
Karntaka Rains: ಮಂಡ್ಯ, ಬೆಳಗಾವಿ ಜಿಲ್ಲೆಯ ಹಲವು ಭಾಗದಲ್ಲಿ ಮಳೆ, ಎಲ್ಲಿ ಎಷ್ಟು
ಬೆಂಗಳೂರು: ಮಂಡ್ಯ, ಬೆಳಗಾವಿ, ಗದಗ, ಬಾಗಲಕೋಟೆ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಹಲವೆಡೆ ಕಳೆದ 24 ಗಂಟೆ ಅವಧಿಯಲ್ಲಿ ಉತ್ತಮ ಮಳೆಯಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹಳೆಬೀಡು ಗ್ರಾಮದಲ್ಲಿ 150 ಮಿ.ಮೀ ಅತ್ಯಧಿಕ ಮಳೆಯಾಗಿದೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ನಂದಿಕೇಶ್ವರ ಗ್ರಾಮದಲ್ಲಿ 121 ಮಿ.ಮೀ, ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಕೊಳತ್ತೂರಿನಲ್ಲಿ 17.5 ಮಿ.ಮೀ, ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯಲ್ಲಿ 114.3 ಮಿ.ಮೀ, ಮಂಡ್ಯ ತಾಲ್ಲೂಕಿನ ಜಿ.ಮಲ್ಲಿಗೆರೆಯಲ್ಲಿ 114 ಮಿ.ಮೀ ಮಳೆಯಾಗಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಅಕ್ಕತಂಗೇರ ಹಾಳದಲ್ಲಿ 105 ಮಿ.ಮೀ, ರಾಮದುರ್ಗ ತಾಲ್ಲೂಕಿನ ನರಸಾಪುರದಲ್ಲಿ 104 ಮಿ.ಮೀ, ತಿ.ನರಸೀಪುರ ತಾಲ್ಲೂಕಿನ ದೊಡ್ಡೇಬಾಗಿಲಿನಲ್ಲಿ 100 ಮಿ.ಮೀ, ಸವದತ್ತಿ ತಾಲ್ಲೂಕಿನ ಅರಟಗಲ್‌ನಲ್ಲಿ 98 ಮಿ.ಮೀ ಮಳೆಯಾಗಿದೆ.
ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ 95.2 ಮಿ.ಮೀ, ಹುಕ್ಕೇರಿ ತಾಲ್ಲೂಕಿನ ಬುಗತೆ ಆಲೂರಿನಲ್ಲಿ 94 ಮಿ.ಮೀ, ಪಾಂಡವಪುರ ತಾಲ್ಲೂಕಿನ ಬಳಘಟ್ಟದಲ್ಲಿ 93.5 ಮಿ.ಮೀ. ತಿ.ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ 92.75 ಮಿ.ಮೀ, ಗುಳೇದಗುಡ್ಡ ತಾಲ್ಲೂಕಿನ ಎಸ್.ಪಿ.ನಾಗರಾಳದಲ್ಲಿ 92 ಮಿ.ಮೀ ಮಳೆಯಾಗಿದೆ.
ರಾಮದುರ್ಗ ತಾಲ್ಲೂಕಿನ ಕದಂಪುರದಲ್ಲಿ 91 ಮಿ.ಮೀ, ಸವದತ್ತಿ ತಾಲ್ಲೂಕಿನ ಹೂಲಿಕಟ್ಟಿಯಲ್ಲಿ 90.5 ಮಿ.ಮೀ, ಬೈಲಹೊಂಗಲ ತಾಲ್ಲೂಕಿನ ಮೆಕಲಮರಡಿಯಲ್ಲಿ 88 ಮಿ.ಮೀ, ಮಳವಳ್ಳಿ ತಾಲ್ಲೂಕಿನ ಸರಗೂರಿನಲ್ಲಿ 82.5 ಮಿ.ಮೀ,ಮಳೆಯಾಗಿದೆ.
ಗದಗ ಜಿಲ್ಲೆ ನರಗುಂದ ಹಾಗೂ ಪಾಂಡವಪುರ ತಾಲ್ಲೂಕಿನ ಗುಮನಹಳ್ಳಿಯಲ್ಲಿ ತಲಾ 82 ಮಿ.ಮೀ, ಚಾಮರಾಜನಗರ ತಾಲ್ಲೂಕಿನ ಕಾಗಲವಾಡಿಯಲ್ಲಿ 81 ಮಿ.ಮೀ. ರಾಮದುರ್ಗ ತಾಲ್ಲೂಕಿನ ಚುಂಚನೂರಿನಲ್ಲಿ 79.75 ಮಿ.ಮೀ, ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲಿನಲ್ಲಿ 79.5 ಮಿ.ಮೀ ಮಳೆಯಾಗಿದೆ.
ಬಸವನಬಾಗೇವಾಡಿ ತಾಲ್ಲೂಕಿನ ವಡವಡಗಿ, ಗದಗ ತಾಲ್ಲೂಕಿನ ಕಡಾಡಿ ಹಾಗೂ ರಾಯಭಾಗ ತಾಲ್ಲೂಕಿನ ಹಾರೂಗೇರಿಯಲ್ಲಿ ತಲಾ 78.5 ಮಿ.ಮೀ, ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿಯಲ್ಲಿ 77.25 ಮಿ.ಮೀ, ಸವದತ್ತಿ ತಾಲ್ಲೂಕಿನ ಸಿರಸಂಗಿಯಲ್ಲಿ 77 ಮಿ.ಮೀ ಮಳೆಯಾಗಿದೆ.
ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ 73.75 ಮಿ.ಮೀ., ಕೊಪ್ಪಳ ತಾಲ್ಲೂಕಿನ ಗುಳದಳ್ಳಿಯಲ್ಲಿ 73.5 ಮಿ.ಮೀ, ತುಮಕೂರು ಜಿಲ್ಲೆ ಶುರಾ ತಾಲ್ಲೂಕಿನ ತರೂರಿನಲ್ಲಿ 72.5 ಮಿ;ಮೀ, ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ 70.5 ಮಿ.ಮೀ, ಚಿಕ್ಕೋಡಿಯಲ್ಲಿ 70.2 ಮಿ.ಮೀ ಮಳೆಯಾಗಿದೆ.