ಗಿನ್ನಿಸ್ ದಾಖಲೆ ಬರೆದ  8 ವರ್ಷದ ಬಾಲಕಿ: ಲಿಂಬೊ ಸ್ಕೇಟಿಂಗ್‌ ನಲ್ಲಿ ಹೊಸ ಇತಿಹಾಸ!

ಅಹಮದಾಬಾದ್.ಜೂನ್.29: ಗುಜರಾತ್‌ನ 8 ವರ್ಷದ ಬಾಲಕಿಯೊಬ್ಬಳು ಲಿಂಬೊ ಸ್ಕೇಟಿಂಗ್‌ನಲ್ಲಿ (Limbo Skating) ತನ್ನದೇ ಆದ ಹಳೆಯ ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿದು ಆಕೆ ಹೊಸ ಇತಿಹಾಸ ಸೃಷ್ಟಿಸಿದ್ದಾಳೆ.

ತಕ್ಷ್ವಿ ವಘಾನಿ ಹೆಸರಿನ ಈ ಬಾಲಕಿ, ಕೇವಲ 16 ಸೆಂಟಿಮೀಟರ್ ಎತ್ತರದ ಪಟ್ಟಿಯ ಅಡಿಯಲ್ಲಿ, 10 ಮೀಟರ್ ದೂರವನ್ನು ಅತ್ಯಂತ ಯಶಸ್ವಿಯಾಗಿ ಕ್ರಮಿಸುವ ಮೂಲಕ ‘ಅತ್ಯಂತ ಕನಿಷ್ಠ ಎತ್ತರದ ಲಿಂಬೊ ಸ್ಕೇಟಿಂಗ್’ ಎಂಬ ಹೊಸ ಗಿನ್ನಿಸ್ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾಳೆ.

ಪ್ರಪಂಚದಾದ್ಯಂತ ಕೆಲವೇ ಕೆಲವು ಸ್ಕೇಟರ್‌ ಗಳು ಮಾತ್ರ ಈ ದಾಖಲೆಯ ಹತ್ತಿರ ಬರಲು ಸಾಧ್ಯವಾಗಿದ್ದಾರೆ. ಅತ್ಯುತ್ತಮ ದೈಹಿಕ ಸಮತೋಲನ, ಅದ್ಭುತ ನಮ್ಯತೆ ಮತ್ತು ವರ್ಷಗಳ ನಿರಂತರ ಪರಿಶ್ರಮವಿದ್ದರೆ ಮಾತ್ರ ಇಂತಹ ಸಾಧನೆ ಸಾಧ್ಯ.

ತನ್ನ ಸಾಧನೆಯ ಕುರಿತು ಮಾತನಾಡಿದ ತಕ್ಷ್ವಿ, ನಾನು ನಾಲ್ಕು ವರ್ಷದವಳಿದ್ದಾಗಿನಿಂದಲೇ ಸ್ಕೇಟಿಂಗ್ ಕಲಿಯುತ್ತಿದ್ದೇನೆ. ನನ್ನ ತಂದೆಯೇ ನನಗೆ ಸ್ಕೇಟಿಂಗ್ ಕಲಿಸಿಕೊಟ್ಟವರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ.

ತನ್ನ ಕಠಿಣ ದಿನಚರಿಯ ಬಗ್ಗೆ ಹಂಚಿಕೊಂಡ ಆಕೆ, ದಾಖಲೆ ನಿರ್ಮಿಸಲು ಪ್ರತಿದಿನ ಬೆಳಿಗ್ಗೆ ಎರಡು ಗಂಟೆ ಹಾಗೂ ರಾತ್ರಿ ಎರಡು ಗಂಟೆಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದ್ದಾಳೆ. ಇಲ್ಲಿಯವರೆಗೆ ಎಷ್ಟು ಸ್ಪರ್ಧೆಗಳನ್ನು ಗೆದ್ದಿದ್ದೀಯಾ?” ಎಂದು ಕೇಳಿದಾಗ, ಆಕೆ ಮುಗ್ಧತೆಯಿಂದಲೇ ತುಂಬಾ ಗೆದ್ದಿದ್ದೇನೆ ಎಂದು ಉತ್ತರಿಸಿದ್ದಾಳೆ.

ಒಂದು ಕಾಲದಲ್ಲಿ ಕೇವಲ ಶಿಕ್ಷಣ ಮಾತ್ರ ಯಶಸ್ಸಿನ ಏಕೈಕ ಮಾರ್ಗ ಎಂದು ಭಾವಿಸಲಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಕ್ರೀಡೆ, ತಂತ್ರಜ್ಞಾನ, ಕಲೆ ಮತ್ತು ನಾವೀನ್ಯತೆಗಳಲ್ಲೂ ಮಕ್ಕಳು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ತಕ್ಷ್ವಿ ಅವರ ಯಶಸ್ಸು ಕೇವಲ ಆಕೆಯ ಪರಿಶ್ರಮವನ್ನಷ್ಟೇ ಅಲ್ಲದೆ, ಚಿಕ್ಕ ವಯಸ್ಸಿನಲ್ಲೇ ಪೋಷಕರು ನೀಡುವ ಪ್ರೋತ್ಸಾಹ ಮತ್ತು ತರಬೇತಿಯ ಮಹತ್ವವನ್ನು ಸಾರುತ್ತದೆ.

ಕೇವಲ 8 ವರ್ಷ ವಯಸ್ಸಿನಲ್ಲಿ ಮತ್ತೊಂದು ಗಿನ್ನಿಸ್ ವಿಶ್ವ ದಾಖಲೆಯನ್ನು ತನ್ನ ಮುಡಿಗೇರಿಸಿಕೊಳ್ಳುವ ಮೂಲಕ, ತಕ್ಷ್ವಿ ವಘಾನಿ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾಳೆ.



source https://suddione.com/8-year-old-girl-sets-guinness-record-new-history-in-limbo-skating/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ