ಪ್ರವಾಹ: ಮಹಾರಾಷ್ಟ್ರದ 37 ಯಾತ್ರಿಕರು ಕಠ್ಮಂಡುವಿನತ್ತ

ಪ್ರವಾಹ: ಮಹಾರಾಷ್ಟ್ರದ 37 ಯಾತ್ರಿಕರು ಕಠ್ಮಂಡುವಿನತ್ತ

ಪ್ರವಾಹ: ಮಹಾರಾಷ್ಟ್ರದ 37 ಯಾತ್ರಿಕರು ಕಠ್ಮಂಡುವಿನತ್ತ

ಮುಂಬೈ (ಪಿಟಿಐ): ಭಾರಿ ಪ್ರವಾಹದಿಂದಾಗಿ ಟಿಬೆಟ್‌ನಲ್ಲಿ ಸಿಲುಕಿದ್ದ ‌ಮಹರಾಷ್ಟ್ರದ 37 ಯಾತ್ರಿಕರು ಶುಕ್ರವಾರ ಕಠ್ಮಂಡುವಿನತ್ತ ಪ್ರಯಾಣ ಬೆಳೆಸಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಮಧ್ಯಪ್ರವೇಶದಿಂದ ಇದು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಠಾಣೆ, ಪುಣೆ, ರಾಯಗಢ, ಅಲಿಬಾಗ್‌, ಡೊಂಬಿವಲಿಯ ನಿವಾಸಿಗಳಾದ ಈ ಯಾತ್ರಿಗಳ ಗುಂಪು ಬೆಳಿಗ್ಗೆ 6 ಗಂಟೆಗೆ ಟಿಬೆಟ್‌ನ ಸಾಗಾ ಪ್ರದೇಶದಿಂದ ನ್ಯಾಲಮ್‌ ಚೆಕ್‌ಪೋಸ್ಟ್‌ ಮೂಲಕ ನೇಪಾಳದ ರಾಜಧಾನಿಯತ್ತ ಹೊರಟಿತು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಕಠ್ಮಂಡುವಿನಿಂದ ಶನಿವಾರ ಮಧ್ಯಾಹ್ನ 2 ಗಂಟೆಗೆ ಅವರ ವಿಮಾನ ನಿಗದಿಯಾಗಿದೆ ಎಂದು ಅದು ಹೇಳಿದೆ.

ಪ್ರವಾಹ ಉಂಟಾದಾಗ ಈ ಯಾತ್ರಿಗಳ ಗುಂಪು ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಮರಳುತ್ತಿತ್ತು. ಅದು ಆಗ ಸಾಗಾ ಪ್ರದೇಶದಲ್ಲಿ ಸಿಲುಕಿಕೊಂಡಿತು. ವಿಷಯ ತಿಳಿದ ಕೂಡಲೇ ಫಡಣವೀಸ್‌ ಅವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐದು ನಿಮಿಷ ಮುನ್ನ ಹೋದೆವು: ‘ವಲಸೆ ಕಚೇರಿಯತ್ತ ಪ್ರಯಾಣಿಸುತ್ತಿದ್ದಾಗ ಪ್ರವಾಹದ ಪರಿಸ್ಥಿತಿಯನ್ನು ಯಾತ್ರಿಕರು ಎದುರಿಸಿದರು. ಆದರೆ ಪ್ರವಾಹದ ನೀರು ಆ ಪ್ರದೇಶವನ್ನು ತಲುಪುವ ಐದು ನಿಮಿಷ ಮುನ್ನ ವಾಹನವು ಆ ಭಾಗವನ್ನು ದಾಟಿತ್ತು. ಹೀಗಾಗಿ ಯಾವುದೇ ಅಪಾಯ ಎದುರಾಗಲಿಲ್ಲ’ ಎಂದು ಅವರು ವಿವರಿಸಿದರು.

ನಾಪತ್ತೆಯಾದವರಲ್ಲಿ ಕೆಲ ಎನ್‌ಆರ್‌ಐಗಳು (ಅಹಮದಾಬಾದ್‌ ವರದಿ): ನೇಪಾಳದ ಭೀಕರ ಪ್ರವಾಹದಲ್ಲಿ ನಾಪತ್ತೆಯಾದ ಗುಜರಾತ್‌ ಮೂಲದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇದರಲ್ಲಿ ರಾಜ್ಯದ ಕೆಲ ಅನಿವಾಸಿ ಭಾರತೀಯರೂ ಸೇರಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದರು.

ಇವರ ಪತ್ತೆ ಕಾರ್ಯಕ್ಕೆ ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ರಾಜ್ಯ ಸರ್ಕಾರ ಸಮನ್ವಯದಿಂದ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

ನಾಪತ್ತೆಯಾದವರಲ್ಲಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ವಾಸಿಸುವ ಅನಿವಾಸಿ ಭಾರತೀಯರೂ ಇದ್ದಾರೆ. ಅವರು ಅಹಮದಾಬಾದ್‌, ಆನಂದ್‌, ರಾಜ್‌ಕೋಟ್‌, ವಲ್ಸಾದ್‌, ಸೂರತ್‌, ಖೇಡಾ, ಅಮ್ರೇಲಿ, ಗಾಂಧಿನಗರ, ವಡೋದರಾ ಜತೆ ಸಂಪರ್ಕ ಹೊಂದಿದ್ದಾರೆ ಎಂದು ರಾಜ್ಯದ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ಮಾಹಿತಿ ನೀಡಿದೆ.

ನಾಪತ್ತೆಯಾದವರಲ್ಲಿ ಕೆಲವರು ನೇಪಾಳದ ಮೂಲಕ ಕೈಲಾಸ ಮಾನಸ ಸರೋವರ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು. ಇನ್ನೂ ಕೆಲವರು ಕೊನೆಯಾದಾಗಿ ‘ಫ್ರೆಂಡ್‌ಶಿಪ್‌ ಬ್ರಿಡ್ಜ್‌’ ಮತ್ತು ಬಾಗ್ಮತಿ ಪ್ರದೇಶದಲ್ಲಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

558 ಜನರು ನಾಪತ್ತೆ– ಚೀನಾ ಮಾಹಿತಿ

ಬೀಜಿಂಗ್‌ (ಪಿಟಿಐ): ಟಿಬೆಟ್‌ನಲ್ಲಿರುವ ಚೀನಾ– ನೇಪಾಳ ಗಡಿಯಲ್ಲಿ ಸಂಭವಿಸಿದ ಹಠಾತ್‌ ಪ್ರವಾಹದಲ್ಲಿ ಐವರು ಮೃತಪಟ್ಟಿದ್ದು, 260 ವಿದೇಶಿಯರು ಸೇರಿದಂತೆ 558 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾ ಶುಕ್ರವಾರ ಹೇಳಿದೆ.

ಟಿಬೆಟ್‌ನ ಗೈರಾಂಗ್‌ ಕೌಂಟಿ ಪ್ರದೇಶದಲ್ಲಿ ಬುಧವಾರ ಹಠಾತ್‌ ಪ್ರವಾಹ ಸಂಭವಿಸಿತ್ತು. ಗಡಿ ಪ್ರದೇಶದ ಹಳ್ಳಿಗಳು, ಪಟ್ಟಣಗಳ ಮೂಲಕ ಪ್ರವಾಹದ ನೀರು ನುಗ್ಗಿ ಅಪಾರ ಹಾನಿ ಉಂಟು ಮಾಡಿದೆ. ಇದರಿಂದ ನೇಪಾಳದಲ್ಲಿ ನೂರಾರು ಜನರು ಮೃತಪಟ್ಟಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಿಸಿದ ಬಳಿಕ, ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯ ಭಾರತೀಯರು ಟಿಬೆಟ್‌ಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಕೆಲವರು ಭಾರತೀಯ ಯಾತ್ರಿಗಳು ಟಿಬೆಟ್‌–ನೇಪಾಳ ಗಡಿಯಲ್ಲಿರುವ ವಲಸೆ ಕಚೇರಿಯ ಕಟ್ಟಡದಲ್ಲಿದ್ದರು ಎಂದು ವರದಿಯಾಗಿದೆ.

ಇಲ್ಲಿನ ಬೃಹತ್‌ ವಲಸೆ ಕಚೇರಿಯ ಕಟ್ಟಡವನ್ನು ಪ್ರವಾಹದ ನೀರು ಪೂರ್ಣವಾಗಿ ಆವರಿಸಿಕೊಳ್ಳುತ್ತಿದ್ದ ದೃಶ್ಯಗಳಿರುವ ವಿಡಿಯೊ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹಂಚಿಕೆಯಾಗಿದೆ.

ಗೈರಾಂಗ್‌ ಕೌಂಟಿಯಲ್ಲಿದ್ದ 555 ಪ್ರವಾಸಿಗರು ಮತ್ತು 499 ಸ್ಥಳೀಯರನ್ನು ಸ್ಥಳಾಂತರಿಸಲಾಗಿದ್ದು, ಸದ್ಯ ಇಲ್ಲಿ ಯಾವುದೇ ಪ್ರವಾಸಿಗರು ಸಿಲುಕಿಲ್ಲ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ‘ಕ್ಸಿನ್ಹುವಾ’ ಸುದ್ದಿ ಸಂಸ್ಥೆ ತಿಳಿಸಿದೆ.

ಸುರಕ್ಷಿತವಾಗಿ ಮರಳಿದ ಯಾತ್ರಿಗಳು

ತಿರುಪತಿ: ಕೈಲಾಸ ಮಾನಸ ಸರೋವರ ಯಾತ್ರೆಗಾಗಿ ನೇಪಾಳಕ್ಕೆ ತೆರಳಿದ್ದ ಆಂಧ್ರ ಪ್ರದೇಶದ 28 ಯಾತ್ರಿಗಳು ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ಶುಕ್ರವಾರ ತಮ್ಮ ಗಮ್ಯಕ್ಕೆ ಮರಳಿದ್ದಾರೆ.

‘ಆಗಸ್ಟ್‌ 21ರಂದು ಒಟ್ಟು 28 ಯಾತ್ರಿಗಳು ಯಾತ್ರೆ ಕೈಗೊಂಡಿದ್ದರು. ಪ್ರವಾಹಕ್ಕೂ ಕೆಲ ನಿಮಿಷ ಮುನ್ನ ನಿರ್ದಿಷ್ಟ ಪ್ರದೇಶ ದಾಟಿದ್ದರಿಂದ ಯಾರಿಗೂ ತೊಂದರೆಯಾಗಿಲ್ಲ’ ಎಂದು ಯಾತ್ರೆ ಆಯೋಜಿಸಿದ್ದ ತಿರುಪತಿ ಮೂಲದ ಟ್ರಾವೆಲ್‌ ಏಜೆನ್ಸಿಯ ಮಾಲೀಕ ವೆಂಕಟರಮಣ ಪ್ರತಿಕ್ರಿಯಿಸಿದರು.

ಭಾರತ ಮತ್ತು ಟಿಬೆಟ್‌ನ ಜನರೇ, ಈ ಕಠಿಣ ಸಮಯದಲ್ಲಿ ನಿಮ್ಮೊಂದಿಗೆ ನ್ಯೂಯಾರ್ಕ್‌ ನಗರವೂ ಇದೆ

ಜೋಹ್ರಾನ್ ಮಮ್ದಾನಿ, ನ್ಯೂಯಾರ್ಕ್‌ನ ಮೇಯರ್‌

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-51-1866345830

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ