
ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿಯ ಆಪ್ತನ ಹತ್ಯೆ ಪ್ರಕರಣ: ಬಿಜೆಪಿಯ 2 ಕಾರ್ಯಕರ್ತರ ಬಂಧನ: ಜೆಇಎಂ ಶಂಕಿತನೂ ವಶಕ್ಕೆ!
ಪಶ್ಚಿಮ ಬಂಗಾಳದಲ್ಲಿ ಈಚೆಗೆ ನಡೆದಿದ್ದ ಭೀಕರ ಹತ್ಯೆ ಪ್ರಕರಣವು ಇದೀಗ ಬಿಜೆಪಿಗೆ ಮುಖಭಂಗವನ್ನು ತಂದೊಡ್ಡಿದೆ. ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರನ್ನು ಕೇಂದ್ರ ತನಿಖಾ ದಳ (CBI) ಗುರುವಾರ ಬಂಧಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕನನ್ನುನ ಕೊಲೆ ಮಾಡಿದವರು ತೃಣಮೂಲ ಕಾಂಗ್ರೆಸ್ ಕಡೆಯವರು ಎಂದು ಬಿಜೆಪಿ ಅರೋಪಿಸಿತ್ತು. ಆದರೆ ಇದೀಗ ಬಿಜೆಪಿಯ ಕಾರ್ಯಕರ್ತರೇ ಈ ಕೊಲೆ ಮಾಡಿದ್ದಾರೆ ಎಂದು ಬಹಿರಂಗವಾಗಿದೆ. ಈ ತನಿಖೆ ಹೇಗೆ ನಡೆಯಿತು, ಏನಿದು ಪ್ರಕರಣದ ಹಿನ್ನೆಲೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಿಜೆಪಿ ಇಬ್ಬರು ಕಾರ್ಯಕರ್ತರು (ಸಹೋದರರನ್ನು) ಸಿಬಿಐ ಅಧಿಕಾರಿಗಳು ಬಂದಿಸಿದ್ದಾರೆ. ಇಬ್ಬರು ಆರೋಪಿಗಳಾದ ಸಾಗರ್ ಸೋಂಕರ್ ಮತ್ತು ಸಾಹೇಬ್ ಸೋಂಕರ್ ಎನ್ನುವ ಸಹೋದರರನ್ನು ಬಂಧಿಸಲಾಗಿದೆ.
ಈ ಆರೋಪಿಗಳು ಚಂದ್ರನಾಥ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಸುವೇಂಧು ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮೂರು ದಿನಗಳ ಮೊದಲು ಮೇ 6 ರಂದು ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣೆ ಫಲಿತಾಂಶವು ಮೇ 4ರಂದು ಪ್ರಕಟವಾಗಿತ್ತು.
ಕೊಲೆ ಆರೋಪದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪದ ಮೇಲೆ ಸಾಗರ್ ಸೋಂಕರ್ ಮತ್ತು ಸಾಹೇಬ್ ಸೋಂಕರ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಗುಂಡು ಹಾರಿಸುವುದಕ್ಕೆ ಸಹಾಯ ಮಾಡಿರುವುದು, ಕೊಲೆಗೆ ಸಹಾಯ ಮಾಡಿದ ಆರೋಪದ ಮೇಲೆ ಈ ಇಬ್ಬರನ್ನು ಬಂಧಿಸಿರುವುದಾಗಿ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಬಿಐ ಅಧಿಕಾರಿಗಳು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದರು. ಕೆಲವು ಆರೋಪಿಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬಂಧಿಸಲಾಗಿತ್ತು. ಇದೀಗ ಬಂಧಿಸಿರುವ ಇಬ್ಬರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಅಲ್ಲದೆ ರಥ್ ಅವರ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ಅವರು ಎದುರಾಳಿ ರಾಜಕೀಯ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮೇಲೆ ನಿಗಾ ಇರಿಸಿದ್ದ ವ್ಯಕ್ತಿ ಬಂಧನ!
ಇನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ಕಾರ್ಯಕರ್ತನೆಂದು ಶಂಕಿಸಲಾಗಿರುವ 24 ವರ್ಷದ ವ್ಯಕ್ತಿಯನ್ನು ಗುರುವಾರ ರಾತ್ರಿ ಬುರ್ದ್ವಾನ್‌ನ ಗೇಟೆಡ್ ಟೌನ್‌ಶಿಪ್‌ನ ಜಿಮ್‌ನಿಂದ ರಾಜ್ಯದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್)ಯ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಈ ವ್ಯಕ್ತಿಯು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಚಲನವಲನದ ಮೇಲೆ ನಿಗಾ ಇರಿಸಿದ್ದರು ಎಂದು ಹೇಳಲಾಗಿದೆ.
ಹಮೀಮ್ ಮೊಂಡಲ್ ಎನ್ನುವ ವ್ಯಕ್ತಿಯನ್ನು ತಡರಾತ್ರಿ 8 ಗಂಟೆ ಸುಮಾರಿಗೆ NH-2 ರ ಹೊರಗೆ ನವೋದಯ ಟೌನ್‌ಶಿಪ್‌ನೊಳಗಿನ ನವೋದಯ ಫಿಟ್‌ನೆಸ್ ಸ್ಟುಡಿಯೋದಲ್ಲಿ ಜಿಮ್‌ನಲ್ಲಿದ್ದಾಗ ಬಂಧಿಸಲಾಗಿದೆ. ಗುರುವಾರ ಸಂಜೆಯಿಂದ ಅವರನ್ನು ಕಣ್ಗಾವಲಿನಲ್ಲಿರಿಸಿದ್ದ STF ಸಿಬ್ಬಂದಿ ಜಿಮ್‌ನಲ್ಲಿದ್ದಾಗ ಸೆರೆಹಿಡಿಯಲಾಗಿದೆ.