿದ್ದರೆ ಅವರಿಗೆ ಕೇಂದ್ರ ಸಚಿವ ಪುನರ್ ರಚನೆ ವೇಳೆ ಮಂತ್ರಿಗಿರಿ ಪಟ್ಟ ನೀಡಲು ಬಿಜೆಪಿ ಪ್ಲ್ಯಾನ್ ರೂಪಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನದ ಜವಾಬ್ದಾರಿಗಿಂತ ದೊಡ್ಡ ಸ್ಥಾನ ತೇಜಸ್ವಿ ಸೂರ್ಯ ಅವರಿಗೆ ಲಭಿಸುವ ನಿರೀಕ್ಷೆಗಳಿವೆ. ಏಕೆಂದರೆ ಯುವ ಮೋರ್ಚಾ ಮುನ್ನಡೆಸಿದ್ದ ತೇಜಸ್ವಿ ಅವರು ಕೇಂದ್ರ ಸಂಪುಟ ಸೇರಲು ದೊಡ್ಡ ಲಾಭಿ ಸಹ ನಡೆಸಿದ್ದಾರೆ. ಅವರ ಹೆಸರು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬಂದಿದೆ. ಸಾಮರ್ಥ್ಯ, ಎದೆಗಾರಿಕೆ ಮತ್ತು ವರ್ಚಸ್ಸು ನೋಡಿ ಮೋದಿ ಸಂಪುಟದಲ್ಲಿ ತೇಜಸ್ವಿಗೆ ಸ್ಥಾನ ನೀಡುವ ಲಕ್ಷಣಗಳು ಗೋಚರಿಸಿವೆ.

BJYM ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹೊಸ ಜವಾಬ್ದಾರಿ ನೀಡುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಕೆಳ ಹಂತದಲ್ಲಿ ಗುರುತಿಸಿಕೊಂಡ ಅನುಭವಿಗಳಿಗೆ ಮತ್ತೊಂದು ದೊಡ್ಡ ಸ್ಥಾನ ನೀಡಿರುವ ಬಿಜೆಪಿ ಈಗಾಗಲೇ ಅದೇ ಸ್ಥಾನದಲ್ಲಿದ್ದವರಿಗೆ ಮತ್ತೊಂದು ದೊಡ್ಡ ಜವಾಬ್ದಾರಿ ವಹಿಸಲು ನೀರ್ಣಯಿಸಿದಂತಿದೆ. ಅದಕ್ಕಾಗಿಯೇ ರಾಷ್ಟ್ರೀಯ ಅಧ್ಯಕ್ಷರ ಹಂತದಲ್ಲಿ ದೊಡ್ಡ ಬದಲಾವಣೆ ಆಗಿದೆ. ಇನ್ನೂ ಸಂಪುಟ್ ಪುನರ್ ರಚನೆಯೊಂದೇ ಬಾಕಿ ಇದ್ದು, ಅದರ ಮೇಲೆ ಎಲ್ಲರ ಗಮನ ನೆಟ್ಟಿದೆ.

ತೇಜಸ್ವಿ ಸೂರ್ಯ ಅವರು ಹೇಳಿದ್ದೇನು?

BJYM ಅಧ್ಯಕ್ಷಗಿರಿಗೆ ಆಯ್ಕೆಯಾದ ಹೇಮಾಂಗ್ ಜೋಶಿ ಅವರಿಗೆ ಅಭಿನಂದನೆ ತಿಳಿಸಿ ತೇಜಸ್ವಿ ಸೂರ್ಯ ಅವರು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. 14 ವರ್ಷಗಳ ಕಾಲ BJYM ಯಾನ ಆರಂಭಿಸಿದ್ದೇನೆ. ಈ ಅವಧಿಯ ನನ್ನ ಪ್ರಯಾಣ ರಾಷ್ಟ್ರೀಯ ಅಧ್ಯಕ್ಷರವರೆಗೆ ತೆಗೆದಕೊಂಡು ಹೋಯಿತು. ಇದನ್ನು ನಾನು ಊಹಿಸಿರಲಿಲ್ಲ. ಇದಕ್ಕೆ ಕಾರಣರಾದ ಪ್ರಧಾನಿ ಮೋದಿಯವರು, ಅಮಿತ್ ಶಾ, ಜೆ.ಪಿ.ನಡ್ಡಾ, ಬಿ.ಎಲ್. ಸಂತೋಷ್ ಸೇರಿದಂತೆ ಹಲವರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಈ ಮೂಲಕ ಅವರು ಮುಂದಿನ ಸ್ಥಾನ, ಜವಾಬ್ದಾರಿ ವಹಿಸಿಕೊಳ್ಳಲು ತಾವು ಖುಷಿಯಿಂದ ಸಜ್ಜಾಗಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.

BJYM ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಗುಜರಾತ್ ನ ಹೇಮಾಂಗ್ ಜೋಶಿ ಅವರು, ಕಳೆದ ಒಂದೂವರೆ ದಶಕದಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಜೊತೆಗೆ ಗುರುತಿಸಿಕೊಂಡಿದ್ದರು. ನಂತರ ಅವರು ಎಬಿವಿಪಿ ಮಾಧ್ಯಮ ಉಸ್ತುವಾರಿಯಾಗಿ, ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಬಳಿಕ ಅವರು 2013ರಿಂದ ಬಿಜೆಪಿ ಸೇರಿ ಅಲ್ಲಿಂದ ಪಕ್ಷದ ಪರವಾಗಿ ಶ್ರಮಿಸಿದರು. ಇಂದು ಅವರನ್ನು ಬಿಜೆಪಿ ವರಿಷ್ಠರು ಗುರುತಿಸಿ ಹೆಚ್ಚಿನ ಜವಾಬ್ದಾರಿ ವಹಿಸಿದ್ದಾರೆ.

tejasvi surya bjp politics minister ರಾಜಕೀಯ ಕರ್ನಾಟಕ

tejasvi surya bjp politics minister ರಾಜಕೀಯ ಕರ್ನಾಟಕ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ