ಬಾಗಲಕೋಟೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 32 ಆಕಾಂಕ್ಷಿಗಳು

ಬಾಗಲಕೋಟೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 32 ಆಕಾಂಕ್ಷಿಗಳು

ಬಾಗಲಕೋಟೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 32 ಆಕಾಂಕ್ಷಿಗಳು

ಬಾಗಲಕೋಟೆ: ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ತೀವ್ರವಾಗಿದ್ದು, ಆಕಾಂಕ್ಷಿಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆ ವಿಧಾನಸಬಾ ಕ್ಷೇತ್ರದ 18, ಮುಧೋಳ ಕ್ಷೇತ್ರ ಇಬ್ಬರು, ಜಮಖಂಡಿ ಕ್ಷೇತ್ರದ ಇಬ್ಬರು, ಬೀಳಗಿ ಕ್ಷೇತ್ರದ ಮೂವರು, ಹುನಗುಂದ ಕ್ಷೇತ್ರದ ಇಬ್ಬರು, ತೇರದಾಳ ಕ್ಷೇತ್ರದ ಇಬ್ಬರು, ಬಾದಾಮಿ ಕ್ಷೇತ್ರದ ಒಬ್ಬರು ಆಕಾಂಕ್ಷಿಗಳಾಗಿದ್ದಾರೆ.

ಈಗ ಅಧ್ಯಕ್ಷರಾಗಿರುವ ಎಸ್‌.ಜಿ. ನಂಜಯ್ಯನಮಠ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಗಿದಿತ್ತು. ಕೆಲವು ತಿಂಗಳುಗಳ ಹಿಂದೆಯೇ ಹೊಸ ಅಧ್ಯಕ್ಷರ ಆಯ್ಕೆ ನಡೆಯಬೇಕಿತ್ತು. ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಬಂದ ಹಿನ್ನಲೆಯಲ್ಲಿ ಅವರನ್ನೇ ಮುಂದುವರಿಸಲಾಗಿತ್ತು.

ನಂಜಯ್ಯನಮಠ ಅವರು ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಹಿನ್ನಲೆಯಲ್ಲಿ ಹೊಸಬರಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಆಶಯದಂತೆ ಯುವಕರಿಗೆ ಆದ್ಯತೆ ನೀಡಲು ಯೋಚಿಸಲಾಗಿದೆ ಎಂದು ಜಿಲ್ಲಾ ವೀಕ್ಷಕ, ಎಐಸಿಸಿ ಆದಿವಾಸಿ ಘಟಕದ ಉಪಾಧ್ಯಕ್ಷ ಬೆಳ್ಳಯ್ಯ ನಾಯಕ ಹೇಳಿದ್ದಾರೆ. ಇದು ಹಲವರಲ್ಲಿ ಹೊಸ ಭರವಸೆಗಳನ್ನು ಹುಟ್ಟು ಹಾಕಿದ್ದು, ದಾಖಲೆ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಯುವಕರಿಗೆ, ಮಹಿಳೆಯರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ ಅವಕಾಶ ನೀಡಬೇಕು ಎನ್ನುವ ಮಾತುಗಳು ಆಗಾಗ ವೇದಿಕೆಗಳ ಮೇಲೆ ಕೇಳಿ ಬರುತ್ತಲೇ ಇರುತ್ತವೆ. ಅಂತಿಮವಾಗಿ ಆಯ್ಕೆ ಮಾಡುವಾಗ ಪಕ್ಷ ಸಂಘಟನೆ ಸಾಮರ್ಥ್ಯ, ಎಲ್ಲ ಸಮಾಜದವರೊಂದಿಗಿನ ಹೊಂದಾಣಿಕೆ, ಜಾತಿ ಲೆಕ್ಕಾಚಾರ, ಜಿಲ್ಲೆಯಲ್ಲಿನ ಜನಪ್ರತಿನಿಧಿಗಳ, ಹಿರಿಯ ನಾಯಕರ ಅಭಿಪ್ರಾಯ ಮುಖ್ಯವಾಗುತ್ತವೆ.

ಜಿಲ್ಲಾ, ರಾಜ್ಯ ಮಟ್ಟದ ವಿವಿಧ ಹಂತಗಳಲ್ಲಿ ಪದಾಧಿಕಾರಿಗಳಾಗಿರುವ ಹಲವರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪಕ್ಷದಲ್ಲಿ ಪದಾಧಿಕಾರಿಯಾಗಿಲ್ಲದಿರುವವರು, ಇತ್ತೀಚಿನ ವರ್ಷಗಳಲ್ಲಿ ಪಕ್ಷ ಸೇರ್ಪಡೆಗೊಂಡವರೂ ಆಕಾಂಕ್ಷಿಗಳಾಗಿದ್ದಾರೆ.

ಲಿಂಗಾಯತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಹಿಂದೂ ರಡ್ಡಿ ಜಾತಿಗೆ ಸೇರಿದವರು ಆಕಾಂಕ್ಷಿಗಳಾಗಿದ್ದಾರೆ.

ವೀಕ್ಷಕ ಬೆಳ್ಳಯ್ಯ ನಾಯಕ ಅವರು ಪ್ರತಿ ವಿಧಾನಸಭಾ ಕ್ಷೇತ್ರವಾರು ಸಭೆ ನಡೆಸಿ, ಅಲ್ಲಿನ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅದರೊಂದಿಗೆ ವೈಯಕ್ತಿಕವಾಗಿಯೂ ಹಲವಾರು ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಜಿಲ್ಲೆಯ ಹಾಲಿ, ಮಾಜಿ ಶಾಸಕರೊಂದಿಗೂ ಸಭೆ ನಡೆಸಿ, ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಆರರಿಂದ ಎಂಟು ಜನರ ಹೆಸರು ಹೈಕಮಾಂಡ್ ಮಟ್ಟಕ್ಕೆ ಶಿಫಾರಸ್ಸಾಗಲಿದೆ. ಅಧ್ಯಕ್ಷರಾಗುವ ಅದೃಷ್ಟ ಒಲಿಯಲಿದೆ ಕಾದು ನೋಡಬೇಕಿದೆ.

ನಾಗರಾಜ ಹದ್ಲಿ, ಶಿವಾನಂದ ಉದಪುಡಿ, ಚಂದ್ರಶೇಖರ ರಾಠೋಡ, ಪೀರಪ್ಪ ಮ್ಯಾಗೇರಿ, ಮಹಾದೇವ ಹಾದಿಮನಿ, ಪ್ರಶಾಂತ ರಾವ್, ಬಸವರಾಜ ಹೂವಿನಹಳ್ಳಿ, ಚಂದ್ರಪ್ಪ, ಹನಮಂತ, ಶಿವಾನಂದ ಉದುಪಡಿ, ಅನಿಲಕುಮಾರ ದಡ್ಡಿ, ರವೀಂದ್ರ ಕಲ್ಬುರ್ಗಿ, ಸಂತೋಷಕುಮಾರ ಬಗಲಿದೇಸಾಯಿ, ಮಂಜುಳಾ ಭೂಸಾರೆ, ಶ್ರೀಶೈಲ ಅಂಟಿನ, ನಿಂಗಪ್ಪ ಗಸ್ತಿ, ಎಂಡಿ. ನಸೀಮ ಮೋಕಾಶಿ, ಶ್ರೀಶೈಲ ದಳವಾಯಿ, ರಮೇಶ ಬದ್ನೂರ, ಯಮನೂರ ಕಾಂಬಳೆ, ಪರಶುರಾಮ ಮಹಾರಾಜನವರ, ಹಾಜಿಸಾಬ್ ದಂಡಿನ, ಅಯ್ಯೂಬ್‌ಖಾನ್‌ ಬಾಗೇವಾಡಿ, ಮಹಾದೇವಿ ಮೇಟಿ, ಮಂಜುನಾಥ, ಬಸವರಾಜ ಪಾತ್ರೋಟಿ, ವಿಜುಗೌಡ ಪಾಟೀಲ, ಬಾಲರಾಜ ಚವ್ಹಾಣ, ಅಬ್ದುಲ್‌ ಹಮೀದ್ ಮಲಬಾರಿ, ಇಬ್ರಾಹಿಂ ಕಲಾದಗಿ, ವೆಂಕಟಾಚಲಪತಿ ಬಳ್ಳಾರಿ, ರಾಜು ಮನ್ನಿಕೇರಿ, ಚಿದಾನಂದ ಬಿ.ಎನ್‌.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ