ನವದೆಹಲಿ: ತೈಲ ಸಂಸ್ಥೆಗಳು ಪೈಪೋಟಿಗೆ ಇಳಿದಂತೆ ತೈಲ ದರ ಹೆಚ್ಚಳದಲ್ಲಿ ನಿರತವಾಗಿವೆ. ಇಂದು ಲೀಟರ್ ಪೆಟ್ರೋಲ್ ದರ 35 ಪೈಸೆ ಹೆಚ್ಚಳ ಮಾಡಲಾಗಿದೆ. ಡೀಸೆಲ್ ದರದಲ್ಲಿ ಲೀಟರ್ ಗೆ 9 ಪೈಸೆ ಹೆಚ್ಚಾಗಿದೆ.
ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ಇದೀಗ 100. 56 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್ ಗೆ 89. 62 ರೂಪಾಯಿ. ದೇಶದ ಹಲವು ಮಹಾ ನಗರಗಳಲ್ಲಿ ಪೆಟ್ರೋಲ್ ದರ ಈಗಾಗಲೇ ಶತಕದ ಗಡಿ ದಾಟಿದೆ.
ತೈಲ ಉತ್ಪನ್ನಗಳ ದರ ಹೆಚ್ಚಳ ಹುಣದುಬ್ಬರಕ್ಕೆ ದಾರಿ ಮಾಡಿಕೊಡಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
Tags
Nation
