ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮ : ಎಂ ರವೀಂದ್ರಪ್ಪ ಬೇಸರ

ಸುದ್ದಿಒನ್, ಹಿರಿಯೂರು, ಆಗಸ್ಟ್. 09 : ಅಭಿಮಾನ್ ಸ್ಟುಡಿಯೋದ ನಲ್ಲಿರುವ ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಿರುವುದು ಹಾಗೂ ಸರ್ಕಾರ ಮೌನವಹಿಸಿರುವುದರಿಂದ ಕೋಟ್ಯಾಂತರ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ತೇಲಿಸಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಎಂ ರವೀಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ಕನ್ನಡ ಹಿರಿಯ ನಟನ ಸಮಾಧಿಯನ್ನು ತೆರವು ಮಾಡಿರುವುದರಿಂದ ಹಿರಿಯ ನಟನೆಗೆ ಅಗೌರವ ಮಾಡಿರುವುದು ಅಸಂಖ್ಯಾತ ಅಭಿಮಾನಿಗಳ ಮಾನಸಿಗೆ ಆರ್ಟ್ ಉಂಟಾಗಿದೆ. ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬಹುದಿತ್ತು.

ದಿವಂಗತ ಡಾ. ವಿಷ್ಣುವರ್ಧನ್ ಅವರು ಅನೇಕ ಸಾಮಾಜಿಕ ಹಾಗೂ ಕನ್ನಡಾಭಿಮಾನ, ದೇಶಭಕ್ತಿ ಹೊಂದಿರುವ ಚಿತ್ರಗಳನ್ನು ತೆರೆಯಲ್ಲಿ ತೊರಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ಸಂದೇಶ ಸಾರಿದ್ದಾರೆ. ಸರ್ಕಾರಕ್ಕೆ ಜಾಗ ಸಮಸ್ಯೆ ಬಗೆಹರಿಸುವುದು ದೊಡ್ಡ ಸವಾಲು ಆಗಿರಲಿಲ್ಲ. ಸರ್ಕಾರವೇ ಬೇರೆ ಜಾಗ ಕೊಟ್ಟು ನಟನ ಸಮಾಧಿಯನ್ನು ಉಳಿಸಬಹುದಿತ್ತು. ಏಕಾಏಕಿ ಸಮಾಧಿ ತೆರವು ಮಾಡಿರುವುದರಿಂದ ಅಭಿಮಾನಿಗಳ ಜೊತೆಗಿನ ಭಾವನಾತ್ಮಕ ಸಂಬಂಧಗಳನ್ನು ದೂರ ಮಾಡಲಾಗಿದೆ. ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಮೇರು ನಟನಿಗೆ ಅವಮಾನ ಮಾಡಿರುವ ನೋವುಂಟು ತರಿಸಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಟ ನಟಿಯರು ಸಹ ಮುಂದೆ ಬಂದು ಹಿರಿಯ ಕಲಾವಿದನ ಸಮಾಧಿಯನ್ನು ಉಳಿಸಲು ಮನಸು ಮಾಡಬಹುದಿತ್ತು. ಮರಣಹೊಂದಿರುವ ಹಿರಿಯ ನಟನಿಗೂ ಆರು, ಮೂರು ಅಡಿ ಜಾಗ ಕೊಡಲಿಲ್ಲ ಅಂದ್ರೆ ಹೇಗೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗಲೂ ಕಾಲ ಮಿಂಚಿಲ್ಲ ಸರ್ಕಾರ ಹಾಗೂ ಚಿತ್ರರಂಗ ಮಧ್ಯಪ್ರವೇಶ ಮಾಡಿ, ಸಮಸ್ಯೆ ಇರುವ ಜಾಗದ ಮಾಲೀಕರ ಜೊತೆ ಮಾತನಾಡಿ ಬಗೆಹರಿಸಿ, ಅದೇ ಜಾಗದಲ್ಲಿ ಹೊಸ ಸಮಾಧಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ