26 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...

26 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...

26 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ವಿಜಯಪುರದ ಭೂತನಾಳ ಕೆರೆಯಲ್ಲಿ ಆರು ಶವ ಪತ್ತೆ; ತನಿಖೆ ಚುರುಕು

ವಿಜಯಪುರ: ನಗರದ ಹೊರ ವಲಯದಲ್ಲಿ ಇರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ 2 ಮಕ್ಕಳು, 4 ಮಹಿಳೆಯರು ಸೇರಿದಂತೆ 6 ಶವಗಳು ಬುಧವಾರ ಬೆಳಿಗ್ಗೆ ಪತ್ತೆಯಾಗಿವೆ.

ಪಾಕ್ ಪರಮಾಣು ನೆಲೆ ಮೇಲೆ ದಾಳಿ ಮಾಡಿತ್ತೇ ಭಾರತ? ಮಾಜಿ ಸಿಡಿಎಸ್ ಹೇಳಿದ್ದಿಷ್ಟು...

ನವದೆಹಲಿ: ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ವೇಳೆ ಭಾರತವು ಪಾಕಿಸ್ತಾನದ ಕಿರಾನಾ ಬೆಟ್ಟದಲ್ಲಿರುವ ಪರಮಾಣು ನೆಲೆ ಮೇಲೆ ದಾಳಿ ಮಾಡಿತ್ತು ಎಂಬ ವದಂತಿಗೆ ಸಂಬಂಧಿಸಿದಂತೆ ಮಾಜಿ ಸೇನಾ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಅನಿಲ್‌ ಚೌಹಾಣ್‌ ಸ್ಪಷ್ಟನೆ ನೀಡಿದ್ದಾರೆ.

X Reviews | ರಾಯ ಬಂದ ರಾಯ: ‘ಟಾಕ್ಸಿಕ್‌’ನಲ್ಲಿ ಯಶ್ ಸ್ವಾಗ್‌ಗೆ ಫ್ಯಾನ್ಸ್ ಫಿದಾ

ಕನ್ನಡಿಗ ಯಶ್ ನಟನೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಜಾಗತಿಕವಾಗಿ ಬಿಡುಗಡೆಯಾಗಿದೆ. ಕೆಜಿಎಫ್–ಚಾಪ್ಟರ್ 2 ಬಂದ ನಾಲ್ಕು ವರ್ಷಗಳ ನಂತರ ಯಶ್ ಬೆಳ್ಳಿತೆರೆಗೆ ಮರಳಿರುವುದರಿಂದ ಈ ಚಿತ್ರದ ಮೇಲೆ ನಿರೀಕ್ಷೆಗಳು ಮುಗಿಲು ಮುಟ್ಟಿವೆ.

ಬೆಳೆ ವಿಮೆ ನೋಂದಣಿ: 31ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ಯಡಿ 2026ನೇ ಸಾಲಿನ ಬೆಳೆ ವಿಮೆ ನೋಂದಣಿ ಅವಧಿಯನ್ನು ಇದೇ 31ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅವಧಿ ವಿಸ್ತರಿಸುವಂತೆ ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಹೆಚ್ಚಿನ ಸಂಖ್ಯೆಯ ರೈತರು ಸಕಾಲದಲ್ಲಿ ವಿಮೆ ನೋಂದಣಿ ಮಾಡಿಕೊಳ್ಳಲು ಸಾಧ್ಯ ಆಗಿಲ್ಲ. ಹೀಗಾಗಿ, ಅವಧಿ ವಿಸ್ತರಿಸುವಂತೆ ಪತ್ರದಲ್ಲಿ ಕೋರಲಾಗಿತ್ತು.

ಅರ್ಹ ಮತದಾರರ ಹೆಸರು ಕೈತಪ್ಪದಂತೆ ಮುನ್ನೆಚ್ಚರಿಕೆ ವಹಿಸಿ: ಆಯೋಗಕ್ಕೆ ಡಿಕೆಶಿ ಪತ್ರ

ಬೆಂಗಳೂರು: ‘ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ವೇಳೆ ಅರ್ಹ ಮತದಾರರ ಹೆಸರುಗಳು ಕೈತಪ್ಪದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಕೆಪಿಎಸ್‌ಸಿ ಸ್ಟ್ರಾಂಗ್‌ ರೂಮ್‌ಗೆ ಲಗ್ಗೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಕ್ರಮಗಳ ತನಿಖೆಯನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಿಗಿಗೊಳಿಸಿರುವ ಮಧ್ಯೆಯೇ, ತನ್ನ ಕಾರ್ಯಾಚರಣೆಯನ್ನು ಸಿಐಡಿ ಬಿರುಸುಗೊಳಿಸಿದೆ.

ಅವಳಿ ಕೊಲೆ ಪ್ರಕರಣ: 45 ವರ್ಷ ಕೋರ್ಟ್‌ಗೆ ಅಲೆದ ಅಪರಾಧಿ

ನವದೆಹಲಿ: ಜಾರ್ಖಂಡ್‌ನಲ್ಲಿ ನಡೆದಿದ್ದ ಅವಳಿ ಕೊಲೆ ಪ್ರಕರಣವೊಂದರಲ್ಲಿ ಸುದೀರ್ಘ 45 ವರ್ಷ ಕಾನೂನು ಹೋರಾಟ ನಡೆದಿರುವುದನ್ನು ‘ನ್ಯಾಯಾಂಗ ವ್ಯವಸ್ಥೆಯ ವೈಫಲ್ಯ’ ಎಂದಿರುವ ಸುಪ್ರೀಂ ಕೋರ್ಟ್, 70 ವರ್ಷದ ಸೈಮನ್‌ ಸೊರೇನ್‌ ಎಂಬಾತನ ಶಿಕ್ಷೆಯನ್ನು ಅಮಾನತುಗೊಳಿಸಿ, ಬಿಡುಗಡೆಗೆ ಆದೇಶಿಸಿದೆ.

ಪೊಲೀಸರಿಗೆ ಹೈಟೆಕ್ ಮೊಬೈಲ್ ಶೌಚಾಲಯ

ಬೆಂಗಳೂರು: ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಯ ಅನುಕೂಲಕ್ಕಾಗಿ ‘ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ’ ಸ್ವಯಂ ಸೇವಾ ಸಂಸ್ಥೆಯು ಮೂರು ಹೈಟೆಕ್ ಮೊಬೈಲ್ ಶೌಚಾಲಯ ‍ವಾಹನಗಳನ್ನು ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಿದೆ. 

2026ರ ಆಗಸ್ಟ್ 26: ಸಂಪಾದಕೀಯ ಪಾಡ್‌ಕಾಸ್ಟ್ ಕೇಳಿ

ಜವಾಬ್ದಾರಿಯಿಲ್ಲದ ನಡವಳಿಕೆಯಿಂದಾಗಿ ವ್ಯರ್ಥವಾದ ಕಲಾಪ ಮತ್ತು ಅದರಿಂದ ಪ್ರಜಾಪ್ರಭುತ್ವಕ್ಕೆ ಉಂಟಾದ ನಷ್ಟದ ಕುರಿತಾದ ಸಂಪಾದಕೀಯ ಪಾಡ್‌ಕಾಸ್ಟ್ ಇಲ್ಲಿದೆ.

ಟಾಕ್ಸಿಕ್ ಸಿನಿಮಾ ಹೃದಯದಿಂದ ಕಟ್ಟಿದ ಜಗತ್ತು: ಬಿಡುಗಡೆಗೂ ಮುನ್ನ ಯಶ್ ಸಂದೇಶ

ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌ ಅಪ್ಸ್‌’ ಇಂದು (ಆಗಸ್ಟ್‌ 26, ಗುರುವಾರ) ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ