ಡಿ. 13 ಮತ್ತು 14 ರಂದು ಆಕಾಶದಲ್ಲಿ ಅದ್ಭುತ ಉಲ್ಕೆಗಳ ಸುರಿಮಳೆ

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 11 : ಇದೇ ಡಿಸೆಂಬರ್ 13 ಮತ್ತು 14 ರಂದು ಮಾನವನ ಕುತೂಹಲ ಕೆರಳಿಸುವ ವಿಸ್ಮಯ ನಡೆಯಲಿದೆ. ಈ ಎರಡು ದಿನಗಳ ರಾತ್ರಿ 9 ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ಪೂರ್ವ ದಿಕ್ಕಿನಲ್ಲಿ ಜೆಮಿನಿ(ಮಿಥುನ) ನಕ್ಷತ್ರರಾಶಿಯ ಕಡೆಯಿಂದ ಪ್ರತಿ ಗಂಟೆಗೆ 25 ರಿಂದ 50 ಉಲ್ಕೆಗಳು ಮಳೆಯ ರೂಪದಲ್ಲಿ ಭೂಮಿಯ ಕಡೆ ಬೀಳುವ ಸುಂದರ ನೋಟ ಕಾಣಸಿಗಲಿದೆ.

ಈ ಉಲ್ಕಾಪಾತದ ಮೂಲ 3200 ಪೈತಾನ್ ಕ್ಷುದ್ರಗ್ರಹ. 100 ವರ್ಷಗಳ ಹಿಂದೆ ತನ್ನ ವೇಗ ಬದಲಿಸಿಕೊಂಡು ಸೂರ್ಯನ ಸಮೀಪ ಹಾರಾಟ ಮಾಡುತ್ತಿರುವ ಈ ಬಂಡೆ ಲೋಹಗಳಿಂದಾದ ಕ್ಷುದ್ರಗ್ರಹ, ಸೂರ್ಯನ ತಾಪಕ್ಕೆ ಕರಗುತ್ತಾ ಧೂಳು ಹಾಗೂ ಚಿಕ್ಕ ಚಿಕ್ಕ ಕಲ್ಲಿನ ಕಣಗಳನ್ನು ಬಾಹ್ಯಾಕಾಶದಲ್ಲಿ ಚೆಲ್ಲುತ್ತಿದೆ. ಈ ಸಮಯದಲ್ಲಿ ವಿದುದ್ದೀಪಗಳ ಹಾಗೆ ಬೆಳಕು ಕಾಣುವ ಈ ಅಪರೂಪದ ದೃಶ್ಯಗಳನ್ನು ನೋಡಲು ಮರೆಯಬೇಡಿ ಎಂದು ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಶ್ರೀ ಎಚ್.ಎಸ್. ಟಿ. ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



source https://suddione.com/amazing-meteor-shower-in-the-sky-on-dec-13-and-14/

Post a Comment

0 Comments