
ಬೆಂಗಳೂರು: ಕೋಲಾರದ ವಿಚಾರಕ್ಕೆ ಬಿಜೆಪಿ, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಟ್ವೀಟ್ ಮೂಲಕ ಹಲವು ಪ್ರಶ್ನೆಗಳನ್ನು ಕೇಳಿದೆ. ಕೋಲಾರ ಜನತೆಯ “ಕೈ”ಗೆ ಚಿಪ್ಪು ಕೊಟ್ಟು, ಈಗ ಚುನಾವಣೆಗಾಗಿ ಅವರ ಕಾಲು ಹಿಡಿಯಲು ಹೊರಟಿರುವ ಸಿಎಂ @siddaramaiah ಅವರೇ, ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ..!
ಕೋಲಾರ ಜನತೆಯ "ಕೈ"ಗೆ ಚಿಪ್ಪು ಕೊಟ್ಟು, ಈಗ ಚುನಾವಣೆಗಾಗಿ ಅವರ ಕಾಲು ಹಿಡಿಯಲು ಹೊರಟಿರುವ ಸಿಎಂ @siddaramaiah ಅವರೇ, ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ..!
ಕೋಲಾರದ ಶಾಸಕರಿಗೆ ಮಂತ್ರಿಗಿರಿ ನೀಡಲಿಲ್ಲ ಏಕೆ?
ಜಿಲ್ಲೆಯ ರೈತರ ಹಾಲಿಗೆ ಇನ್ನೂ ₹7 ಸಬ್ಸಿಡಿ ನೀಡಿಲ್ಲ ಏಕೆ?
ಮಾವು ಬೆಳೆಗಾರರಿಗೆ ನೀಡಿದ ಆಶ್ವಾಸನೆ ಈಡೇರಿಸಿಲ್ಲ ಏಕೆ?…
— BJP Karnataka (@BJP4Karnataka) December 27, 2023
ಕೋಲಾರದ ಶಾಸಕರಿಗೆ ಮಂತ್ರಿಗಿರಿ ನೀಡಲಿಲ್ಲ ಏಕೆ?
ಜಿಲ್ಲೆಯ ರೈತರ ಹಾಲಿಗೆ ಇನ್ನೂ ₹7 ಸಬ್ಸಿಡಿ ನೀಡಿಲ್ಲ ಏಕೆ?
ಮಾವು ಬೆಳೆಗಾರರಿಗೆ ನೀಡಿದ ಆಶ್ವಾಸನೆ ಈಡೇರಿಸಿಲ್ಲ ಏಕೆ?
ಸಿಎಂ ಆದ ತಕ್ಷಣವೇ ಜಿಲ್ಲೆಯನ್ನು ಜಿಹಾದಿಗಳಿಗೆ ಅಡವಿಟ್ಟಿದ್ದೇಕೆ?
ಶಾಂತಿ ಆವರಿಸಿದ್ದ ಕೋಲಾರದಲ್ಲಿ ಅಶಾಂತಿ ಸೃಷ್ಟಿಸಿದ್ದೇಕೆ?
ಕೋಲಾರದಲ್ಲಿ ರೈತ ಮಾಲ್ ಸ್ಥಾಪನೆ ಮಾಡುವುದು ಯಾವಾಗ?
ಸಿದ್ದರಾಮಯ್ಯರವರೇ, ಚಿನ್ನದ ಭೂಮಿ ಕೋಲಾರಮ್ಮನ ನಾಡಿಗೆ ಕಾಲಿಡುವುದಕ್ಕೆ ಯಾವ ನೈತಿಕತೆ ಉಳಿಸಿಕೊಂಡಿದ್ದೀರಿ. ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ..!? ಎಂದು ಟ್ವೀಟ್ ಮಾಡಿದೆ.
ಯುವನಿಧಿಯ ಬಗ್ಗೆಯೂ ಟ್ವೀಟ್ ಮಾಡಿ, ಯುವಜನತೆಗೆ ಸಿದ್ದರಾಮಯ್ಯ ಸರ್ಕಾರ ವಂಚಿಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿಯಲ್ಲಿ ಪದವಿ ಮತ್ತು ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳಿಗೆ ಮಾಸಿಕ ತಲಾ 3 ಸಾವಿರ ಹಾಗೂ 1500 ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಆದರೆ ಇಂದು 2022-23 ರಲ್ಲಿ ತೇರ್ಗಡೆ ಹೊಂದಿದ 3 ರಿಂದ 4 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಯುವನಿಧಿ ಬಿಡುಗಡೆ ಮಾಡುವ ಮೂಲಕ ತಾರಮ್ಯದ ನಡೆ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
The post ಕೋಲಾರ ಜನತೆಯ ‘ಕೈ’ಗೆ ಚಿಪ್ಪು : ಬಿಜೆಪಿಯಿಂದ ಪ್ರಶ್ನೆಗಳ ಸುರಿಮಳೆ first appeared on Kannada News | suddione.
[Collection]