ರಶ್ಮಿಕಾ ಮಂದಣ್ಣ & ವಿಜಯ್ ದೇವರಕೊಂಡ ಮದುವೆ ಕಾರ್ಡ್ ವೈರಲ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಬಗ್ಗೆ ಕೆಲ ದಿನಗಳಿಂದ ಸಾಕಷ್ಟು ಸುದ್ದಿಯಾಗ್ತಾ ಇದೆ. ಫೆಬ್ರವರಿ 26 ರಂದು ಇಬ್ಬರು ಮದುವೆಯಾಗಲಿದ್ದಾರೆ ಎಂಬ ಚರ್ಚೆ ಇತ್ತು. ಆದರೆ ಅಧಿಕೃತವಾಗಿ ಆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಮದುವೆ ಕಾರ್ಡ್ ವೈರಲ್ ಆಗ್ತಾ ಇದ್ದು, ಇಬ್ಬರ ಮದುವೆ ಸತ್ಯ ಎಂಬುದು ಗೊತ್ತಾಗ್ತಾ ಇದೆ. ಆತ್ಮೀಯರಿಗೆಲ್ಲಾ ಪತ್ರಿಕೆಯನ್ನ ಕೊಟ್ಟಿದ್ದು, ಆ ಪತ್ರಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.

ತಮ್ಮ ಮದುವೆಗಾಗಿ ಈಗಾಗಲೇ ಓಡಾಟ ಶುರು ಮಾಡಿರುವ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ, ಆತ್ಮೀಯರೊಬ್ಬರಿಗೆ ಪತ್ರಿಕೆಯನ್ನ ಕೊಟ್ಟಿದ್ದಾರೆ. ಆ ಪತ್ರಿಕೆಯನ್ನ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಲ್ಲದೆ, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಎಂದು ಟ್ಯಾಗ್ ಮಾಡಿದ್ದಾರೆ. ಆ ಪತ್ರಿಕೆಯಲ್ಲಿ ಫೆಬ್ರವರಿ 26 ರಂದು ಮದುವೆ ಎಂದು ನಮೂದು ಮಾಡಲಾಗಿದೆ. ಈ ಮೂಲಕ ಆ ಜೋಡಿಯ ಮದುವೆ ಅಧಿಕೃತವಾಗಿದೆ.

ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತ ಸಮಯ ಈಗ. ಅವರ ಅಭಿನಯದ ಹಲವು ಸಿನಿಮಾಗಳು ಹಿಟ್ ಆಗಿವೆ. ಡಿಮ್ಯಾಂಡ್ ಕೂಡ ಜೋರಾಗಿನೇ ಇದೆ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ, ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಅದನ್ನ ಅಧಿಕೃತವಾಗಿ ಇಬ್ಬರು ಒಪ್ಪಿಕೊಂಡಿರಲಿಲ್ಲ. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತಾನೇ ಹೇಳಿಕೊಂಡು ಬಂದಿದ್ದರು. ಫೆಬ್ರವರಿ 26 ರಂದು ಮದುವೆ ಎಂದು ಹೇಳಲಾಗುತ್ತಿದೆ. ಇನ್ನು ಹತ್ತೇ ದಿನದಲ್ಲಿ ಈ ಊಹಾಪೋಹಕ್ಕೆ ತೆರೆ ಬೀಳಲಿದೆ.



source https://suddione.com/rashmika-mandanna-vijay-devarakonda-wedding-card-viral/

Post a Comment

0 Comments