ಮುಂಬೈ: ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ 14 ಬ್ಯಾಂಕ್ ಗಳಿಗೆ ಆರ್ ಬಿ ಐ ದಂಡ ವಿಧಿಸಿದೆ.
ಬ್ಯಾಂಕ್ ಆಫ್ ಇಂಡಿಯಾ, ಬರೋಡಾ ಬ್ಯಾಂಕ್ ಕೂಡ ಇದರಲ್ಲಿ ಸೇರಿದೆ.
ರಿಸರ್ವ್ ಬ್ಯಾಂಕ್ ನಿಯಮಗಳು ಸ್ಪಷ್ಟವಾಗಿದ್ದರೂ ಅದನ್ನು ಪಾಲಿಸುವಲ್ಲಿ ಈ ಬ್ಯಾಂಕ್ ಗಳು ವಿಫಲವಾಗಿದೆ ಎಂದು ಆರೋಪಿಸಲಾಗಿದೆ.
ಉಲ್ಲಂಘನೆ ಆರೋಪ ಸಾಬೀತಾಗಿರುವ ಕಾರಣ ದಂಡ ವಿಧಿಸಲಾಗಿದೆ.
ಗ್ರಾಹಕರ ಹಿತಾಸಕ್ತಿ ಕಾಪಾಡಲು ಈ ಬ್ಯಾಂಕ್ ಗಳು ವಿಫಲವಾಗಿದೆ ಎಂದು ಆರ್ ಬಿ ಐ ಹೇಳಿದೆ.
Tags
Nation
