ಮೇಳದಲ್ಲಿ ಮುರಿದು ಬಿದ್ದ ಜಾಯಿಂಟ್ ವೀಲ್!

ಹರಿಯಾಣದ ಫರಿದಾಬಾದ್‌ನಲ್ಲಿ ನಡೆಯುತ್ತಿರುವ ಮೇಳದಲ್ಲಿ ಮನರಂಜನೆಗಾಗಿ ಅಳವಡಿಸಲಾಗಿದ್ದ  ಜಾಯಿಂಟ್ ವ್ಹೀಲ್  ಮುರಿದು ಬಿದ್ದಿದೆ‌.13ಕ್ಕೂ ಹೆಚ್ಚು ಜನರು ಗಾಯಗೊಂಡಿದೆ‌.ಕರ್ತವ್ಯನಿರತ ಪೊಲೀಸ್ ಇನ್ಸ್‌ಪೆಕ್ಟರ್‌ ಒಬ್ಬರು ಸಾವನ್ನಪ್ಪಿದ್ದಾರೆ.

ಶನಿವಾರ ಸಂಜೆ ಸುಮಾರು 6:15ರ ಸುಮಾರಿಗೆ ಜಾಯಿಂಟ್ ವ್ಹೀಲ್‌ನಲ್ಲಿ ಜನರು ಕುಳಿತು ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ಅದರ ಒಂದು ಭಾಗ ಮುರಿಯಲಾರಂಭಿಸಿತು. ಮುರಿದು ಬಿದ್ದ ತೊಟ್ಟಿಲದ ಬೃಹತ್ ಭಾಗವೊಂದು ನೇರವಾಗಿ ಇನ್ಸ್‌ಪೆಕ್ಟರ್ ಅವರ ತಲೆ ಮತ್ತು ಮುಖಕ್ಕೆ ಬಿದ್ದಿತು.  ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಘಟನೆ ಬಗ್ಗೆ ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತ ಇನ್ಸ್‌ಪೆಕ್ಟರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.



source https://suddione.com/a-joint-wheel-broke-at-the-fair/

Post a Comment

0 Comments