ಹವಮಾನ ಇಲಾಖೆ ನೀಡಿದ ವರದಿಯಿಂದ ಆತಂಕಗೊಂಡ ರೈತರು..!

ಈಗಾಗಲೇ ಆಗಸ್ಟ್ ತಿಂಗಳು ಬಂದಿದೆ. ಜೂನ್ ಜುಲೈ ನಲ್ಲಿಯೇ ಒಳ್ಳೆ ಮಳೆಯಾದರೆ ಬಿತ್ತನೆಗೆ ಉತ್ತಮ. ಈ ಬಾರಿ ಆರಂಭವಾದ ಮುಂಗಾರು ಮಳೆ ನೋಡಿದ್ರೆ ಉತ್ತಮವಾದ ಮಳೆಯಾಗಲಿದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಹವಮಾನ ವರದಿ ಈಗ ನೀಡಿರುವ ವರದಿಯನ್ನ ನೋಡಿದ್ರೆ ರೈತರಿಗೆ ಆತಂಕವಾಗಿದೆ. ಜುಲೈ ತಿಂಗಳಲ್ಲಿ ಅಷ್ಟಕ್ಕೆ ಅಷ್ಟೇ ಈಗ ಆಗಸ್ಟ್ ಶುರುವಾಗಿದೆ. ಆದರೆ ಈ ಬಾರಿಯೂ ಮಳೆಯ ಪ್ರಮಾಣ ಅಷ್ಟಕ್ಕೆ ಅಷ್ಟೆ ಎನ್ನಲಾಗ್ತಾ ಇದೆ.

ಮುಂಗಾರಿನ ಎರಡನೇ ಅವಧಿಯ ಮಳೆ ಸುಮಾರು 80 ರಷ್ಟು ಕೊರತೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇಕಡ 11 ರಷ್ಟು ಮಾತ್ರ ಮಳೆಯಾಗಲಿದೆ. ಆಗಸ್ಟ್ ತಿಂಗಳಲ್ಲಿ ಸುಮಾರು 50ರಷ್ಟು ಮಳೆಯ ಕೊರತೆ ಕಾಣಲಿದೆ ಎಂಬ ಸೂಚನೆ ನೀಡಿದೆ. ಅಷ್ಟೇ ಅಲ್ಲ ಕರಾವಳಿ ಭಾಗದಲ್ಲೂ ಶೇಕಡ 80 ರಷ್ಟು ಮಳೆಯ ಕೊರತೆ ಕಾಣಲಿದೆ.

ಹವಮಾನ ಇಲಾಖೆ ನೀಡಿದ ಮಳೆಯ ವರದಿ ಸಹಜವಾಗಿಯೇ ಆತಂಕವನ್ನ ಸೃಷ್ಟಿಸಿದೆ. ಯಾಕಂದ್ರೆ ಕಳರದ ತಿಂಗಳೇ ಜಮೀನನ್ನೆಲ್ಲ ಉಳುಮೆ ಮಾಡಿ, ಬಿತ್ತನೆ ಮಾಡೋದಕ್ಕೆ ಅಂತ ಕಾದು ಕುಳಿತಿದ್ದರು. ಆದರೆ ಮಳೆರಾಯ ಅದ್ಯಾಕೆ ಕರುಣೆಯನ್ನೇ ತೋರಲಿಲ್ಲ. ಅದೆಷ್ಟೋ ರೈತರು ಬೀಜ, ಗೊಬ್ಬರಗಳನ್ನ ತಂದಿಟ್ಟುಕೊಂಡು ಕಾದು ಕುಳಿತಿದ್ದರು ಸಹ ಮಳೆರಾಯ ಬರಲಿಲ್ಲ. ನಿನ್ನೆಯಿಂದ ಕೊಂಚ ಅಲ್ಲಲ್ಲಿ ಮಳೆಯಾಗಿದೆ. ಈಗ ಬೀಜ ಬಿತ್ತನೆ ಮಾಡಿದರು, ಚಿಗುರೊಡೆಯೋದಕ್ಕೆ ಸಮಸ್ಯೆ ಇಲ್ಲ. ಆದರೆ ಮಳೆ ಸಮಸ್ಯೆ ಎದುರಾದರೆ ಬೆಳೆ ಫಸಲು ಕೊಡದೆ ಇದ್ದರೆ ಏನು ಮಾಡೋದು..? ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಪ್ರಶ್ನೆಯೂ ರೈತರನ್ನ ಕಾಡುತ್ತಿದೆ.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ