ಮಡೆನೂರು ಮನು ಅತ್ಯಾ* ಕೇಸ್ : ದಿಢೀರ್ ಅಂತ ಕೇಸ್ ವಾಪಾಸ್ ಪಡೆದ ಸಂತ್ರಸ್ತೆ..!

ಬೆಂಗಳೂರು: ಮಡೆನೂರು ಮನು ತನ್ನ ಸಹಪಾಠಿಯ ಜೊತೆಗೆ ಚೆನ್ನಾಗಿದ್ದು, ಮದುವೆಯಾಗುವ ಭರವಸೆಯನ್ನು ನೀಡಿ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಮಡೆನೂರು ಮನು, ಇದೀಗ ಕಂಪ್ಲೀಟ್ ರಿಲೀಫ್ ಆಗಿದ್ದಾರೆ. ಜಾಮೀನು ಪಡೆದು ಹೊರ ಬಂದ ಮನು ವಿರುದ್ಧ ಹಾಕಿದ್ದ ಕೇಸ್ ಅನ್ನ ಸಂತ್ರಸ್ತೆ ವಾಪಾಸ್ ಪಡೆದಿದ್ದಾರೆ.

ಸಿನಿಮಾ ರಿಲೀಸ್ ಆದಂತ ಸಂದರ್ಭದಲ್ಲಿಯೇ ಮಡೆನೂರು ಮನು ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಲಾಗಿತ್ತು. ನಂಬಿಕೆ ದ್ರೋಹದ ಕೇಸ್ ಕೂಡ ಹಾಕಲಾಗಿತ್ತು. ಇದೀಗ ಇಬ್ಬರು ರಾಜೀಯಾಗಿದ್ದು, ಕೇಸ್ ಇತ್ಯರ್ಥಗೊಂಡಿದೆ. ಹೈಕೋರ್ಟ್ ಪೀಠವೂ ಈ ಪ್ರಕತಣವನ್ನ ಇತ್ಯರ್ಥಗೊಳಿಸಿದೆ. ಇಬ್ಬರು ಕೂಡ ರಾಜೀಗೆ ಒಪ್ಪಿಗೆ ನೀಡಿದ್ದರಿಂದ ಕೋರ್ಟ್ ಕೇಸನ್ನ ಇತ್ಯರ್ಥಗೊಳಿಸಿದೆ. ಕೋರ್ಟ್ ನಲ್ಲಿ ಕೇಸ್ ಇತ್ಯರ್ಥಗೊಳ್ಳುತ್ತಿದ್ದಂತೆ ಸಂತ್ರಸ್ತೆ ನಗುತ್ತಾ ಹೊರಗೆ ಬಂದಿದ್ದಾರೆ. ಇಬ್ಬರು ಜೊತೆಯಾಗಿಯೇ ಕಾಣಿಸಿಕೊಂಡಿದ್ದಾರೆ.

ಮಡೆನೂರು ಮನು ಹಾಗೂ ಸಂತ್ರಸ್ತೆ ಇಬ್ಬರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು‌. ಅಲ್ಲಿಂದ ಇಬ್ಬರು ಆತ್ಮೀಯವಾಗಿದ್ದರು. ಆದರೆ ಮಡೆನೂರು ಮನು ನನಗೆ ಅನ್ಯಾಯ ಮಾಡಿದ್ದಾನೆ, ನಂಬಿಸಿ ಮೋಸ ಮಾಡಿದ್ದಾನೆ. ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರ ಮಾಡಿದ್ದಾನೆ, ಗರ್ಭಪಾತ ಮಾಡಿಸಿದ್ದಾನೆ. ನನಗೆ ನ್ಯಾಯ ಬೇಕು ಅಂತ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆ ಬಳಿಕ ಪೊಲೀಸರು ಮಡೆನೂರು ಮನುನ ಅರೆಸ್ಟ್ ಮಾಡಿದ್ದರು. ಒಂದಷ್ಟು ದಿನ ಜೈಲಿನಲ್ಲಿದ್ದ ಮನು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ‌. ಮನು ಕನ್ನಡ ಇಂಡಸ್ಟ್ರಿಯ ದಿಗ್ಗಜರ ಬಗ್ಗೆ ಎಲ್ಲಾ ಹಗುರವಾಗಿ ಮಾತನಾಡಿದ್ದ ಕಾರಣಕ್ಕೆ ಇಡೀ ಇಂಡಸ್ಟ್ರಿ ಆತನ ಬಗ್ಗೆ ಬೇಸರ ಮಾಡಿಕೊಂಡಿತ್ತು. ಇದೀಗ ಕೇಸ್ ಕೂಡ ಇತ್ಯಾರ್ಥವಾಗಿದೆ. ಇಂಡಸ್ಟ್ರಿ ಮಡೆನೂರು ಮನುಗೆ ಅವಕಾಶ ಕೊಡುತ್ತಾ ನೋಡಬೇಕಿದೆ.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ