ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಹಿಂದೆಂದು ನಡೆಯದ ಘಟನೆ ನಡೆದಿದೆ. ಸುಪ್ರೀಂ ಕೋರ್ಟ್ ನ ಮುಖ್ಯ ಮ್ಯಾಯಾಧೀಶರ ಮೇಲೆ ಶೂ ಎಸೆಯುವಂತಹ ಘಟನೆ ನಡೆದಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಎಂದರೆ ಅಪಾರ ಘನತೆ, ಗೌರವ ದೇಶದಲ್ಲಿದೆ. ಅಂತವರ ಮೇಲೆ ಈ ರೀತಿ ಆಗಿದ್ದು, ಶಾಕಿಂಗ್ ವಿಚಾರವೇ ಸರಿ. ಇಂತಹ ಘಟನೆ ನಡೆದಿರೋದು ಇದೇ ಮೊದಲು.
ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಪೀಠದತ್ತ ವಕೀಲರೊಬ್ಬರು ಶೂ ಎಸೆದಿದ್ದಾರೆ ಎನ್ನಲಾಗಿದೆ. ಹಿಂದೆ ವಿಷ್ಣು ಬಗ್ಗೆ ಹೇಳಿಕೆ ನಡೆಸುವಾಗ ಗವಾಯಿ ಅವರು ಹಾಸ್ಯಾಸ್ಪದವಾಗಿ ಗವಾಯಿ ಅವರು ಮಾತನಾಡಿದ್ದರು ಎಂಬ ಕಾರಣಕ್ಕೆ ವಕೀಲರು ಶೂ ಎಸೆಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಇಂದು ಗವಾಯಿ ಅವರು ಕೋರ್ಟ್ ನಂಬರ್ 1 ರಲ್ಲಿ ವಿಚಾರಣೆಯನ್ನ ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ವಕೀಲರು, ಸನಾತನ ಧರ್ಮಕ್ಕೆ ಸಿಜೆ ಅವರು ಅಪಮಾನವನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ ಅಂತ ಘೋಷಣೆ ಕೂಗಿ, ಶೂ ಎಸೆಯಲು ಪ್ರಯತ್ನಿಸಿದ್ದಾರೆ.
ತಕಗಷಣ ಅಲ್ಲಿದ್ದ ಸಿಬ್ಬಂದಿಗಳು ಎಚ್ಚೆತ್ತಿದ್ದು, ವಕೀಲರನ್ನ ಹಿಡಿದುಕೊಳ್ಳುತ್ತಾರೆ. ಈ ಘಟನೆ ನಡೆ್ ಮೇಲೆ ಗವಾಯಿ ಅವರು ಕೊಂಚವೂ ವಿಚಲಿತರಾಗದೆ ತೆಗೆದುಕೊಂಡಿದ್ದ ಕೇಸ್ ಅನ್ನು ಮುಂದುವರೆಸುತ್ತಾರೆ. ಈ ಹಿಂದೆ ಗವಾಯಿ ಅವರು, ವಿಚಾರಣೆ ನಡೆಯುವಾಗ ನಿಮ್ಮದು ಏನೇ ಕ್ಲಾರಿಫಿಕೇಷನ್ ಇದ್ದರು, ಅ್ನ್ನ ಭಗವಾನ್ ವಿಷ್ಣುವಿನ ಬಳಿಯೇ ಕೇಳಿಕೊಳ್ಳಿ ಎಂದಿದ್ದರು. ಈ ವಿಚಾರ ಚರ್ಚೆಗೆ ಗ್ರಾಸವಾದ ಮೇಲೆ ದೇವರ ವಿಚಾರಕ್ಕರ ಅಪಮಾನವಾಗುವಂತಹ ಹೇಳಿಕೆಗಳನ್ನ ನಾನು ನೀಡಿಲ್ಲ ಎಂಬ ಸ್ಪಷ್ಟನೆಯನ್ನು ಗವಾಯಿ ಅವರು ನೀಡಿದ್ದರು. ಆದರೆ ಅದೇ ವಿಚಾರಕ್ಕೆ ವಕೀಲರೊಬ್ಬರು ಶೂ ಎಸೆಯುವ ಪ್ರಯತ್ನ ಮಾಡಿದ್ದಾರೆ.

source https://suddione.com/lawyer-throws-shoe-at-supreme-court-judges/


0 Comments
If u have any queries, Please let us know