26 ವರ್ಷಗಳ ಹಿಂದಿನ ಸುದೀಪ್; ಅಪರೂಪದ ಫೋಟೊ ಹಂಚಿಕೊಂಡ ನಟಿ ಸಂಗೀತಾ ಅನಿಲ್

26 ವರ್ಷಗಳ ಹಿಂದಿನ ಸುದೀಪ್; ಅಪರೂಪದ ಫೋಟೊ ಹಂಚಿಕೊಂಡ ನಟಿ ಸಂಗೀತಾ ಅನಿಲ್

26 ವರ್ಷಗಳ ಹಿಂದಿನ ಸುದೀಪ್; ಅಪರೂಪದ ಫೋಟೊ ಹಂಚಿಕೊಂಡ ನಟಿ ಸಂಗೀತಾ ಅನಿಲ್

ಅಭಿನಯ ಚಕ್ರವರ್ತಿ, ಬಾದ್‌ಶಾ ಕಿಚ್ಚ ಸುದೀಪ್ ಅವರ ಅಪರೂಪದ ಫೋಟೊವೊಂದನ್ನು ನಟಿ ಸಂಗೀತಾ ಅನಿಲ್ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಗ್ಯಾಲರಿಯಲ್ಲಿ ಸಿಕ್ಕ 26 ವರ್ಷಗಳ ಹಳೆಯ ವಿಶೇಷ ಫೋಟೊವನ್ನು ಹಂಚಿಕೊಂಡು, ಸುದೀಪ್ ಅವರ ಆರಂಭಿಕ ದಿನಗಳ ಧಾರಾವಾಹಿಯ ನೆನಪುಗಳನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ನನ್ನ ಧಾರಾವಾಹಿಯ ನಾಯಕ, ಇಂದಿನ ಸ್ಯಾಂಡಲ್‌ವುಡ್ ಬಾದ್‌ಶಾ ಎಂದ‌ ನಟಿ

‘ಇವರಾರು ಎಂದು ಊಹಿಸಬಲ್ಲಿರಾ? ನನ್ನ ಹಳೆಯ ಆಲ್ಬಂನಲ್ಲಿ ಈ ಫೋಟೊ ಸಿಕ್ಕಿತು. ನನ್ನದೊಂದು ಧಾರಾವಾಹಿಯಲ್ಲಿ ಇವರೇ ನನಗೆ ನಾಯಕರಾಗಿದ್ದರು. ಆದರೆ ಇಂದು ಇಡೀ ಕನ್ನಡ ಚಿತ್ರರಂಗದ ಬಾದ್‌ಶಾ ಆಗಿ ಹೊರಹೊಮ್ಮಿದ್ದಾರೆ. ಇದು 26 ವರ್ಷಗಳಷ್ಟು ಹಳೆಯ ಫೋಟೊ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ’ ಎಂದಿದ್ದಾರೆ.

‘ನಮ್ಮ ಪ್ರೀತಿಯ ಕಿಚ್ಚ ಸುದೀಪ್ ಅವರ ಬೆಳವಣಿಗೆಯನ್ನು ನೋಡಿ ನನಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆಯಾಗುತ್ತಿದೆ. ಈ ಫೋಟೊ ಅಷ್ಟಾಗಿ ಸ್ಪಷ್ಟವಾಗಿಲ್ಲ, ದಯವಿಟ್ಟು ಕ್ಷಮಿಸಿ. ಅಂದಹಾಗೆ, ಈ ಧಾರಾವಾಹಿಯ ಹೆಸರೇನು ಎಂದು ಊಹಿಸಬಲ್ಲಿರಾ? ಎಂದು ಬರೆದುಕೊಂಡಿದ್ದಾರೆ.

ಸುದೀಪ್ ಅವರ ಆರಂಭಿಕ ಅಭಿನಯ ಪಯಣವನ್ನು ನೆನಪಿಸುವ ಈ ಅಪರೂಪದ ಛಾಯಾಚಿತ್ರಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ. ‘ಪ್ರೇಮದ ಕಾದಂಬರಿ’ ಎಂದು ಧಾರಾವಾಹಿಯ ಹೆಸರನ್ನು ಊಹಿಸಿ ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

Post a Comment

If u have any queries, Please let us know

Previous Post Next Post