Bengaluru Rains: ನಗರದಲ್ಲಿಂದು ಜೋರು ಮಳೆ, ರಜಾದಿನದ ಮೋಜಿಗೆ ಬ್ರೇಕ್: 5 ದಿನದ ಹವಾಮಾನ ವರದಿ

Bengaluru Rains: ನಗರದಲ್ಲಿಂದು ಜೋರು ಮಳೆ, ರಜಾದಿನದ ಮೋಜಿಗೆ ಬ್ರೇಕ್: 5 ದಿನದ ಹವಾಮಾನ ವರದಿ

Bengaluru Rains: ನಗರದಲ್ಲಿಂದು ಜೋರು ಮಳೆ, ರಜಾದಿನದ ಮೋಜಿಗೆ ಬ್ರೇಕ್: 5 ದಿನದ ಹವಾಮಾನ ವರದಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳ ಬಳಿಕ ಮತ್ತೆ ಮಳೆ ಸಕ್ರಿಯವಾಗಿದೆ. ಇಂದು ಭಾನುವಾರ ಸಂಜೆ ಅನೇಕ ಬಡಾವಣೆಗಳಲ್ಲಿ ಜೋರು ಮಳೆ ಸುರಿದಿದ್ದು, ಹತ್ತಾರು ವಾರ್ಡ್‌ಗಳಲ್ಲಿ ಮಳೆ ತಂಪೆರೆದಿದೆ. ಹಾಗಾದ್ರೆ ಮುಂದಿನ ಒಂದು ವಾರ ನಗರದ ಹವಾಮಾನ, ತಾಪಮಾನ ಹೇಗಿರಲಿದೆ ಎಂಬ ಮುನ್ಸೂಚನಾ ವರದಿ ಇಲ್ಲಿದೆ.

ನಗರಾದ್ಯಂತ ಕಳೆದ ವಾರ ನಿತ್ಯ ಸಂಜೆ ಜೋರು ಮಳೆ ಆಗಿದೆ. ಕಳೆದ ಎರಡು ದಿನಗಳಿಂದ ಅಷ್ಟಾಗಿ ಮಳೆ ಚುರುಕಾಗಿರಲಿಲ್ಲ. ಆದರೆ ಇಂದು ಭಾನುವಾರ ಸಂಜೆ ದಿಢೀರ್ ಮಳೆ ಆರಂಭವಾಯಿತು. ಮೈಸೂರು ರಸ್ತೆ, ಮತ್ತಿಕೆರೆ, ಮಲ್ಲೇಶ್ವರಂ, ಆರ್.ಟಿ.ನಗರ, ಸಂಜಯ್ ನಗರ, ಥಣಿಸಂದ್ರ, ಕೊಡಿಗೆಹಳ್ಳಿ, ಚಿನ್ನಸಂದ್ರ, ವಿದ್ಯಾರಣ್ಯಪುರ, ಬನ್ನೇರುಘಟ್ಟ ರಸ್ತೆ, ಬೇಗೂರು, ಕೋಣನಕುಂಟೆ, ಕೋರಮಂಗಳ, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫಿಲ್ಡ್, ಶಾಂತಿನಗರ, ಡೈರಿ ವೃತ್ತ ಸೇರಿದಂತೆ ನಗರ ಪ್ರಮುಖ ಬಡಾವಣೆ ಹಾಗೂ ಹೊರ ವಲಯದಲ್ಲಿ ಜೋರು ಮಳೆ ದಾಖಲಾಯಿತು.

ರಜಾದಿನ ಮೋಜಿಗೆ ಮಳೆ ಬ್ರೇಕ್!

ಈ ಮಳೆಯಿಂದಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ರಸ್ತೆಗಳ ಮೇಲೆ ಕೆಲ ಹೊತ್ತು ನೀರು ನಿಂತು ಸಂಚಾರ ನಿಧಾನಗತಿಯಲ್ಲಿತ್ತು. ಭಾನುವಾರ ರಜಾದಿನವಾಗಿದ್ದರಿಂದ ವಾಹನಗಳ ಸಂಚಾರ ಅಷ್ಟಾಗಿ ಇರದ ಕಾರಣ ಹೆಚ್ಚಿನ ಸಮಸ್ಯೆ ಆಗಿಲ್ಲ ಎನ್ನಲಾಗಿದೆ. ಬದಲಾಗಿ ರಜೆ ದಿನದ ಮೋಜು ಮಸ್ತಿಗೆ ಪ್ಲ್ಯಾನ್ ಮಾಡಿಕೊಂಡಿದ್ದವರಿಗೆ ಸಂಜೆಯ ಮಳೆ ತುಸು ಕಿರಿ ಕಿರಿ ಉಂಟು ಮಾಡಿತು.

ಇಂದು ಸಂಜೆ ಎಷ್ಟಿತ್ತು ತಾಪಮಾನ?

ನಗರದಲ್ಲಿ ಸಂಜೆ ಗರಿಷ್ಠ ತಾಪಮಾನ 28.5 ಡಿಗ್ರಿ ಸೆಲ್ಸಿಯಸ್ ಮತ್ತು 19.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡು ಬಂತು. ಅದೇ ರೀತಿ ಬೆಂಗಳೂರು ಇಂಟರ್‍ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ಪ್ರದೇಶದಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು ಕನಿಷ್ಠ 18.8 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಎಚ್‌ಎಎಲ್ ನಲ್ಲಿ ಏರ್ ಪೋರ್ಟ್‌ನಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ.

ಬೆಂಗಳೂರು ನಗರ ಹವಾಮಾನ ಮುನ್ಸೂಚನೆ

ಮುಂದಿನ ಮೂರು ದಿನ ನಗರಾದ್ಯಂತ ಅಲ್ಲಲ್ಲಿ ಮಬ್ಬು ವಾತಾವರಣ ಗರಿಷ್ಠ 40-30 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಚಳಿ ಇದೇ ರೀತಿ ಇರಲಿದ್ದು, ತಾಪಮಾನ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ನಿಂದ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ವರೆಗೆ ಕಂಡು ಬರಲಿದೆ ಎಂದು ಹೇಳಲಾಗಿದೆ. ನಗರದ ವಿವಿಧ ಕಡೆಗಳಲ್ಲಿ ಹಗುರದಿಂದ ಸಾಮಾನ್ಯವಾಗಿ ಮಳೆ ಆಗಲಿದೆ. ಸೆಪ್ಟಂಬರ್ 3ರ ನಂತರ ಮತ್ತೆ ಮಳೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಭಾರೀ ಮಳೆ ಸಾಧ್ಯತೆ ಇದೆ. ಇನ್ನೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಸಂಪೂರ್ಣ ದುರ್ಬಲವಾಗಿದ್ದು, ಗರಿಷ್ಠ ತಾಪಮಾನ ಬಲ ಸಾಧಿಸಿದೆ ಎಂದು ಐಎಂಡಿ ತಿಳಿಸಿದೆ.

weather rain temperature ಹವಾಮಾನ ಮಳೆ

weather rain temperature ಹವಾಮಾನ ಮಳೆ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ