ಬ್ಯಾಂಕ್ ಆಫ್ ಬರೋಡಾದಲ್ಲಿ 2,500 ಉದ್ಯೋಗವಕಾಶ : ಕರ್ನಾಟಕದಲ್ಲೇ 450 ಖಾಲಿ ಹುದ್ದೆ..!

ಬೆಂಗಳೂರು: ಸಾಕಷ್ಟು ಜನ ಸರ್ಕಾರಿ ಉದ್ಯೋಗಕ್ಕಾಗಿ ಕಾಯ್ತಾ ಇರ್ತಾರೆ. ಅಂಥವರಿಗೆ ಅದರಲ್ಲೂ ಬ್ಯಾಂಕ್ ಉದ್ಯೋಗಕ್ಕಾಗಿ ಕಾಯ್ತಾ ಇರುವವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಸರಿಸುಮಾರು 2,500 ಉದ್ಯೋಗಗಳ ಭರ್ತಿಗೆ ಬ್ಯಾಂಕ್ ಆಫ್ ಬರೋಡಾ ಮುಂದಾಗಿದೆ. ಅದರಲ್ಲಿ ಕರ್ನಾಟಕದಲ್ಲೂ ಸುಮಾರು 450 ಉದ್ಯೋಗಗಳು ಖಾಲಿ ಇದಾವೆ. ಹೀಗಾಗಿ ಆಸಕ್ತ, ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಆಹ್ವಾನ ಮಾಡಬಹುದು. ಏನೆಲ್ಲಾ ಬೇಕು, ಕೊನೆಯ ದಿನಾಂಕ ಯಾವುದು ಎಂಬೆಲ್ಲಾ ಮಾಹಿತಿ ಇಲ್ಲಿದೆ.

ಉದ್ಯೋಕಾಂಕ್ಷಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಹಾಕಬಹುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೆ ಪರೀಕ್ಷೆ ಇರಲಿದೆ. ಅದುವೆ 120 ಅಂಕಗಳಿಗೆ ನಡೆಯುವ ಪರೀಕ್ಷೆ ಇದಾಗಿದೆ. ಈಗಾಗಲೇ ಅರ್ಜಿ ಬಿಡುಗಡೆ ಮಾಡಿದ್ದು, ಯಾವುದೇ ಪದವಿ ಪಡೆದಿರುವವರು ಈ ಹುದ್ದೆಗೆ ಅರ್ಜಿ ಹಾಕಬಹುದಾಗಿದೆ.

ವಯಸ್ಸುನ ಮಿತಿ 21 ರಿಂದ 30 ವರ್ಷವಿರಬೇಕು. 48,480 ರಿಂದ 85,920 ಸಾವಿರದ ತನಕ ವೇತನ ಶ್ರೇಣಿ ಇರಲಿದೆ. ಇದಕ್ಕೆ ಅಪ್ಲೈ ಮಾಡಲು ಸಾಮಾನ್ಯ ಅಭ್ಯರ್ಥಿಗಳಿಗೆ 850 ರೂಪಾಯಿ ಹಾಗೂ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 175 ರೂಪಾಯಿ ಶುಲ್ಕವಿರಲಿದೆ. ಆನ್ಲೈನ್ ಟೆಸ್ಟ್, ಸೈಕೋಮೆಟ್ರಿಕ್ ಪರೀಕ್ಷೆ, ವೈಯಕ್ತಿಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ. ಅಂದ್ರೆ ಅಂದ್ರೆ ಜುಲೈ 4 ರಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು, ಜುಲೈ 24 ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ, http://www.bankofbaroda.co.in ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ