24 ಲಕ್ಷ ಮಂದಿಗೆ ತಲಾ 45 ಸಾವಿರ ರೂ. ಕೊಟ್ಟ ಶ್ರೀಮಂತ ದೇಶ! ಯಾರಿಗೆ, ಯಾಕಿದು?

24 ಲಕ್ಷ ಮಂದಿಗೆ ತಲಾ 45 ಸಾವಿರ ರೂ. ಕೊಟ್ಟ ಶ್ರೀಮಂತ ದೇಶ! ಯಾರಿಗೆ, ಯಾಕಿದು?

24 ಲಕ್ಷ ಮಂದಿಗೆ ತಲಾ 45 ಸಾವಿರ ರೂ. ಕೊಟ್ಟ ಶ್ರೀಮಂತ ದೇಶ! ಯಾರಿಗೆ, ಯಾಕಿದು?

ಕರ್ನಾಟಕದಲ್ಲಿ ಪ್ರತಿ ತಿಂಗಳೂ ಮಹಿಳೆಯರಿಗೆ 2000 ರೂ. ನೀಡುವುದು ನಿಮಗೆ ಗೊತ್ತು. ದೇಶದ ಬಹುತೇಕ ರಾಜ್ಯಗಳಲ್ಲಿ ಇಂದು ಇದರಂತೆ ನೇರ ಹಣ ಕೊಡಲಾಗುತ್ತಿದೆ. ಆದರೆ ಒಂದು ದೇಶ ಮಾತ್ರ ಅದರ 24 ಪ್ರಜೆಗಳಿಗೆ ತಲಾ ಅಲ್ಲಿನ 600 ಡಾಲರ್‌ನಂತೆ (ಅಂದರೆ ಭಾರತದ ಕರೆನ್ಸಿಯಲ್ಲಿ ಸುಮಾರು 45 ಸಾವಿರ ರೂ.) ಕೊಡುತ್ತಿದೆ. ಯಾವ ದೇಶ, ಯಾಕೆ ಇದು?

ವಿಶ್ವದ ಶ್ರೀಮಂತ ರಾಷ್ಟ್ರಗಳ ಪೈಕಿ ಒಂದಾಗಿರುವ ಸಿಂಗಾಪುರ ಹೀಗೆ ಮಾಡಿದೆ. ಹೆಚ್ಚುತ್ತಿರುವ ಜೀವನ ವೆಚ್ಚದ ಹೊರೆ ಎದುರಿಸುತ್ತಿರುವ ನಾಗರಿಕರಿಗೆ ಅದು ಒದಗಿಸಿದ ಪರಿಹಾರವಿದು. 2026ರ ಸೆಪ್ಟೆಂಬರ್‌ನಲ್ಲಿ 24 ಲಕ್ಷಕ್ಕೂ ಹೆಚ್ಚು ಸಿಂಗಾಪುರದ ನಾಗರಿಕರಿಗೆ ಒಮ್ಮೆ ಮಾತ್ರ 400 ಡಾಲರ್‌ನಿಂದ 600 ಡಾಲರ್‌ವರೆಗೆ ನಗದು ನೆರವು ನೀಡಲಾಗುತ್ತಿದೆ.

ಜೀವನ ವೆಚ್ಚ ವಿಶೇಷ ಪಾವತಿ ಎಂಬ ಹೆಸರಿನ ಈ ಯೋಜನೆಯಡಿ ಈ ಹಣವನ್ನು ಸೆಪ್ಟೆಂಬರ್ 9ರಿಂದ ಅರ್ಹರಿಗೆ ನೀಡಲು ಆರಂಭಿಸಲಾಗುತ್ತಿದೆ. ಈ ನೆರವನ್ನು ಸರಕಾರ ಆರಂಭದಲ್ಲಿ ಕಡಿಮೆ ಮೊತ್ತದಲ್ಲಿ ಘೋಷಿಸಿತ್ತು. ಬಳಿಕ ಜೀವನ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ಮೊತ್ತವನ್ನು ಹೆಚ್ಚಿಸಲಾಗಿದೆ.

ಸಿಂಗಾಪುರದ ವಯಸ್ಕ ನಾಗರಿಕರಲ್ಲಿ ಜೀವನ ವೆಚ್ಚದ ಹೆಚ್ಚುವರಿ ಹೊರೆ ಇರುವವರಿಗೆ ಈ ವಿಶೇಷ ಪಾವತಿ ನೀಡಲಾಗುತ್ತಿದೆ. ಅರ್ಹತೆ ಪಡೆಯಲು ಕೆಲವು ಷರತ್ತುಗಳನ್ನು ಪೂರೈಸಬೇಕು.

* ಸಿಂಗಾಪುರದ ನಾಗರಿಕರಾಗಿದ್ದು, ಸಿಂಗಾಪುರದಲ್ಲೇ ವಾಸಿಸುತ್ತಿರಬೇಕು.

* 2026ರಲ್ಲಿ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.

* 2025ರ ತೆರಿಗೆ ಮೌಲ್ಯಮಾಪನ ವರ್ಷದಲ್ಲಿ ಅವರ ತೆರಿಗೆಯುಕ್ತ ಆದಾಯ 100,000 ಡಾಲರ್‌ಗಿಂತ ಹೆಚ್ಚಿರಬಾರದು.

* ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರಬಾರದು.

* ಇದರ ಜತೆಗೆ ಫಲಾನುಭವಿಯ ಮನೆಯ ಆನ್ಯುಯಲ್ ವ್ಯಾಲ್ಯುವನ್ನು ಕೂಡ ಸರ್ಕಾರ ಪರಿಗಣಿಸುತ್ತದೆ.

ಅರ್ಹ ನಾಗರಿಕರಿಗೆ 400, 500 ಅಥವಾ 600 ಸಿಂಗಾಪುರ ಡಾಲರ್ ಸಿಗಲಿದೆ. ಕಡಿಮೆ ಆದಾಯ ಹೊಂದಿರುವವರಿಗೆ ಗರಿಷ್ಠ 600 ಡಾಲರ್ ಸಿಗುವ ಸಾಧ್ಯತೆ ಇದೆ. ಉದಾಹರಣೆಗೆ, ಆದಾಯ 22,000 ಡಾಲರ್ ಅಥವಾ ಅದಕ್ಕಿಂತ ಕಡಿಮೆ ಇದ್ದು, ಮನೆಯ ಆನ್ಯುಯಲ್ ವ್ಯಾಲ್ಯು 15,000 ಡಾಲರ್ ಅಥವಾ ಅದಕ್ಕಿಂತ ಕಡಿಮೆ ಇದ್ದರೆ 600 ಡಾಲರ್ ಸಿಗಲಿದೆ. ಮನೆಯ ಮೌಲ್ಯ ಹೆಚ್ಚಿದ್ದರೆ ಈ ಮೊತ್ತ 500 ಅಥವಾ 400ಕ್ಕೆ ಇಳಿಯಬಹುದು. ಹೆಚ್ಚಿನ ಆದಾಯ ಹೊಂದಿರುವವರಿಗೆ ಸಾಮಾನ್ಯವಾಗಿ 400 ಪಾವತಿಸಲಾಗುತ್ತದೆ.

ಯಾಕೆ ಈ ಹಣ ನೀಡುವಿಕೆ? ಎಲ್ಲ ದೇಶಗಳಲ್ಲಿ ಸರಕಾರಗಳು ಇಂಥ ಹಣ ನೀಡುವ ಬಗ್ಗೆ ಇಂದು ಯೋಚಿಸುತ್ತಿವೆ. ಹಣದುಬ್ಬರದಿಂದಾಗಿ ಜೀವನ ವೆಚ್ಚ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಎಲ್ಲದರ ಬೆಲೆಯೇರಿಕೆಯಾಗಿದೆ. ಹಾಲು ಹಣ್ಣು ಮೊದಲಾದ ಪೌಷ್ಟಿಕ ಆಹಾರ ಖರೀದಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಗಳ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದು ಈ ನೆರವಿನ ಪ್ರಮುಖ ಉದ್ದೇಶ. 2026ರ ಬಜೆಟ್‌ನಲ್ಲಿ ಈ ಮೊತ್ತ ಹೆಚ್ಚಿಸಲಾಗಿತ್ತು.

ಒಟ್ಟಾರೆ 24 ಲಕ್ಷಕ್ಕೂ ಹೆಚ್ಚು ವಯಸ್ಕ ಸಿಂಗಾಪುರದ ನಾಗರಿಕರು ಇದರ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಇದರ ಜತೆಗೆ ಕುಟುಂಬಗಳ ಖರ್ಚಿನ ಹೊರೆ ಕಡಿಮೆ ಮಾಡಲು ಸರ್ಕಾರ ಹಲವು ಇತರ ನೆರವು ಕ್ರಮಗಳನ್ನೂ ಕೈಗೊಂಡಿದೆ.

ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 2036ರ ವೇಳೆಗೆ ಹಣ ಅಷ್ಟೊಂದು ಮುಖ್ಯವಾಗಿರುವುದಿಲ್ಲ ಎಂದಿದ್ದ. ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್‌ಗಳ ಬೆಳವಣಿಗೆ ಮಾನವ ಸಮಾಜದ ಆರ್ಥಿಕ ವ್ಯವಸ್ಥೆಯನ್ನೇ ಬದಲಿಸಬಹುದು. ಮುಂದಿನ ಹತ್ತು ವರ್ಷಗಳಲ್ಲಿ ಎಐ ಮತ್ತು ಹ್ಯೂಮನಾಯ್ಡ್ ರೋಬೋಟ್‌ಗಳು ಭಾರಿ ಪ್ರಮಾಣದಲ್ಲಿ ಸರಕು ಮತ್ತು ಸೇವೆಗಳನ್ನು ಉತ್ಪಾದಿಸಲು ಆರಂಭಿಸಬಹುದು. ಉತ್ಪಾದನೆಯ ಪ್ರಮಾಣ ಮನುಷ್ಯರು ಬಳಸಲು ಸಾಧ್ಯವಾಗುವುದಕ್ಕಿಂತಲೂ ಹೆಚ್ಚಾದರೆ, ಆಹಾರ, ಮನೆ, ಸಾರಿಗೆ ಮತ್ತು ಮನರಂಜನೆಯಂತಹ ಅಗತ್ಯಗಳಿಗೆ ಹಣದ ಅವಶ್ಯಕತೆಯೇ ಕಡಿಮೆಯಾಗಬಹುದು ಎಂದಿದ್ದ. ಅದು ನಿಜವಾಗುವಂತೆ, ಸರಕಾರಗಳೂ ಈಗ ಜನರಿಗೆ ಹಣ ಒದಗಿಸಲು ಆರಂಭಿಸಿವೆ. ಬಹುಶಃ ಬಡವರಿಗೂ, ದುಡಿಯುವ ಅಗತ್ಯ ಇಲ್ಲದಾಗಬಹುದು!

singapore cash money life

singapore cash money life

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ