ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ 100 ಸುಂಕ: ಭಾರತದ ಮೇಲೆ ಏನು ಪರಿಣಾಮ?

ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ 100 ಸುಂಕ: ಭಾರತದ ಮೇಲೆ ಏನು ಪರಿಣಾಮ?

ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ 100 ಸುಂಕ: ಭಾರತದ ಮೇಲೆ ಏನು ಪರಿಣಾಮ?

ಉಕ್ರೇನ್ ವಿರುದ್ಧ ದೀರ್ಘಾವಧಿಯಿಂದ ಯುದ್ಧ ನಡೆಸುತ್ತಿರುವ ರಷ್ಯಾದ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ರಷ್ಯಾ ವಿರುದ್ಧದ ನಿರ್ಬಂಧ ಮಸೂದೆಗೆ ಅಮೆರಿಕ ಸಂಸತ್ ಅನುಮೋದನೆ ನೀಡಿದೆ. ಈ ಮಸೂದೆಯು ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವ ಪ್ರಮುಖ ಐದು ದೇಶಗಳಿಂದ ಆಮದಾಗುವ ದೇಶಗಳ ಸರಕುಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಅಧಿಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡುತ್ತದೆ.

ಪ್ರಸ್ತುತ ಚೀನಾ, ಭಾರತ, ಅಜೆರ್‌ಬೈಜಾನ್, ಹಂಗೇರಿ ಮತ್ತು ಸ್ಲೋವಾಕಿಯಾ, ರಷ್ಯಾದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುವ ಪ್ರಮುಖ ಐದು ದೇಶಗಳಾಗಿವೆ. ಹೀಗಾಗಿ, ಮಸೂದೆ ಜಾರಿ ಬಳಿಕ ಈ ಐದೂ ದೇಶಗಳ ಮೇಲೆ ಸ್ವಯಂಚಾಲಿತವಾಗಿ ಪರಿಣಾಮ ಬೀರಲಿದೆ.

ನಿರ್ಬಂಧವಿದ್ದರೂ ಖರೀದಿ ನಿಲ್ಲಿಸದ ಭಾರತ

2022ರಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದಾಗಿನಿಂದ ಭಾರತವು ರಷ್ಯಾ ತೈಲ ಖರೀದಿಯ ಪ್ರಮುಖ ದೇಶವಾಗಿ ಹೊರಹೊಮ್ಮಿದೆ. ಅಮೆರಿಕ ಮತ್ತು ಯುರೋಪ್ ನಿರ್ಬಂಧಗಳ ಬಳಿಕವೂ ಭಾರತ ತೈಲ ಖರೀದಿ ಮುಂದುವರಿಸಿತ್ತು. ಈ ಮೂಲಕ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಹಣಕಾಸು ಒದಗಿಸುತ್ತಿದೆ.

ಭಾರತವು ರಷ್ಯಾದಿಂದ ನಿತ್ಯ 2.3 ಮಿಲಿಯನ್ ಬ್ಯಾರೆಲ್‌ನಿಂದ 2.6 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಖರೀದಿಸುತ್ತದೆ. ತಿಂಗಳಿಗೆ ಸುಮಾರು 5.2 ಬಿಲಿಯನ್ ಡಾಲರ್(₹4.94 ಲಕ್ಷ ಕೋಟಿ) ವೆಚ್ಚ ಮಾಡಲಾಗುತ್ತಿದೆ. ಇದು ಶೇ 38ರಿಂದ ಶೇ 50ರಷ್ಟಿದ್ದು, ಇದು ದೇಶದ ಒಟ್ಟು ತೈಲ ಆಮದಿನ ಅರ್ಧದಷ್ಟಿದೆ. ಹೀಗಾಗಿ, ಭಾರತವು ಅಮೆರಿಕದ ಈ ಮಸೂದೆಯಿಂದ ನೇರ ಪರಿಣಾಮ ಎದುರಿಸಬೇಕಾಗಿದೆ. ತೈಲ ಖರೀದಿಸದಿದ್ದರೆ ದೇಶದಲ್ಲಿ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ.

ಅಮೆರಿಕ ಮತ್ತು ಭಾರತ ಪಾಲುದಾರಿಕೆಯ ಪರಿಣಾಮ

ಭಾರತದ ಮೇಲೆ ಸುಂಕ ಹೇರುವಾಗ ಅಮೆರಿಕ ಮತ್ತು ಭಾರತದ ನಡುವಿನ ವಿಶಾಲ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಇದರಲ್ಲಿ ಇಂಡೋ-ಪೆಸಿಫಿಕ್‌ನಲ್ಲಿ ಸಹಕಾರ, ರಕ್ಷಣೆ, ತಂತ್ರಜ್ಞಾನ ಮತ್ತು ಚೀನಾದ ಬೆಳೆಯುತ್ತಿರುವ ಪ್ರಭಾವವನ್ನು ಎದುರಿಸುವ ಪ್ರಯತ್ನಗಳು ಸೇರಿವೆ.

ಹಾಗಿದ್ದರೂ, ಈ ಮಸೂದೆಯು ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಅನಿಶ್ಚಿತತೆಯ ಹೊಸ ಅಂಶವನ್ನು ಹುಟ್ಟಿ ಹಾಕಿದೆ.

ಅಮೆರಿಕ ಭಾರತದ ಮೇಲೆ ಶೇ100ರಷ್ಟು ಸುಂಕ ವಿಧಿಸಿದರೆ, ಅವು ಎಂಜಿನಿಯರಿಂಗ್ ಸರಕುಗಳು, ಔಷಧಗಳು, ರಾಸಾಯನಿಕಗಳು, ಜವಳಿ ಮತ್ತು ಆಟೊಮೊಬೈಲ್ ಘಟಕಗಳು ಸೇರಿದಂತೆ ಅಮೆರಿಕಕ್ಕೆ ಭಾರತೀಯ ರಫ್ತಿನ ಶತಕೋಟಿ ಡಾಲರ್‌ಗಳ ಮೇಲೆ ಪರಿಣಾಮ ಬೀರಬಹುದು. ಅಂತಹ ಕ್ರಮಗಳು ರಷ್ಯಾದಿಂದ ತೈಲ ಖರೀದಿ ತಗ್ಗಿಸಿ ಇತರೆ ದೇಶಗಳಿಂದ ತೈಲ ಖರೀದಿಗೆ ಪ್ರೇರೇಪಿಸಬಹುದು.

ಭಾರತ ಮತ್ತು ಚೀನಾ ಪ್ರಮುಖ ಗುರಿ

ಚೀನಾ ಮತ್ತು ಭಾರತ ಒಟ್ಟಾಗಿ ರಷ್ಯಾದ ಒಟ್ಟು ತೈಲ ರಫ್ತಿನಲ್ಲಿ ಸುಮಾರು ಶೇ 70 ರಿಂದ 80 ರಷ್ಟನ್ನು ಖರೀದಿಸುತ್ತವೆ. ರಷ್ಯಾದ ಕಚ್ಚಾ ತೈಲ ರಫ್ತಿನಲ್ಲಿ ಸುಮಾರು ಶೇ 48ರಷ್ಟು ಪಾಲು ಹೊಂದಿರುವ ಚೀನಾ, ರಷ್ಯಾದಿಂದ ತೈಲ ಖರೀದಿಸುವ ಅತಿದೊಡ್ಡ ದೇಶವಾಗಿದೆ. ಭಾರತ ಸುಮಾರು ಶೇ 37 ಕೆಲವೊಮ್ಮೆ ಶೇ 50ರಷ್ಟು ತೈಲ ಖರೀದಿಸುತ್ತದೆ. ಚೀನಾವು ರಷ್ಯಾವನ್ನು ತನ್ನ ಪ್ರಮುಖ ವೈಯಕ್ತಿಕ ಕಚ್ಚಾ ತೈಲ ಪೂರೈಕೆದಾರನನ್ನಾಗಿ ಮಾಡಿಕೊಂಡಿದೆ. ಭಾರತ ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ರಷ್ಯಾದಿಂದ ತೈಲ ಖರೀದಿಯನ್ನು ಹೆಚ್ಚಿಸುತ್ತಿದೆ. ದಿನಕ್ಕೆ ಸುಮಾರು 2.1 ಮಿಲಿಯನ್‌ ಬ್ಯಾರೆಲ್‌ನಿಂದ ಗರಿಷ್ಠ 2.7 ಮಿಲಿಯನ್ ಬ್ಯಾರೆಲ್‌ವರೆಗೆ ಹೋಗುತ್ತದೆ.

ರಷ್ಯಾ ಮೇಲಿನ ನಿರ್ಬಂಧಗಳ ಜೊತೆಗೆ, ಇರಾನ್‌ನ ಇಂಧನ ವಲಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ದಂಡ ವಿಧಿಸುವ '1996ರ ಇರಾನ್ ನಿರ್ಬಂಧಗಳ ಕಾಯ್ದೆ'ಯ ಅವಧಿಯನ್ನು 2031ರವರೆಗೆ ವಿಸ್ತರಿಸುವ ಅವಕಾಶವನ್ನೂ ಈ ಮಸೂದೆ ಕಲ್ಪಿಸುತ್ತದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ