ಸೆಪ್ಟೆಂಬರ್ 22ರಿಂದ ಹೊಸ GST: ಯಾವುದೆಲ್ಲದರ ಮೇಲೆ ದರ ಇಳಿಕೆ..?

ನಾಳೆಯಿಂದ ರಾಜ್ಯದಲ್ಲಿ ದಸರಾ ಸಂಭ್ರಮ ಮನೆ ಮಾಡುತ್ತಿದೆ. ಈ ಶುಭ ದಿನಕ್ಕೆ ಜನ ಸಾಮಾನ್ಯರಿಗೂ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅದು‌ ದಿನ ಬಳಕೆಯ ವಸ್ತುಗಳ ಮೇಲೆ ದರ ಇಳಿಕೆಯಗಿರುವುದು. ಕೇಂದ್ರ ಸರ್ಕಾರ ಜಿಎಸ್ಟಿ ದರ ಕಡಿಮೆ ಮಾಡಿದ ಹಿನ್ನೆಲೆ ನಾಳೆಯಿಂದ ಹೊಸ ದರ ಅನ್ವಯವಾಗಲಿದೆ. ಹಾಗಾದ್ರೆ ಯಾವೆಲ್ಲಾ ವಸ್ತುಗಳ ಮೇಲೆ ದರ ಇಳಿಕೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಸಾಕಷ್ಟು ಜನರಿಗೆ ಬೇಕಿರುವ ದಿನನಿತ್ಯದ ಮೆಡಿಸಿನ್ ಮೇಲೆ ದರ ಇಳಿಕೆಯಾಗುತ್ತಿದೆ. ವಿಕ್ಸ್ ಆಕ್ಷನ್ 500, ಟೂತ್ ಬ್ರೆಷ್, ದೇಹಕ್ಕೆ ಬಳಸುವ ಸೋಪ್ ಗಳು ಲೈಫ್ ಬಾಯ್, ಲಕ್ಸ್ ಈ ರೀತಿಯ ಸೋಪ್ ಗಳ ಬೆಲೆಯೂ ಕಡಿಮೆಯಾಗಲಿದೆ. ಕೆಚಪ್ ಗಳು, ಬ್ಯೂಟಿ ಪ್ರಾಡಕ್ಟ್, ಹಾರ್ಲಿಕ್ಸ್, ಬೂಸ್ಟ್ , ಬೋರೋಪ್ಲಸ್ ಆಯಿಲ್, ನವರತ್ನ ಆಯಿಲ್, ಡವ್, ಕ್ಲಿನಿಕ್ ಪ್ಲಸ್, ಸನ್ ಸಿಲ್ಕ್ ಸೇರಿದಂತೆ ಹಲವು ಬಗೆಯ ಶಾಂಪೂಗಳ ಬೆಲೆಯೂ ಇಳಿಕೆಯಾಗುತ್ತಿದೆ.

ಸರಿ ಸುಮಾರು 400 ವಸ್ತುಗಳ ಮೇಲಿನ ಜಿಎಸ್ಟಿ ದರಗಳನ್ನು ಕಡಿಮೆ ಮಾಡಲಾಗಿದೆ. ಈಗ ಅವುಗಳ ಬೆಲೆ ಮಾರ್ಪಾಡಿಗಾಗಿ ಸರ್ಕಾರ ಸಮಗ್ರ ತಂತ್ರಗಳನ್ನು ರೂಪಿಸಿದೆ. ಹೊಸ ಜಿಎಸ್ಟಿ ರಚನೆ ಜಾರಿಗೆ ಬಂದ ನಂತರ ಪರೋಕ್ಷ ತೆರಿಗೆ ಅಧಿಕಾರಿಗಳು ಸರಕು ಮತ್ತು ಸೇವೆಗಳ ಪ್ರಸ್ತುತ ಬೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಅವುಗಳನ್ನು ದರಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸೆಪ್ಟೆಂಬರ್ 3 ರಂದು ಪ್ರಮುಖ ಜಿಎಸ್ಟಿ ದರ ಕಡಿತ ಮತ್ತು ಸ್ಲ್ಯಾಬ್ ಬದಲಾವಣೆಗಳನ್ನು ಘೋಷಣೆ ಮಾಡಿದ್ದರು.



source https://suddione.com/new-gst-from-september-22-rate-reduction-on-what/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ