ಭಾರತೀಯ ರೈಲ್ವೆ ವ್ಯವಸ್ಥೆ 2nd AC ಕೋಚ್ ಮೆಚ್ಚಿಕೊಂಡ ಬ್ರಿಟನ್ ಪ್ರಜೆ, ವ್ಲಾಗರ್ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್!

ಭಾರತೀಯ ರೈಲ್ವೆ ವ್ಯವಸ್ಥೆ 2nd AC ಕೋಚ್ ಮೆಚ್ಚಿಕೊಂಡ ಬ್ರಿಟನ್ ಪ್ರಜೆ, ವ್ಲಾಗರ್ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್!

ಭಾರತೀಯ ರೈಲ್ವೆ ವ್ಯವಸ್ಥೆ 2nd AC ಕೋಚ್ ಮೆಚ್ಚಿಕೊಂಡ ಬ್ರಿಟನ್ ಪ್ರಜೆ, ವ್ಲಾಗರ್ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್!

ಭಾರತೀಯ ರೈಲ್ವೆಗೆ ತನ್ನದೇ ಇತಿಹಾಸವಿದೆ. ಭಾರತೀಯ ರೈಲ್ವೆಯು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ರೈಲು ಜಾಲವನ್ನು ಹೊಂದಿದೆ. ಪ್ರತಿದಿನವೂ ಭಾರತೀಯ ರೈಲಿನಲ್ಲಿ ಕೋಟ್ಯಾಂತರ ಜನ ಪ್ರಯಾಣಿಸುತ್ತಾರೆ. ಇದೀಗ ಭಾರತೀಯ ರೈಲ್ವೆ ಹಾಗೂ ರೈಲು ಕೋಚ್‌ಗಳ ಬಗ್ಗೆ ಬ್ರಿಟಿಷ್ ವ್ಲಾಗರ್‌ವೊಬ್ಬರು ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭಾರತೀಯ ರೈಲ್ವೆಯ ಎಸಿ (2nd AC) ಕೋಚ್‌ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಎಸಿ ಕೋಚ್ ರೈಲಿನಲ್ಲಿ ಪ್ರಯಾಣಿಸಿದ ಅನುಭವವನ್ನು ಹಂಚಿಕೊಂಡ ಬ್ರಿಟಿಷ್ ವ್ಲಾಗರ್, ದೇಶದ ಅತ್ಯಂತ ಜನಪ್ರಿಯ ದೀರ್ಘ ಪ್ರಯಾಣದ ಅನುಭವನ್ನು ತಮ್ಮ ಫಾಲೋವರ್ಸ್‌ಗಳೊಂದಿಗೆ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಓಲಿಟ್ರಾವೆಲ್ಸ್ (OllyTravels) ಹೆಸರಿನ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆದಿರುವ ಈ ವಿಡಿಯೋದಲ್ಲಿ ಅವರು, ತಮ್ಮ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿ ಪ್ರಯಾಣ ಮಾಡುವ ಓಲಿ ಅವರು ಭಾರತೀಯ ರೈಲ್ವೆ ಪ್ರಯಾಣ ಹಾಗೂ ಇಲ್ಲಿನ ಸೌಕರ್ಯಗಳ ಬಗ್ಗೆ ತಮ್ಮ ಫಾಲೋವರ್ಸ್‌ಗೆ ವಿವರಿಸಿದ್ದಾರೆ.

ಮುಂದುವರಿದು ವಿಡಿಯೋದಲ್ಲಿ ಓಲಿ ಅವರು, ಹವಾನಿಯಂತ್ರಿತ ಕೋಚ್‌ನಲ್ಲಿ ಮಲಗಲು ಇರುವ ವ್ಯವಸ್ಥೆ, ಹಾಸಿಗೆ, ಪರದೆಗಳು ಹಾಗೂ ಬೆಡ್‌ಶೀಟ್‌ಗಳನ್ನು ತೋರಿಸಿದ್ದಾರೆ. ವಿಶೇಷವಾಗಿ ಕೈಗೆಟುಕುವ ಟಿಕೆಟ್ ಬೆಲೆಯನ್ನು ಪರಿಗಣಿಸಿದರೆ ಲಭ್ಯವಿರುವ ಸೌಕರ್ಯವು ಅತ್ಯುತ್ತಮವಾಗಿದೆ ಎಂದಿದ್ದಾರೆ.

ಈ ವಿಡಿಯೋವನ್ನು ಸ್ವಲ್ಪ ಸಮಯದ ಹಿಂದೆಯೇ ಹಂಚಿಕೊಳ್ಳಬೇಕಿತ್ತು. ಆದರೆ ಸಮಯ ಸಿಗದೆ ತಡವಾಯಿತು! ಇದು ಭಾರತೀಯ ರೈಲಿನಲ್ಲಿ ನನ್ನ ಪ್ರಯಾಣದ ಅನುಭವ. ನಾವು 2AC ಕೋಚ್‌ನಲ್ಲಿ ಪ್ರಯಾಣಿಸಿದ್ದೇವೆ. ಈ ರೈಲು ದೆಹಲಿ-ಆಗ್ರಾ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಪ್ರತಿ ವ್ಯಕ್ತಿಗೆ ಸುಮಾರು £10.06 (1,300 ರೂಪಾಯಿ) ಖರ್ಚಾಯಿತು. ಅನುಭವ ತುಂಬಾ ಚೆನ್ನಾಗಿತ್ತು, ಖಂಡಿತವಾಗಿಯೂ ಶಿಫಾರಸು ಮಾಡುತ್ತೇನೆ! ನಂತರದ ಭಾರತ ಪ್ರವಾಸದಲ್ಲಿ ನಾನು 3ACನಲ್ಲೂ ಪ್ರಯಾಣಿಸಿದೆ. ಅದೂ ಉತ್ತಮವಾಗಿತ್ತು. 2ACಗೆ ಹೋಲಿಸಿದರೆ ಎರಡು ಹೆಚ್ಚು ಅನುಕೂಲಕರವಾಗಿತ್ತು ಎಂದೂ ಅವರು ಹೇಳಿದ್ದಾರೆ.

ಸ್ವಚ್ಛತೆಯ ಬಗ್ಗೆ ಮೆಚ್ಚುಗೆ

ಇನ್ನು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಓಲಿಟ್ರಾವೆಲ್ಸ್‌ ಖಾತೆಯಿಂದ ಹಂಚಿಕೊಂಡಿರುವ ವಿಡಿಯೋದಲ್ಲಿ ಓಲಿ ಅವರು, ಭಾರತೀಯ ರೈಲ್ವೆಯಲ್ಲಿನ ಸ್ವಚ್ಛತೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಸಿ ಕೋಚ್‌ನಲ್ಲಿರುವ ವ್ಯವಸ್ಥೆಯು ಸ್ವಚ್ಛವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೌಚಾಲಯದ ವ್ಯವಸ್ಥೆ ಸಹ ಸ್ವಚ್ಛವಾಗಿದೆ ಎಂದಿದ್ದಾರೆ.

ನೆಟ್ಟಿಗರು ಹೇಳದ್ದೇನು ?

ನೀವು ನಮ್ಮ ಅತಿಥಿಗಳು ಮತ್ತು ಭಾರತವು ಏಕತೆ ವೈವಿಧ್ಯತೆಗೆ ಹೆಸರುವಾಸಿಯಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ನೀವು ವಂದೇ ಭಾರತ್ ರೈಲಿನಲ್ಲೂ ಪ್ರಯಾಣಿಸಿ ಅದು ಸಹ ಅತ್ಯುತ್ತಮವಾಗಿದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ಅವರು ಕೇವಲ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ, ನೆಗೆಟಿವ್ ಪ್ರಚಾರ ಹೆಚ್ಚು ವೈರಲ್ ಆಗುತ್ತಿದೆ. ಭಾರತವು ಅಂತಹ ವ್ಯಕ್ತಿಗಳಿಗೆ ವೀಸಾಗಳನ್ನು ರದ್ದುಗೊಳಿಸಬೇಕು, ಯಾರೊಂದಿಗಾದರೂ ಎಲ್ಲಿಯಾದರೂ ಕೆಟ್ಟ ಅನುಭವ ಸಂಭವಿಸಬಹುದು, ನೀವು ಅದನ್ನು ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

indian railways viral instagram

indian railways viral instagram

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ