ಶಾರುಖ್ ಖಾನ್ ಯಾರು ಎಂದ ಬೆನ್ನಲ್ಲೇ ಅಸ್ಸಾಂ CMಗೆ ಕಾಲ್ ಮಾಡಿದ ನಟ : ಏನು ಕೇಳಿದರೂ ಗೊತ್ತಾ..?

ಗುವಾಹಟಿ: ಪಠಾಣ್ ಸಿನಿಮಾದಿಂದ ಶಾರುಖ್ ಖಾನ್ ಗೆ ಈ ಬಾರಿ ಸಕ್ಸಸ್ ಸಿಗಲಿದೆ. ಸತತ ಸೋಲು ಕಂಡ ಶಾರುಖ್ ಖಾನ್ ಪಠಾಣ್ ಮೇಲೆ ಬಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಸಿನಿಮಾದ ಸಾಂಗ್ ರಿಲೀಸ್ ಆದ ಮೇಲಿಂದಾನೇ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಸೆನ್ಸಾರ್ ಮಂಡಳಿಯಿಂದಾನೂ ಒಂದಷ್ಟು ಸೀನ್ ಗಳನ್ನು ತೆಗೆದು ಹಾಕಿ, ರಿಲೀಸ್ ಮಾಡಲು ಸೂ ನೆ ನೀಡಲಾಗಿತ್ತು. ಇದೀಗ ಪಠಾಣ್ ಸಿನಿಮಾದ ವಿಚಾರ ಅಸ್ಸಾಂ ಸಿಎಂ ತನಕ ಕರೆ ಹೋಗಿದೆ.

ನಟ ಶಾರೂಖ್ ಖಾನ್ ಅಸ್ಸಾಂ ಸಿಎಂ ಗೆ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಂತ್ ಶರ್ಮಾ, ಈ ಮೊದಲು, ಶಾರುಖ್ ಖಾನ್ ಎಂದರೆ ಯಾರು..? ನಾನು ಅವರ ಸಿನಿಮಾಗಳನ್ನು ನೋಡುವುದಿಲ್ಲ. ಹೀಗಾಗಿ ನನಗೆ ಅವರ ಪರಿಚಯ ಅಷ್ಟಾಗಿ ಇಲ್ಲ ಎಂದು ಹೇಳಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು.

ಈ ವಿಚಾರ ವೈರಲ್ ಆದ ಬೆನ್ನಲ್ಲೇ ಶಾರುಖ್ ಖಾನ್ ಖುದ್ದು, ಸಿಎಂ ಶರ್ಮಾ ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಶರ್ಮಾ, ಶಾರುಖ್ ಖಾನ್ ನನಗೆ ಕರೆ ಮಾಡಿದ್ದರು. ಶಾರುಖ್ ಖಾನ್ ಅವರ ಪಠಾಣ್ ಸಿನಿಮಾದ ವಿರುದ್ಧ ಗುವಾಹಟಿಯಲ್ಲಿ ನಡೆದ ಅಹಿತಕರ ಘಟನೆ ಬಗ್ಗೆ ಮಾತನಾಡಿದರು. ಕಳವಳ ವ್ಯಕ್ತಪಡಿಸಿದರು. ಈ ನೆಲದ ಕಾನೂನು ಕಾಪಾಡುವುದು ನಮ್ಮ ಸರ್ಕಾರದ ಕರ್ತವ್ಯ. ಘಟನೆ ಬಗ್ಗೆ ನಮ್ಮ ಸರ್ಕಾರ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

The post ಶಾರುಖ್ ಖಾನ್ ಯಾರು ಎಂದ ಬೆನ್ನಲ್ಲೇ ಅಸ್ಸಾಂ CMಗೆ ಕಾಲ್ ಮಾಡಿದ ನಟ : ಏನು ಕೇಳಿದರೂ ಗೊತ್ತಾ..? first appeared on Kannada News | suddione.



source https://suddione.com/actor-who-called-assam-cm-after-asking-who-is-shahrukh-khan-do-you-know-what-he-asked/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ