
‘ಕ್ವಾಟ್ಲೆ ಕಿಚನ್ ಸೀಸನ್–2’: ರನ್ನರ್ ಅಪ್ ಭವಿಶ್ ಗೌಡಗೆ ಸಿಕ್ಕ ಬಹುಮಾನ ಎಷ್ಟು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಶೇಷ ಕುಕ್ಕಿಂಗ್ ರಿಯಾಲಿಟಿ ಶೋ 'ಕ್ವಾಟ್ಲೆ ಕಿಚನ್ ಸೀಸನ್ 2' ಶನಿವಾರ (ಆಗಸ್ಟ್ 15) ರಂದು ಮುಕ್ತಾಯವಾಗಿದೆ. ಗ್ರಾಂಡ್ ಫಿನಾಲೆಯಲ್ಲಿ ಸೂರಜ್ ಸಿಂಗ್ ವಿನ್ನರ್ ಆದರೆ, ಕಿರುತೆರೆ ನಟ ಭವಿಶ್ ಗೌಡ ಅವರು ರನ್ನರ್ ಆಪ್ ಆಗಿದ್ದಾರೆ.
ಸೂರಜ್, ಓಂ ಪ್ರಕಾಶ್, ಮೇಘಾ, ಭವಿಶ್ ಗೌಡ ಹಾಗೂ ರಕ್ಷಿತಾ ಶೆಟ್ಟಿ ಅವರು ಈ ಸೀಸನ್‌ನ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದರು. ಅಂತಿಮ ಸುತ್ತಿನ ಸ್ಫರ್ಧೆಯಲ್ಲಿ ರನ್ನರ್ ಆಪ್ ಆಗಿರುವ ಭವಿಶ್ ಗೌಡ ಅವರಿಗೆ ₹1ಲಕ್ಷ ಬಹುಮಾನ ಹಾಗೂ ರನ್ನರ್ ಆಪ್ ಟ್ರೋಫಿಯನ್ನು ನೀಡಲಾಗಿದೆ.
ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ರನ್ನರ್ ಆಪ್ ಆದ ಫೋಟೊಗಳನ್ನು ಹಂಚಿಕೊಂಡಿರುವ ಭವಿಶ್ ಗೌಡ, ಕ್ವಾಟ್ಲೆ ಕಿಚನ್ ಸೀಸನ್–2ನ ಅನುಭವವನ್ನು ಹಂಚಿಕೊಂಡಿದ್ದಾರೆ. ‘ಈ ಪಯಣವು ಉತ್ಸಾಹ ಮತ್ತು ಮರೆಯಲಾಗದ ಕ್ಷಣಗಳಿಂದ ತುಂಬಿದೆ’ ಎಂದು ಬರೆದುಕೊಂಡಿದ್ದಾರೆ.
‘ಕ್ವಾಟ್ಲೆ ಕಿಚನ್‌ನಲ್ಲಿ ನೀಡಲಾಗುತ್ತಿದ್ದ ಪ್ರತಿಯೊಂದು ಸವಾಲುಗಳು ಹೆಚ್ಚು ಕಲಿಯಲು ಹಾಗೂ ನನ್ನನ್ನು ನಾನು ಉತ್ತಮಪಡಿಸಿಕೊಳ್ಳಲು ಪ್ರೇರಣೆಯಾಗಿತ್ತು. ರನ್ನರ್ ಆಪ್ ಆಗಿರುವುದಕ್ಕೆ ನಿಜಕ್ಕೂ ಹೆಮ್ಮೆಪಡುತ್ತೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆಗಳು’ ಎಂದು ಬರೆದುಕೊಂಡಿದ್ದಾರೆ.
’ಇಂತಹ ವೇದಿಕೆಯಲ್ಲಿ ಭಾಗಿಯಾಗುವುದಕ್ಕೆ ಅವಕಾಶ ಮಾಡಿಕೊಟ್ಟ ಇಡೀ ‘ಕ್ವಾಟ್ಲೆ ಕಿಚನ್ ಸೀಸನ್ 2’ ತಂಡಕ್ಕೆ ವಿಶೇಷ ಧನ್ಯವಾದಗಳು. ಇಲ್ಲಿನ ಅನುಭವ ಹಾಗೂ ನೆನಪುಗಳನ್ನು ಸದಾ ನೆನಪಿಡುತ್ತೇನೆ. ಕ್ವಾಟ್ಲೆ ಕಿಚನ್‌ನ ರನ್ನರ್-ಅಪ್ ಆಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.