
ಸುದ್ದಿಒನ್, ಹೊಸದುರ್ಗ, ಜನವರಿ. 05 : ವೈಯಕ್ತಿಕ ದ್ವೇಷದ ಹಿನ್ನೆಲೆ ಚಾಕು ಇರಿತಕ್ಕೆ ಒಳಗಾಗಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ತಾಲ್ಲೂಕಿನ ನಾಗನಕನಕಟ್ಟೆ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಮನೋಜ್ (25) ಎಂದು ಗುರುತಿಸಲಾಗಿದೆ. ಕುಟುಂಬದ ಸದಸ್ಯರ ನಡುವೆ ವೈಯಕ್ತಿಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ರಘು ಎಂಬ ವ್ಯಕ್ತಿಗೆ ಮನೋಜ್ ಚಾಕು ಇರಿದಿದ್ದಾನೆ. ಕೂಡಲೇ ಮನೋಜನನ್ನು ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಮೃತಪಟ್ಟಿದ್ದಾನೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
The post ಹೊಸದುರ್ಗ : ಚಾಕು ಇರಿದು ವ್ಯಕ್ತಿ ಸಾವು first appeared on Kannada News | suddione.
[Collection]
Tags
Chitradurga