BBK13 | ಕಾವೇರಿದ ಅಗ್ನಿಪರೀಕ್ಷೆಯ ತಾಪ: ಬಿಗ್ ಬಾಸ್‌ಗೆ ಹೋಗಲು ಜನಸಾಮಾನ್ಯರ ಹೋರಾಟ

BBK13 | ಕಾವೇರಿದ ಅಗ್ನಿಪರೀಕ್ಷೆಯ ತಾಪ: ಬಿಗ್ ಬಾಸ್‌ಗೆ ಹೋಗಲು ಜನಸಾಮಾನ್ಯರ ಹೋರಾಟ

BBK13 | ಕಾವೇರಿದ ಅಗ್ನಿಪರೀಕ್ಷೆಯ ತಾಪ: ಬಿಗ್ ಬಾಸ್‌ಗೆ ಹೋಗಲು ಜನಸಾಮಾನ್ಯರ ಹೋರಾಟ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್ 13ಕ್ಕೆ ಹೋಗಲು ಜನಸಾಮಾನ್ಯರು ಹೋರಾಟ ನಡೆಸುತ್ತಿದ್ದಾರೆ. ಬಿಗ್‌ ಬಾಸ್ ಅಗ್ನಿಪರೀಕ್ಷೆಯ ವೇಳೆ ತೀರ್ಪುಗಾರರು ಆಯ್ಕೆಯಾದ ಜನಸಾಮಾನ್ಯರಿಗೆ ಟಾಸ್ಕ್‌ಗಳನ್ನು ಕೊಟ್ಟಿದ್ದಾರೆ.

ಇದೇ ವೇಳೆ ಪೂರ್ಣಿಮಾ ಹಾಗೂ ಕುಮಾರಿಗೆ ಬಲೂನ್ ಒಡೆಯುವ ಟಾಸ್ಕ್ ಕೊಟ್ಟಿದ್ದಾರೆ. ಟಾಸ್ಕ್ ಶುರುವಾಗುತ್ತಿದ್ದಂತೆ ಪೂರ್ಣಿಮಾ ಅವರು ಕುಮಾರಿಯನ್ನು ತಳ್ಳಿ ಬಲೂನ್ ಅನ್ನು ಒಡೆದು ಹಾಕಿದ್ದಾರೆ. ಏಕಾಏಕಿ ತಲೆ ಸುತ್ತಿ ಕುಮಾರಿ ಕೆಳಗೆ ಬಿದ್ದಿದ್ದಾಳೆ. ಆ ಕೂಡಲೇ ಟಾಸ್ಕ್ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

ಇದೇ ಪ್ರೋಮೊವನ್ನು ಜಿಯೋ ಹಾಟ್‌ಸ್ಟಾರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ‘ಕಾವೇರಿದೆ ಅಗ್ನಿಪರೀಕ್ಷೆಯ ತಾಪ.. ಉಳಿದುಕೊಳ್ಳೋಕೆ ಹೋರಾಟ’ ಎಂದು ಅಡಿಬರಹ ಬರೆಯಲಾಗಿದೆ. ಈ ಮೂಲಕ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ತಾವು ಹೋಗಲು ತೀವ್ರ ಕಸರತ್ತು ನಡೆಸುತ್ತಿರುವುದು ಗೊತ್ತಾಗುತ್ತಿದೆ.

ಸದ್ಯ 60 ಜನರ ಪೈಕಿ ಕೆಲವರು ಮಾತ್ರ ಆಯ್ಕೆಯಾಗಿದ್ದು, ಅವರಲ್ಲಿ ಯಾರೆಲ್ಲಾ ಬಿಗ್‌ಬಾಸ್‌ ಸೀಸನ್ 13ಕ್ಕೆ ಸ್ಪರ್ಧಿಯಾಗಿ ಕಾಲಿಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ