10 ನಿಮಿಷ ತಡವಾಗಿದ್ದರೆ...: 900 ವಿದ್ಯಾರ್ಥಿಗಳ ಜೀವ ಉಳಿಸಿದ ನೇಪಾಳದ ಶಿಕ್ಷಕ

10 ನಿಮಿಷ ತಡವಾಗಿದ್ದರೆ...: 900 ವಿದ್ಯಾರ್ಥಿಗಳ ಜೀವ ಉಳಿಸಿದ ನೇಪಾಳದ ಶಿಕ್ಷಕ

10 ನಿಮಿಷ ತಡವಾಗಿದ್ದರೆ...: 900 ವಿದ್ಯಾರ್ಥಿಗಳ ಜೀವ ಉಳಿಸಿದ ನೇಪಾಳದ ಶಿಕ್ಷಕ

ನೇಪಾಳಕ್ಕೆ ಅಪ್ಪಳಿಸಿದ ಭೀಕರ ಕೆಸರಿನ ಪ್ರವಾಹಕ್ಕೂ ಮುನ್ನ ಶಿಕ್ಷಕರೊಬ್ಬರು 900 ವಿದ್ಯಾರ್ಥಿಗಳನ್ನು ಸ್ಥಳಾಂತರಿಗೊಳ್ಳುವಂತೆ ಮಾಡಿ ಜೀವಹಾನಿ ತಪ್ಪಿಸಿದ್ದಾರೆ.

ಪ್ರವಾಹ ನುಗ್ಗಿ ಬರುತ್ತಿದೆ ಎನ್ನುವ ಎಚ್ಚರಿಕೆ ಬಂದ ಕೂಡಲೇ ತರಗತಿಯನ್ನು ಸ್ಥಗಿತಗೊಳಿಸಿದ ಶಿಕ್ಷಕ ರಾಜೇಂದ್ರ ದವಾಡಿಯವರು ಮಕ್ಕಳನ್ನು ಎತ್ತರದ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಿದ್ದಾರೆ.

1600 ವಿದ್ಯಾರ್ಥಿಗಳು ಇರುವ ನುವಾಕೋಟ್‌ನಲ್ಲಿರುವ ತ್ರಿಭುವನ್ ತ್ರಿಶೂಲಿ ಸೆಕೆಂಡರಿ ಶಾಲೆಯಲ್ಲಿ ಅವರು ಮುಖ್ಯ ಶಿಕ್ಷಕರಾಗಿದ್ದಾರೆ. ಪ್ರವಾಹ ಬರುತ್ತಿದೆ ಎಂದು ನಾಲ್ಕು ಎಚ್ಚರಿಕೆಗಳು ಅವರಿಗೆ ಬಂದಿವೆ. ಕೂಡಲೇ ಕಾರ್ಯಪ್ರವೃತ್ತವಾಗಿ ಸ್ಥಳಾಂತರಿಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.

‘ಎಚ್ಚರಿಕೆ ಬಂದ ಕೂಡಲೇ, ಇನ್ನು ತಡಮಾಡಕೂಡದು ಎಂದು ನಿರ್ಧರಿಸಿದೆ. ಒಂದು ವೇಳೆ ಪ್ರವಾಹ ಬರದಿದ್ದರೂ, ಒಂದು ತರಗತಿ ನಷ್ಟವಾಗುತ್ತಿತ್ತು ಅಷ್ಟೇ’ ಎಂದು ಅವರು ‘ಬಿಬಿಸಿ’ಯೊಂದಿಗೆ ಹೇಳಿದ್ದಾರೆ. ‘ಮಕ್ಕಳನ್ನು ಸ್ಥಳಾಂತರಿಸುವ ವೇಳೆ, ನದಿಯಿಂದ ನೂರು ಮೀಟರ್ ದೂರದಲ್ಲಿದ್ದ ಹಾಸ್ಟೆಲ್ ಕಟ್ಟಡವನ್ನು ಪ್ರವಾಹದ ನೀರು ನುಂಗಿ ಹಾಕುವುದನ್ನು ನೋಡಿದೆ’ ಎಂದು ಅವರು ಹೇಳಿದ್ದಾರೆ.

‘ಒಂದು ವೇಳೆ ನಿರ್ಧಾರ ತಳೆಯಲು 10 ನಿಮಿಷ ತಡವಾದರೂ, ವಿದ್ಯಾರ್ಥಿಗಳು ಸೇರಿ, ನಾವು ಯಾರೂ ಇಂದು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಶಿಕ್ಷಕರ ನಿರ್ಧಾರದಿಂದಾಗಿ ನಮ್ಮ ಜೀವ ಉಳಿಯಿತು. ನಾನು ನನ್ನ ಸ್ನೇಹಿತರು 10 ಸೆಕೆಂಡುಗಳ ಅಂತರದಲ್ಲಿ ಬದುಕಿದೆವು’ ಎಂದು 16 ವರ್ಷದ ವಿದ್ಯಾರ್ಥಿನಿ ಯುನಿಶಾ ಹೇಳಿದ್ದಾರೆ. ನೀರು ಮತ್ತು ಅವಶೇಷಗಳು ಹರಿದು ಬರುತ್ತಿರುವಾಗಲೇ ನಾವು ಕೆಸರನ್ನು ದಾಟಿ ಓಡಿದೆವು. ಕೆಲವೇ ಕ್ಷಣಗಳಲ್ಲಿ ನಮ್ಮ ಕಣ್ಣ ಮುಂದೆಯೇ ಇಡೀ ಮಾರುಕಟ್ಟೆ ಕೊಚ್ಚಿ ಹೋಯಿತು’ ಎಂದು ಯುನಿಶಾ ವಿವರಿಸಿದರು. ಅವರು ಮೂರು ದಿನಗಳ ಬಳಿಕ ಕುಟುಂಬದವರೊಂದಿಗೆ ಸೇರಿಕೊಂಡಿದ್ದಾರೆ.

ಪ್ರವಾಹದಿಂದ ಅಪಾರ ಹಾನಿಗೊಳಗಾಗಿರುವ ದಾಢಿಂಗ್‌ನಲ್ಲಿ ಹಲವು ವಿದ್ಯಾರ್ಥಿಗಳು ಪಾರಾಗಿದ್ದಾರೆ. ಪ್ರವಾಹ ಬಂದಾಗ ಅವರು, ಊಟದ ವಿರಾಮಕ್ಕೆ ತರಗತಿಯಿಂದ ಹೊರಗೆ ಹೋಗಿದ್ದರು. ಇನ್ನು ಕೆಲವು ವಿದ್ಯಾರ್ಥಿಗಳು ಶಿಕ್ಷಕರ ಎಚ್ಚರಿಕೆ ಬೆನ್ನಲ್ಲೇ ಸ್ಥಳಾಂತರಗೊಂಡಿದ್ದರಿಂದ ಬದುಕುಳಿದಿದ್ದಾರೆ.

‘ಬ್ಯಾಗ್, ಊಟದ ಬುತ್ತಿ ಬಿಟ್ಟು ಬೇಗ ಹೊರಡಿ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳಿದ್ದರಿಂದ, ಹಲವು ಮಕ್ಕಳು ಬದುಕುಳಿಯುವಂತಾಯಿತು’ ಎಂದು ಪೋಷಕರೊಬ್ಬರು ಅಸೋಸಿಯೆಟ್‌ ಪ್ರೆಸ್ ಸುದ್ದಿ ಸಂಸ್ಥೆ ಜೊತೆ ಮಾತನಾಡುವಾಗ ಹೇಳಿದ್ದಾರೆ.

ಆಧಾರ: ಬಿಬಿಸಿ, ಗಾರ್ಡಿಯನ್ ಹಾಗೂ ಎಪಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ