ಸರ್ಕಾರಿ ವಕೀಲರು vs ದರ್ಶನ್ ಪರ ವಕೀಲರು : ವಾದ – ಪ್ರತಿವಾದದ ಮಾಹಿತಿ ಇಲ್ಲಿದೆ

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅಂಡ್ ಟೀಂಗೆ ನೀಡಿದ್ದ ಜಾಮೀನು ಪ್ರಶ್ನಿಸಿ, ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಇಂದು ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ತೀರ್ಪು ಬರಲಿದೆ. ಈಗಾಗಲೇ ಎರಡು ಕಡೆಯ ವಕೀಲರಿಂದ ಸುಪ್ರೀಂ ಕೋರ್ಟ್ ನಲ್ಲಿ ವಾದ ಪ್ರತಿವಾದ ಶುರುವಾಗಿದೆ. ನ್ಯಾ.ಪರ್ದಿವಾಲಾ, ನ್ಯಾ.ಮಹದೇವನ್ ನೇತೃತ್ವದ ಪೀಠದಲ್ಲು ವಿಚಾರಣೆ ನಡೆಯುತ್ತಿದೆ. ಎಷ್ಟು ಅರ್ಜಿಗಳು ನಮ್ಮ ಮುಂದೆ ಇದಾವೆ ಎಂದು ಜಡ್ಜ್ ಕೇಳಿದಾಗ, ಏಳು ಅರ್ಜಿಗಳು ಎಂದು ಲೂತ್ರಾ ಮಾಹಿತಿ ನೀಡಿದ್ದಾರೆ. ಈ ಏಳು ಜನರ ಜಾಮೀನು ರದ್ದುಗೊಳಿಸಲು ಸರ್ಕಾರ ಅರ್ಜಿ ಸಲ್ಲಿಕೆ ಮಾಡಿದೆಯಾ ಎಂದು ಕೇಳಿದಾಗ ಲೂತ್ರಾ ಅವರು ಹೌದು ಎಂದಿದ್ದಾರೆ.

ಇದೇ ವೇಳೆ ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೋತ್ರಾ ಅವರಿಗೆ ಜಡ್ಜ್ ಪ್ರಶ್ನೆ ಕೇಳಿದ್ದು, ಈಗ ದೋಷಾರೋಪ ಪಟ್ಟಿ ದಾಖಲಾಗಿದೆಯೇ..? 17 ಜನ.. ಆದರೆ ಏಳು ಜನರ ಜಾಮೀನು ರದ್ಧತಿ ಬಗ್ಗೆ ಕೇಳ್ತಾ ಇದ್ದೀರಿ. ಚಾರ್ಜ್ ಶೀಟ್ ಆಗಿದ್ಯಾ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ಸದ್ಯ ಏಳು ಜನರ ಆದೇಶ ಬರಲಿ ಅದು ರದ್ಧಾದ ಮೇಲೆ ಇನ್ನುಳಿದವರ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಕೆ ಮಾಡ್ತೇವೆ ಎಂದು ಲೂತ್ರಾ ಅವರು ಉತ್ತರ ಕೊಟ್ಟಿದ್ದಾರೆ.

ಜೊತೆಗೆ ರೇಣುಕಾಸ್ವಾಮಿ ಏನು ಮಾಡಿದ, ಕಿಡ್ನ್ಯಾಪ್ ಆಗಿದ್ದು, ಕೊಲೆಯಾಗಿದ್ದರ ಸಂಪೂರ್ಣ ಮಾಹಿತಿಯನ್ನ ತಿಳಿಸಿದ್ದಾರೆ. ಸದ್ಯ ಸರ್ಕಾರದ ಪರ ವಕೀಲರಿಗೆ ವಾದ ಮಾಡಲು ಅವಕಾಶ ನೀಡಿದ್ದು, ಅವರ ಬಳಿಕ ದರ್ಶನ್ ಪರ ಸಿದ್ದಾರ್ಥ್ ದವೆ ಅವರು ವಾದ ಮಂಡನೆ ಮಾಡಲಿದ್ದಾರೆ.



source https://suddione.com/government-lawyers-vs-darshans-lawyers-here-is-the-information-on-the-arguments-and-counter-arguments/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ