ಬೆಂಗಳೂರಲ್ಲಿ ನಾಳೆ ನಡೆಯಬೇಕಿದ್ದ ರಾಹುಲ್ ಗಾಂಧಿ ಪ್ರತಿಭಟನೆ ಮುಂದೂಡಿಕೆ..!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ನಾಳೆ ಬೃಹತ್ ಪ್ರತಿಭಟನೆಯನ್ನ ಕೈಗೊಂಡಿದ್ದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಪ್ರತಿಭಟನೆಯನ್ನ ಮುಂದಕ್ಕೂಡಲಾಗಿದೆ. ನಾಳೆ ಬದಲಿಗೆ ಆಗಸ್ಟ್ 8 ಕ್ಕೆ ಪ್ರತಿಭಟನೆ ಮಾಡೋದಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕಾರಣ ಜಾರ್ಕಂಡ್ ನ ಮಾಜಿ ಮುಖ್ಯಮಂತ್ರಿಯಾದ ಶಿಬು ಸೂರೇನ್ ಅವರು ನಿಧನರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರೆಲ್ಲ ನಾಳೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದು, ಪ್ರತಿಭಟನೆಯನ್ನ ಮುಂದೂಡಿಕೆ ಮಾಡಿದ್ದಾರೆ.

ಮತಗಳ್ಳತನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದರು. ರಾಹುಲ್ ಗಾಂಧಿಯವರು ಈ ಸಂಬಂಧ ಧ್ವನಿ ಎತ್ತಿದ್ದು, ಫ್ರೀಡಂ ಪಾರ್ಕ್ ನಲ್ಲಿ ಎಲ್ಲಾ ರೀತಿಯಾದ ತಯಾರಿ ನಡೆಯುತ್ತಿತ್ತು. ಆದರೆ ಸಿಬು ಅವರ ನಿಧನದ ಹಿನ್ನೆಲೆ ಮುಂದೂಡಿಕೆಯಾಗಿದೆ.

ಸಿಬು ಅವರು ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿಗಳು, ಮುಕ್ತಿ ಮೋರ್ಚಾದ ನಾಯಕ, ಇಂಡಿಯಾ ಮೈತ್ರಿ ಕೂಟದಲ್ಲಿ ಮುಕ್ತಿ‌ ಮೋರ್ಚಾ ಇತ್ತು. ಹಲವು ಸಂದರ್ಭಗಳಲ್ಲಿ, ಹಲವು ಹೋರಾಟದಲ್ಲಿ ಕಾಂಗ್ರೆಸ್ ನಾಯಕರಿಗೆ ಬೆಂಬಲವಾಗಿ ನಿಂತಿದ್ದರು ಸಿಬು. ಹೀಗಾಗಿ ಅವರ ನಿಧನದ ಹಿನ್ನೆಲೆ ಪ್ರತಿಭಟನೆಯನ್ನ ಮುಂದೂಡಿಕೆ ಮಾಡ್ತಾ ಉದ್ದೀವಿ. ಅವರ ಗೌರವಾರ್ಥ ಪ್ರತಿಭಟನೆಯನ್ನು ಮುಂದೂಡುತ್ತಿದ್ದು, ಆಗಸ್ಟ್ 8ರಂದು ಪ್ರತಿಭಟನೆ ಮಾಡ್ತೀವಿ ಎಂದು ಕಾಂಗ್ರೆಸ್ ಹೇಳಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಮಟ್ಟದ ಅಕ್ರಮವಾಗಿದೆ. ಆ ಅಕ್ರಮ ತೆರೆದಿಡುವುದಕ್ಕೆ ನಾನು ಸಿದ್ಧ ಇದ್ದೀನಿ ಅಂತ ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ರಾಹುಲ್ ಗಾಂಧಿ ಅವರು, ಕರ್ನಾಟಕದಿಂದಾನೇ ಈ ಹೋರಾಟದ ರಣಕಹಳೆಯನ್ನ ಮೊಳಗಿಸ್ತೀನಿ ಅಂತ ಹೇಳಿದ್ದರು. ಹೀಗಾಗಿ ನಾಳೆ ಎಲ್ಲಾ‌ಸಿದ್ಧತೆ ಆಗಿತ್ತು. ಇದೀಗ ಮುಂದೂಡಿಕೆಯಾಗಿದೆ.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ