ಕ್ವಾಟ್ಲೆ ಕಿಚನ್ ಸೀಸನ್-2: ‘ಕುಕ್ ಆಫ್ ದಿ ಸೀಸನ್’ ಆದ ಬಿಗ್‌ಬಾಸ್ ಖ್ಯಾತಿಯ ಸೂರಜ್

ಕ್ವಾಟ್ಲೆ ಕಿಚನ್ ಸೀಸನ್-2: ‘ಕುಕ್ ಆಫ್ ದಿ ಸೀಸನ್’ ಆದ ಬಿಗ್‌ಬಾಸ್ ಖ್ಯಾತಿಯ ಸೂರಜ್

ಕ್ವಾಟ್ಲೆ ಕಿಚನ್ ಸೀಸನ್-2: ‘ಕುಕ್ ಆಫ್ ದಿ ಸೀಸನ್’ ಆದ ಬಿಗ್‌ಬಾಸ್ ಖ್ಯಾತಿಯ ಸೂರಜ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕ್ವಾಟ್ಲೆ ಕಿಚನ್ ಸೀಸನ್–2'ಗೆ ಶನಿವಾರ (ಆಗಸ್ಟ್ 15) ಅದ್ದೂರಿ ತೆರೆಬಿದ್ದಿದೆ. ಗ್ರಾಂಡ್ ಫಿನಾಲೆಯಲ್ಲಿ ಬಿಗ್‌ಬಾಸ್ ಖ್ಯಾತಿಯ ಸೂರಜ್ ಸಿಂಗ್ ‘ಕುಕ್ ಆಫ್ ದಿ ಸೀಸನ್’ ಪ್ರಶಸ್ತಿ ಗೆಲ್ಲುವ ಮೂಲಕ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಸೂರಜ್, ಓಂ ಪ್ರಕಾಶ್, ಮೇಘಾ, ಭವಿಶ್ ಗೌಡ ಹಾಗೂ ರಕ್ಷಿತಾ ಶೆಟ್ಟಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಈ ಐವರಲ್ಲಿ ಸೂರಜ್ ಸಿಂಗ್ ವಿನ್ನರ್ ಆಗಿದ್ದಾರೆ. ಅವರಿಗೆ ‘ಕುಕ್ ಆಫ್ ದಿ ಸೀಸನ್ ಟ್ರೋಫಿ’ಯ ಜೊತೆಗೆ ₹3 ಲಕ್ಷ ಬಹುಮಾನ ನೀಡಲಾಗಿದೆ. ಜತೆಗೆ ಭವಿಶ್ ಗೌಡ ಅವರು ರನ್ನರ್–ಆಪ್ ಆಗಿದ್ದಾರೆ.

ಕ್ವಾಟ್ಲೆ ಕಿಚನ್‌, ಕೇವಲ ರುಚಿಕರವಾದ ಅಡುಗೆಯನ್ನು ತಯಾರಿಸುವ ಶೋ ಆಗಿರಲಿಲ್ಲ. ಅಡುಗೆಯ ಜತೆಗೆ ಕಠಿಣ ನಿಯಮಗಳು ಹಾಗೂ ವಿವಿಧ ಸವಾಲುಗಳನ್ನು ನೀಡಲಾಗಿತ್ತು. ಸೀಸನ್ ಆರಂಭದಿಂದಲೂ, ಸೂರಜ್ ಅವರು ತಮ್ಮ ಸೃಜನಶೀಲತೆ ಹಾಗೂ ತಾಳ್ಮೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದರು.

ಗೆಲುವಿನ ಬಳಿಕ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಸೂರಜ್ ಸಿಂಗ್ ಅವರು ಫೋಟೊ ಹಂಚಿಕೊಂಡಿದ್ದಾರೆ. ‘ಕ್ವಾಟ್ಲೆ ಕಿಚನ್‌ನ ಅಡುಗೆಮನೆಗೆ ಕಾಲಿಟ್ಟ ನಾನು, ಈಗ ವಿನ್ನರ್ ಆಗಿ ಟ್ರೋಫಿ ಗೆದ್ದುಕೊಂಡೆ. ಈ ಸಂದರ್ಭ ಯಾವಾಗಲೂ ವಿಶೇಷವಾಗಿರುತ್ತದೆ’ ಎಂದು ಬರೆದುಕೊಂಡಿದ್ದಾರೆ. 

ಟ್ರೋಫಿ ಪಡೆದುಕೊಂಡ ಬಳಿಕ ಮಾತನಾಡಿರುವ ಅವರು, ‘ ಕಲರ್ಸ್‌ ವಾಹಿನಿಗೆ ತುಂಬಾ ಧನ್ಯಾವಾದಗಳನ್ನು ಅರ್ಪಿಸುತ್ತೇನೆ. ಅಡುಗೆ ಮಾಡುವುದು ನನ್ನ ಫ್ಯಾಷನ್ ಆಗಿತ್ತು. ಈಗ ಒಂದು ರಿಯಾಲಿಟಿ ಶೋನಲ್ಲಿ ಟ್ರೋಫಿ ಗೆಲ್ಲುವ ಮಟ್ಟಿಗೆ ಬೆಳೆದಿದೆ. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ. 

ಕ್ವಾಟ್ಲೆ ಕಿಚನ್‌ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಮೇಘನಾ ರಾಜ್ ಮತ್ತು ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ ಮತ್ತು ಟಿವಿಯ ಹಲವು ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಚೆಫ್ ಕೌಶಿಕ್ ಇದ್ದರು. ಈ ಕಾರ್ಯಕ್ರಮವನ್ನು ನಟಿ ಸುಷ್ಮಾ. ಕೆ ರಾವ್ ಅವರು ನಿರೂಪಣೆ ಮಾಡಿದರು. ಕ್ವಾಟ್ಲೆ ಕಿಚನ್ ಸೀಸನ್ ಮುಕ್ತಾಯವಾಗುತ್ತಿದ್ದಂತೆ, ಬಿಗ್‌ಬಾಸ್ ಸೀಸನ್ 13 ಶೀಘ್ರದಲ್ಲೇ ಆರಂಭವಾಗಲಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ