
Shani Deva: ಶನಿದೇವನ ಅಪಾರ ಕೃಪೆ ಈ ರಾಶಿಯವರ ಮೇಲೆ: ಸಾಡೇಸಾತಿಯಲ್ಲೂ ಕಾಡುವುದಿಲ್ಲವಂತೆ ಶನಿಯ ಪ್ರಭಾವ!
Shani Deva: ಶನಿದೇವನನ್ನು ಒಂಬತ್ತು ಗ್ರಹಗಳಲ್ಲಿ ಅತ್ಯಂತ ನಿರ್ದಯ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಕರ್ತನಾದ ವಿಷ್ಣು ಅವನಿಗೆ ನ್ಯಾಯಾಧೀಶ ಎನ್ನುವ ಪ್ರಮುಖ ಜವಾಬ್ದಾರಿಯನ್ನು ವಹಿಸಿದ್ದಾನೆ. ಈ ಜವಾಬ್ದಾರಿಯೇ ಶನಿದೇವನ ಈ ಸ್ವಭಾವಕ್ಕೆ ಕಾರಣವಾಗಿದೆ. ಅವನು ಈ ಜವಾಬ್ದಾರಿಯನ್ನು ಸಂಪೂರ್ಣ ಭಕ್ತಿಯಿಂದ ಪೂರೈಸುತ್ತಾನೆ. ಯಾವುದೇ ತಾರತಮ್ಯವಿಲ್ಲದೆ ಕರ್ಮದ ಆಧಾರದ ಮೇಲೆ ಸೂಕ್ತ ಫಲಿತಾಂಶಗಳನ್ನು ಕರುಣಿಸುತ್ತಾನೆ. ಹಾಗಂತ ಶನಿದೇವ ಯಾವಾಗಲೂ ಕೆಡುಕನ್ನೇ ಮಾಡುತ್ತಾನೆ, ಎಲ್ಲಾ ಕಷ್ಟ ನಷ್ಟಗಳಿಗೆ ಶನೀಶ್ವರನೇ ಕಾರಣ ಎಂದರೆ ಅದು ಕೂಡಾ ಸರಿಯಲ್ಲ. ಕೆಲವೊಮ್ಮೆ ಶನಿ ದೆಸೆಯಲ್ಲಿ ಕೂಡಾ ಒಳಿತೇ ಆಗುತ್ತದೆ.
ಹೌದು, ಶನಿಗೆ ತುಂಬಾ ಪ್ರಿಯವಾದ ಕೆಲವು ರಾಶಿಗಳಿವೆ. ಈ ರಾಶಿಯ ಅಡಿಯಲ್ಲಿ ಯಾರು ಜನಿಸಿರುತ್ತಾರೆಯೋ ಅವರ ಮೇಲೆ ಶನಿದೇವನ ಆಶೀರ್ವಾದ ಹೇರಳವಾಗಿ ಇರುತ್ತದೆ. ಅವರ ಜೀವನದ ಪ್ರತಿಯೊಂದು ಆಸೆಯನ್ನು ಶನಿದೇವ ಪೂರೈಸುತ್ತಾನೆಯಂತೆ. ಅವರ ಜೀವನದಲ್ಲಿ ಯಾವುದೇ ರೀತಿಯ ಅಡೆತಡೆಗಳು ಎದುರಾಗದಂತೆ ಕಾಯುತ್ತಾನೆಯಂತೆ.
ಸಾಮಾನ್ಯವಾಗಿ ಶನಿದೆಸೆ ಎಂದರೆ ಎರಡೂವರೆ ವರ್ಷ, ಏಳೂವರೆ ವರ್ಷ ಇರುತ್ತದೆ. ಈ ಕಾಲ ಅನೇಕರ ಜೀವನದಲ್ಲಿ ಕಷ್ಟದಿಂದಲೇ ಕೂಡಿರುತ್ತದೆ. ಆದರೆ ಐದು ರಾಶಿಯವರಿಗೆ ಮಾತ್ರ ಶನಿದೆಸೆಯ ಸಮಯದಲ್ಲಿಯೂ ಶನಿದೇವ ಒಳ್ಳೆಯದನ್ನೇ ಮಾಡುತ್ತಾನೆಯಂತೆ.
ಶನಿ ದೇವರಿಗೆ ಅತ್ಯಂತ ಪ್ರಿಯವಾದ ರಾಶಿಗಳು
ಈ ರಾಶಿ ಎಂದರೆ ಶನಿ ದೇವನಿಗೆ ತುಂಬಾ ಪ್ರಿಯ. ಈ ರಾಶಿಯಲ್ಲಿ ಜನಿಸಿದವರು ಯಾವಾಗಲೂ ಶನಿ ದೇವನ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ. ಅವನ ಆಶೀರ್ವಾದದಿಂದ ಮಕರ ರಾಶಿಯವರು ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಮಕರ ರಾಶಿಯವರು ತಮ್ಮ ಜೀವನದಲ್ಲಿ ಯಾವತ್ತೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಹೇಳಲಾಗುತ್ತದೆ. ಒಂದು ವೇಳೆ ಯಾವತ್ತಾದರೂ ಇವರ ಜೀವನದಲ್ಲಿ ಹಣದ ಸಮಸ್ಯೆ ಎದುರಾದರೂ ಪರಿಹಾರ ಕೂಡಾ ಜೊತೆಯಲ್ಲಿಯೇ ಇರುತ್ತದೆಯಂತೆ. ಇವರನ್ನು ಜೀವನದಲ್ಲಿ ಸಾಲಬಾಧೆ ಕಾಡುವುದಿಲ್ಲ. ಇವರು ಯಾರಲ್ಲಿಯಾದರೂ ಸಾಲ ತೆಗೆದುಕೊಂಡರೂ ಅದನ್ನು ಬೇಗನೆ ಮರುಪಾವತಿಸುತ್ತಾರೆ. ಶನಿಯ ಆಶೀರ್ವಾದದಿಂದಾಗಿ, ಅವರು ಸಮಾಜದಲ್ಲಿ ಗಣನೀಯ ಗೌರವವನ್ನು ಪಡೆಯುತ್ತಾರೆ.
ಕುಂಭ ರಾಶಿಯ ಅಧಿಪತಿ ಕೂಡಾ ಶನಿದೇವನೇ. ಹಾಗಾಗಿ ಇವರ ಮೇಲೆ ಶನಿಯ ವಿಶೇಷ ಆಶೀರ್ವಾದ ಇರುತ್ತದೆ. ಇವರ ಮೇಲೆ ಶನಿ ದೇವನ ಕೃಪೆ ತುಸು ಜಾಸ್ತಿಯೇ ಇರುವುದು. ಇವರು ಜೀವನದಲ್ಲಿ ಯಾವತ್ತೂ ಸಂಪತ್ತಿನ ಕೊರತೆಯನ್ನು ಅನುಭವಿಸುವುದಿಲ್ಲ. ಶನಿಯ ಆಶೀರ್ವಾದದಿಂದ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. ಶನಿಯ ಕೃಪೆಯು ವ್ಯವಹಾರ, ವೃತ್ತಿ ಮತ್ತು ಕುಟುಂಬದಲ್ಲಿ ಸ್ಥಿರತೆಯನ್ನು ಕಾಪಾಡುತ್ತದೆ. ಜೀವನವು ಸಮತೋಲನದಲ್ಲಿರುವುದು. ಗೌರವ ಹೆಚ್ಚಾಗುವುದು.
ಧನು ರಾಶಿ (Sagittarius)
ಧನು ರಾಶಿಯ ಜನರಿಗೆ ಶನಿಯೇ ರಕ್ಷಕ. ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಶನಿದೇವ ಇವರನ್ನು ರಕ್ಷಿಸುತ್ತಾನೆ ಎನ್ನಲಾಗಿದೆ. ದಾರಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕುತ್ತಾನೆ. ಅವರು ತಮ್ಮ ವೃತ್ತಿಜೀವನದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ. ಶನಿಯ ಕೃಪೆಯಿಂದ, ಅವರ ಆರೋಗ್ಯವು ಉತ್ತಮವಾಗಿರುವುದು. ಅವರು ಜೀವನದ ಎಲ್ಲಾ ಸಂತೋಷವನ್ನು ಅನುಭವಿಸುತ್ತಾರೆ. ಆರ್ಥಿಕವಾಗಿ ಸದೃಢವಾಗಿರುತ್ತಾರೆ. ಅಗತ್ಯವಿರುವವರಿಗೆ ದಾನ ಮಾಡುವ ಮೂಲಕ ಇದರ ಶುಭ ಫಲವನ್ನೂ ಪಡೆಯುತ್ತಾರೆ.
Shani Deva: ತುಲಾ ರಾಶಿ (Libra)
ಈ ರಾಶಿಯಲ್ಲಿ ಜನಿಸಿದವರು ಬಲವಾದ ಇಚ್ಛಾಶಕ್ತಿ ಮತ್ತು ಏಕಾಗ್ರತೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತುಲಾ ರಾಶಿಯವರ ಮೇಲೆ ಕೂಡಾ ಶನಿಯ ವಿಶೇಷ ಆಶೀರ್ವಾದ ಇರುವುದು. ಇವರ ಜೀವನದಲ್ಲಿ ಯಾವುದೇ ಕಷ್ಟ ಇರುವುದಿಲ್ಲ. ಅದು ಕೆಲಸವಾಗಲಿ ಅಥವಾ ವ್ಯವಹಾರವಾಗಲಿ, ಪ್ರತಿಯೊಂದು ಕ್ಷೇತ್ರದಲ್ಲೂ ಇವರಿಗೆ ಯಶಸ್ಸು ಸಿಗುವುದು. ಈ ರಾಶಿಯವರು ಶನಿದೇವನನ್ನು ನಿಯಮಿತವಾಗಿ ಪೂಜಿಸುವುದರಿಂದ, ಅವರ ಹಾದಿಯಲ್ಲಿರುವ ಎಲ್ಲಾ ಅಡೆತಡೆಗಳು ದೂರವಾಗುವುದು.
Shani Deva: ವೃಷಭ ರಾಶಿ (Taurus)
ವೃಷಭ ರಾಶಿಯವರ ಮೇಲೆ ಕೂಡಾ ಶನಿದೇವನ ಆಶೀರ್ವಾದ ಇರುವುದು. ವೃಷಭ ರಾಶಿಯ ಅಧಿಪತಿ ಗ್ರಹ ಶುಕ್ರ. ಶುಕ್ರ ಮತ್ತು ಶನಿಯ ಮಧ್ಯೆ ಬಲವಾದ ಸಂಬಂಧವಿರುತ್ತದೆ. ಆದ್ದರಿಂದ, ವೃಷಭ ರಾಶಿಯವರ ಮೇಲೆ ಶನಿದೇವನ ಕೃಪೆ ಹೆಚ್ಚಿರುತ್ತದೆ. ಶನಿದೇವನ ಆಶೀರ್ವಾದದಿಂದ, ವೃಷಭ ರಾಶಿಯವರು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಶನಿಯ ಪ್ರಭಾವದ ಮೂಲಕ ತಮ್ಮ ಕುಟುಂಬ ಮತ್ತು ವೃತ್ತಿಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ. ಶನಿದೇವನ ಆಶೀರ್ವಾದದಿಂದ, ಅವರ ಯಶಸ್ಸು ನಿರಂತರವಾಗಿ ಮುಂದುವರಿಯುತ್ತದೆ.