ಬರಪೀಡಿತ ಚಿಕ್ಕಬಳ್ಳಾಪುರ ರೈತರಿಗೆ ₹73 ಕೋಟಿ ಬೆಳೆ ವಿಮೆ ಪರಿಹಾರ

ಬರಪೀಡಿತ ಚಿಕ್ಕಬಳ್ಳಾಪುರ ರೈತರಿಗೆ ₹73 ಕೋಟಿ ಬೆಳೆ ವಿಮೆ ಪರಿಹಾರ

ಬರಪೀಡಿತ ಚಿಕ್ಕಬಳ್ಳಾಪುರ ರೈತರಿಗೆ ₹73 ಕೋಟಿ ಬೆಳೆ ವಿಮೆ ಪರಿಹಾರ

ಚಿಕ್ಕಬಳ್ಳಾಪುರ: ಜಿಲ್ಲೆಯ ಎಂಟೂ ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಬರದಿಂದ ಕಂಗೆಟ್ಟಿದ್ದ, ಬೆಳೆ ಇಲ್ಲದೆ ನಷ್ಟ ಅನುಭವಿಸಿರುವ ರೈತರು ಈಗ ಸರ್ಕಾರದ ನೆರವಿನತ್ತ ದೃಷ್ಟಿ ಹರಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಬಿತ್ತನೆ ಆಗದಿರುವುದನ್ನು ಗಮನಿಸಿದ ಜಿಲ್ಲಾಡಳಿತ ಬೆಳೆ ವಿಮೆ ಮಾಡಿಸಲು ಮುಂದಾಯಿತು. ಈ ಬಗ್ಗೆ ರೈತರಲ್ಲಿ ಜಾಗೃತಿ ಸಹ ಮೂಡಿಸಿತು. ಹೀಗಿದ್ದರೂ ಬೆಳೆ ವಿಮೆಗೆ ರೈತರ ನೋಂದಣಿ ಕುಂಟಿತವಾದ ವೇಳೆ ಕೃಷಿ ಇಲಾಖೆಗೆ ಚುರುಕುಮುಟ್ಟಿಸಲಾಯಿತು. ಆ ಪರಿಣಾಮ ರಾಜ್ಯದಲ್ಲಿ ದಾಖಲೆ ಎನ್ನುವಂತೆ ಒಂದೂವರೆ ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದರು. ಕಳೆದ ವರ್ಷದ ಮುಂಗಾರು ಅವಧಿಗೆ ಹೋಲಿಸಿದರೆ ಬೆಳೆ ವಿಮೆ ಮಾಡಿಸಿದ ರೈತರು ದುಪ್ಪಟ್ಟಾದರು.

ಎಂಟೂ ತಾಲ್ಲೂಕು ಬರ ಪೀಡಿತ ಎಂದು ಘೋಷಿಸಿರುವ ಕಾರಣ ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ನಷ್ಟ ಪರಿಹಾರ ದೊರೆಯುಲಿದೆ. ಜಿಲ್ಲೆಯಲ್ಲಿ ನೆಲಗಡಲೆ, ರಾಗಿ ಮತ್ತು ಮುಸುಕಿನ ಜೋಳಕ್ಕೆ ವಿಮೆ ಮಾಡಿಸಲು ಅಧಿಸೂಚಿಸಲಾಗಿತ್ತು. ಆ ಪ್ರಕಾರ ಜಿಲ್ಲೆಯ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ₹ 73.41 ಕೋಟಿ ದೊರೆಯಲಿದೆ.

ಕಳೆದ ಮುಂಗಾರು ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 80,407 ರೈತರು ಬೆಳೆ ವಿಮೆ ಮಾಡಿಸಿದ್ದರು. ಈ ಬಾರಿ 1,52,970 ರೈತರು ಬೆಳೆ ವಿಮೆ ಮಾಡಿಸಿದ್ದಾರೆ.

ಜಿಲ್ಲೆಯಲ್ಲಿ ಮುಸುಕಿನ ಜೋಳಕ್ಕೆ ಪ್ರತಿ ಎಕರೆಗೆ ₹ 27 ಸಾವಿರ, ನೆಲಗಡಲೆಗೆ ₹ 26,160, ರಾಗಿಗೆ ₹ 19,960 ಮತ್ತು ತೊಗರಿಗೆ ₹ 23,040 ವಿಮೆ ಮೊತ್ತವಿದೆ. ಈ ಮೊತ್ತದ ಶೇ 2ರಷ್ಟನ್ನು ರೈತರು ವಂತಿಕೆ ರೂಪದಲ್ಲಿ ಭರಿಸಬೇಕು. ಕೇಂದ್ರ ಸರ್ಕಾರ ಶೇ 4 ಮತ್ತು ರಾಜ್ಯ ಸರ್ಕಾರಗಳು ಶೇ 4ರಷ್ಟು ಪಾಲನ್ನು ಭರಿಸುತ್ತವೆ. ಬಿತ್ತನೆ ವೈಫಲ್ಯ ಪರಿಗಣಿಸಿ ಶೇ 25ರಷ್ಟು, ಶೇ 50 ಮತ್ತು ಶೇ 75ರಷ್ಟಿ ಪರಿಹಾರ ದೊರೆಯುತ್ತದೆ.

ಆ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಸುಕಿನ ಜೋಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 60,633 ರೈತರು ನೋಂದಣಿ ಆಗಿದ್ದಾರೆ. ಮುಸುಕಿನ ಜೋಳದ ವಿಮೆ ಹಣಕ್ಕೆ ರೈತರ ವಂತಿಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಸೇರಿ ₹ 15.45 ಕೋಟಿ ಮೊತ್ತವನ್ನು ವಿಮೆ ಕಂಪನಿಗಳಿಗೆ ದೊರೆತಿದೆ. ಬಿತ್ತನೆ ವೈಫಲ್ಯದ ಕಾರಣದಿಂದ ವಿಮೆ ಕಂಪನಿಯು ಜಿಲ್ಲೆಯಲ್ಲಿ 76 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ₹ 38.18 ಮುಸುಕಿನ ಜೋಳದ ವಿಮೆ ಹಣ ಪಾವತಿಸಬೇಕು.

ಚೇಳೂರು ಮತ್ತು ಬಾಗೇಪಲ್ಲಿಯಲ್ಲಿ ನೆಲಗಡಲೆ ಪ್ರಮುಖ ಬೆಳೆ ಈ ಎರಡೂ ತಾಲ್ಲೂಕುಗಳಲ್ಲಿ 11,894 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ. 28 ಪಂಚಾಯಿತಿಗಳ ವ್ಯಾಪ್ತಿಯ ನೆಲೆಗಡಲೆ ಬೆಳೆಯುವ ರೈತರಿಗೆ ವಿಮೆ ಕಂಪನಿಗಳು ₹ 10.40 ಕೋಟಿ ಪರಿಹಾರದ ಹಣ ನೀಡಬೇಕು.

ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ ₹ 24.825 ಕೋಟಿಯನ್ನು ರಾಗಿ ಬೆಳೆಗಾರರು ನಷ್ಟ ಪರಿಹಾರವಾಗಿ ಪಡೆಯುವರು. ಜಿಲ್ಲೆಯಲ್ಲಿ 54,394 ರೈತರು ರಾಗಿಗೆ ವಿಮೆ ಮಾಡಿಸಿದ್ದಾರೆ. 91 ಪಂಚಾಯಿತಿಗಳ ವ್ಯಾಪ್ತಿಯ ಈ ರೈತರು 19,899 ಹೆಕ್ಟೇರ್‌ ರಾಗಿ ಬೆಳೆಗೆ ಹಣ ಪಾವತಿಸಿದ್ದಾರೆ. ಹೀಗೆ ರೈತರು ಸರ್ಕಾರಗಳ ವಂತಿಕೆಯೇ ₹ 11.047 ಕೋಟಿ ಇದೆ.

ಗೌರಿಬಿದನೂರು ತಾಲ್ಲೂಕಿನ ರೈತರು ಗರಿಷ್ಠ ಪ್ರಮಾಣದಲ್ಲಿ ವಿಮೆ ಮಾಡಿಸಿದ್ದಾರೆ. ಇಲ್ಲಿನ ರೈತರಿಗೆ ಬಿತ್ತನೆ ವೈಫಲ್ಯದ ಕಾರಣದಿಂದ ವಿಮೆ ಕಂಪನಿಯು ₹ 16.19 ಕೋಟಿ ಪಾವತಿಸಬೇಕು.

ಬೆಳೆ ವಿಮೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರ ವಂತಿಗೆ ₹ 5.94 ಕೋಟಿ ಇದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ತಲಾ ₹ 12.38 ಕೋಟಿ. ಹೀಗೆ ರೈತರು, ಸರ್ಕಾರಗಳ ಪಾಲಿನ ಮೊತ್ತ ಸೇರಿ ₹ 30.70 ಕೋಟಿ ವಿಮಾ ಕಂಪನಿ ಪಾಲಾಗುತ್ತದೆ. ಕಂಪನಿಯು ಬಿತ್ತನೆ ವೈಫಲ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ರೈತರಿಗೆ ₹ 73.41 ಕೋಟಿ ಪಾವತಿಸಬೇಕಿದೆ. ಟಾಟಾ ಎಐಜಿ ಕಂಪನಿ ವಿಮಾ ಸಂಸ್ಥೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-16-716050523

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ