ದೇವೇಗೌಡ್ರು, ಕುಮಾರಸ್ವಾಮಿ ಅವರು ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡೋಕೆ ನಿರ್ಧಾರ ಮಾಡಿದ್ದು : ಅನಿರುದ್ಧ್

ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ದನ್ ಅವರ ಸಮಾಧಿಯನ್ನು ರಾತ್ರೋ ರಾತ್ರಿ ತೆರವುಗೊಳಿಸಿದ್ದಾರೆ. ಈ ಸಂಬಂಧ ಅವರ ಅಳಿಯ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ.

ಇದು 2004ರಲ್ಲಿ ಹಾಕಿರುವಂತ ಮೊಕದ್ದಮೆ. ಅಪ್ಪಾಜಿ ಅವರದ್ದು ಅಂತ್ಯ ಸಂಸ್ಕಾರ ನಡೆದಿರೋದು 2009. ವಿವಾದಾತ್ಮಕ ಸ್ಥಳವಾಗಿತ್ತು. ಆದ್ರೆ ನಮಗೆ ಗೊತ್ತಿರಲಿಲ್ಲ. ಚಾಮರಾಜಪೇಟೆಯಲ್ಲಿ ರುದ್ರಭೂಮಿ ಇದೆ. ಅಲ್ಲಿನೇ ಸಂಸ್ಕಾರ ಮಾಡಬೇಕು ಅಂತಾನೇ ಅಂದ್ಕೊಂಡಿದ್ದೆವು. ಆದರೆ ಆ ಸಮಯದಲ್ಲಿ ನಮಗೆ ಗೊತ್ತಾಗ್ಲಿಲ್ಲ. ತುಂಬಾನೇ ನೋವಲ್ಲಿ ಇದ್ವಿ.

ಆ ಸಮಯದಲ್ಲಿ ಕುಮಾರಸ್ವಾಮಿ ಅವರು ಫೋನ್ ಮಾಡಿದ್ರು. ನಾನೇ ಮಾತನಾಡಿದ್ದೆ. ವಿಷ್ಣು ಸರ್ ಅವರು ತುಂಬಾ ದೊಡ್ಡ ವ್ಯಕ್ತಿ. ಅವರ ಅಂತ್ಯ ಸಂಸ್ಕಾರವನ್ನ ಎಲ್ಲಿ ಮಾಡ್ಬೇಕು ಅಂತ ಇದ್ದೀರಾ ಅಂತ ಕೇಳಿದ್ರು. ಚಾಮರಾಜಪೇಟೆ ಅಂತ ಅಂದ್ಕೊಂಡಿದ್ದೀವಿ ಅಂದೆ. ಆಗ ಅವರು ಹೇಳಿದ್ರು, ಅಪ್ಪಾಜಿ ಅವರು ಹೇಳ್ತಾ ಇದ್ದಾರೆ. ಅಂದ್ರೆ ದೇವೇಗೌಡ್ರು ಹೇಳ್ತಾ ಇದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರನ್ನ ಕಳುಹಿಸಿಕೊಡಬೇಕು. ಅವರಿಗೆ ಆದ ಜಾಗದಲ್ಲಿ ಅವರ ಅಂತ್ಯ ಸಂಸ್ಕಾರ ನಡೀಬೇಕು ಅಂತ ಹೇಳಿದ್ರು. ಅದಾ್ ಮೇಲೆ ಅಂಬರೀಶ್ ಅಂಕಲ್ ಕೂಡ ಇದ್ದರು. ಅವರೆಲ್ಲರೂ ಸೇರಿ ಅಭಿಮಾನ್ ಸ್ಟುಡಿಯೋದಲ್ಲಿ ನಡೀತು.

ಅದು ವಿವಾದಾತ್ಮಕ ಸ್ಥಳ ಅಂತ ಕುಟುಂಬದವರಿಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ನಮ್ಮ ಕುಟುಂಬದವರು ಒಪ್ಪುತ್ತಾ ಇರಲಿಲ್ಲ. ಉಷ್ಟು ವರ್ಷಗಳ ಕಾಲ ಮಾಡಿದ ಹೋರಾಟದ ಅವಶ್ಯಕತೆಯೇ ಇರಲಿಲ್ಲ. 75ನೇ ವರ್ಷ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ರೀತಿ ಮಾಡಿದ್ದಾರೆ. ಅದೊಂದು ಪೂಜಾ ಸ್ಥಳವಾಗಿತ್ತು. ಪೂಜೆ, ಗೌರವ ಸಲ್ಲಿಸ್ತಾ ಇದ್ದರು. ಅದನ್ನ ಮಾಡಲೇ ಬಾರದಾಗಿತ್ತು. ಅಭಿಮಾನಿಗಳ್ಯಾರು ದೂರ ಆಗ್ಬೇಡಿ. ನಾವೇಲ್ಲ ಒಂದೆ. ಏನೇ ಇದ್ದರು ನೇರವಾಗಿ ನನಗೆ ಕೇಳಿ. ಯಾರೋ ಹೇಳಿದ್ರು, ಕೇಳಿದ್ರು ಅನ್ನೋದೆಲ್ಲವನ್ನು ನಂಬಬೇಡಿ ಎಂದಿದ್ದಾರೆ ಅನಿರುದ್ದ್.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ